ವೃತ್ತಕ್ಕೆ ದಿ. ಆರ್.ಎನ್.ದೇಶಪಾಂಡೆ ನಾಮಕರಣಕ್ಕೆ ಮನವಿ

ಮುಳಗುಂದ: ಪಟ್ಟಣದ ಹೃದಯ ಭಾಗದ ಗಾಂಧಿಕಟ್ಟಿಯ ಹತ್ತಿರ ವೃತ್ತ ಪ.ಪಂ ಮಾಜಿ ಸದಸ್ಯ ದಿ.ಆರ್.ಎನ್ ದೇಶಪಾಂಡೆ ಅವರ ಹೆಸರು ನಾಮಕರಣ ಮಡಬೇಕು. ಎಂದು ಉನ್ನತಿ ಮಹಿಳಾ ಸಮಾಜ ಸೇವೆ ಹಾಗೂ ವಿವಿದೋದ್ದೇಶಗಳ ಸಂಘ, ಜೈ ಮಾತಾ ಜೀಜಾಬಾಯಿ ಕ್ಷತ್ರೀಯ ಮರಾಠ ಮಹಿಳಾ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ.ಪಂ.ಮುಖ್ಯಾಧಿಕಾರಿ ಎಂಎಸ್.ಬೆಂತೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಅಹಾರ ವಿತರಣೆ

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಹಾಗೂ ದೊಡ್ಡೂರ ಸೂರಣಗಿ ಕೊಂಚಿಗೇರಿ ಸೇರಿ ಗ್ರಾಮೀಣ ಪ್ರದೇಶದಲ್ಲಿ ತೆರಳಿ ಸಿದ್ದಪಡಿಸಿದ ಆಹಾರದ ಬಾಕ್ಸ್ ವಿತರಿಸಿದರು.

ಸಸಿ ವಿತರಿಸಿದ ಅರಣ್ಯಾಧಿಕಾರಿ

ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಸಿದ್ದರಾಮ ವಿಭೂತಿ ಹೇಳಿದರು.

ತಾಲೂಕಾಸ್ಪತ್ರೆಗೆ ಜಿಲ್ಲಾಧಿಕಾರಿ ಸುಂದರೇಶ ಬಾಬು ಭೇಟಿ

ಜಿಲ್ಲಾ‌ ವರಿಷ್ಠಾಧಿಕಾರಿ ಯತೀಶ್ ಎನ್, ತಹಸೀಲ್ದಾರ್ ಜೆ.ಬಿ.ಜಕ್ಕನಗೌಡ, ಹೊಳೆ ಆಲೂರ ಕಂದಾಯ ನಿರೀಕ್ಷಕ ರವಿ ಬಾರಕೇರ, ಸಿಡಿಪಿಒ ಬಿ.ಎಂ.ಮಾಳೇಕೊಪ್ಪ, ಭೀಮಸೇನ್ ಜೋಶಿ ಆಸ್ಪತ್ರೆಯ ವೈದ್ಯಾಧಿಕಾರಿ ಎಚ್.ಎಲ್.ಗಿರಡ್ಡಿ, ಸಿಪಿಐ ಸುನೀಲ್ ಸವದಿ, ಪಿಎಸ್ ಐ ವಿನೋದ ಪೂಜಾರಿ ಮುಂತಾದವರಿದ್ದರು.

ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಲಸಿಕೆ ಬಗ್ಗೆ ಮುಖ್ಯ ಮಾಹಿತಿ

ಬೆಂಗಳೂರು: ಈಗಾಗಲೇ ರಾಜ್ಯದ ಬಹುತೇಕರು ಅದ್ಯಯನ ಅಥವಾ ಉದ್ಯೋಗಕ್ಕಾಗಿ ವಿದೇಶಗಳನ್ನೆ ನೆಚ್ಚಿಕೊಂಡಿದ್ದಾರೆ. ಈ ಉದ್ದೇಶದಿಂದ ವಿದೇಶಕ್ಕೆ ತೆರಳುವವರು, ಜೂನ್.1 ರಿಂದ ಕೋವಿಡ್ ಲಸಿಕೆ ಪಡೆಯಬಹುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ಬ್ಲ್ಯಾಕ್ ಫಂಗಸ್ ಕಣ್ಣಿಗೆ ತಲುಪಿದರೆ ಕಣ್ಣು ತೆಗೆಯಲೇ ಬೇಕಾಗುತ್ತಂತೆ!

ಬೆಂಗಳೂರು: ಬ್ಲಾಕ್ ಫಂಗಸ್ ಕಣ್ಣಿಗೆ ತಲುಪಿದ ಮೇಲೆ ಕಣ್ಣು ತೆಗೆಯಲೇ ಬೇಕಾಗುತ್ತದೆ. ಅದು ಮಿದುಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಮೊದಲು ಡೆಂಟಲ್ ಪರೀಕ್ಷೆ ಮಾಡುತ್ತಾರೆ. ಬಳಿಕ ಕಣ್ಣಿನ ತಜ್ಞರು ಎಲ್ಲಾ ಸೇರಿ ಪರೀಕ್ಷೆ ಮಾಡುತ್ತಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.

ಜೂನ್ 15 ರಿಂದ ಶೈಕ್ಷಣಿಕ ವರ್ಷ ಆರಂಭ

ಬೆಂಗಳೂರು: ಶಾಲೆಗಳಿಗೆ ರಜೆ ಮುಗಿದು ಇನ್ನೇನು ಶಾಲೆಗಳು ಆರಂಭವಾಗುವಷ್ಟರಲ್ಲಿ ಮತ್ತೆ ಸರ್ಕಾರ ಜೂನ್ 14 ರವರೆಗೆ ಬೇಸಿಗೆ ರಜೆ ವಿಸ್ತರಿಸಿದೆ. ಆದರೆ ಜೂನ್ 15 ರಿಂದ 8, 9, 10ನೆ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಇನ್ನು,ಪ್ರಾಥಮಿಕ ಶಾಲೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.

ಕೋವಿಡ್ ಚಿಕಿತ್ಸೆಗೆ ₹5 ಲಕ್ಷದವರೆಗೆ ಸಾಲ: ಸಾರ್ವಜನಿಕ ವಲಯದ ಬ್ಯಾಂಕುಗಳು ಘೋಷಣೆ

ಕೋವಿಡ್ ಎರಡನೇ ಅಲೆ ದೇಶಾದ್ಯಂತ ಹೆಚ್ಚು ವ್ಯಾಪಿಸಿ ಸಂದಿಗ್ಧ ಪರಿಸ್ಥಿತಿ ಉಂಟು ಮಾಡಿದ್ದು, ಇದರಿಂದ ಅಸುರಕ್ಷಿತ ಸಾಲ ನೀಡುಲು ನಿರ್ಧಾರ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ

ಲಕ್ಷ್ಮೇಶ್ವರದಲ್ಲಿ ಗೊಬ್ಬರ ಖರೀದಿಗಾಗಿ ಕ್ಯೂ..!

ಲಕ್ಷ್ಮೇಶ್ವರ: ಜಿಲ್ಲೆಯಾದ್ಯಂತ ಮುಂಗಾರು ಬಿತ್ತನೆ ಅಬ್ಬರ ಜೋರಾಗಿದೆ. ಮುಂಗಾರು ಹಂಗಾಮಿನ ಹತ್ತಿ, ಹೆಸರು, ಶೇಂಗಾ, ಗೋವಿನ ಜೋಳ ಬಿತ್ತನೆಗೆ ಬೀಜ, ಗೊಬ್ಬರ ಖರೀದಿಯಲ್ಲಿ ರೈತರು ತಲ್ಲೀನರಾಗಿದ್ದಾರೆ.

ಕರೊನಾ ಅಲೆಯ ಮಧ್ಯೆ ರಾಜಕೀಯ ಅಲೆಯ ಅಬ್ಬರ

ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳ ವರೆಗೂ ಎಚ್ಚರಿಕೆ ಗಂಟೆಯನ್ನು ಬಾರಿಸಿರುವ ಕರೊನಾ ಎರಡನೆಯ ಅಲೆಯು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆಯಾದರೂ ಫಂಗಸ್‌ನ (ಶಿಲೀಂಧ್ರ) ಕಾಟ ಮಾತ್ರ ಮುಂದುವರಿಯುತ್ತಲೇ ಇದೆ. ಸದ್ಯ ಲಭ್ಯವಿರುವ ಲಿಪೊಸೊಮಲ್ ಆಂಪೊಟೆರಿಸಿನ್ ಬಿ ಔಷಧವನ್ನು ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾದವರಿಗೆ ನೀಡಲಾಗುತ್ತಿದೆ.

ಪಿ.ಲಂಕೇಶ್ ರ ಶೋಧ ಸಾರಾ ಅಬೂಬಕರ್..!

ಆ ಕಾಲದಲ್ಲಿ ಮುಸ್ಲಿಂ ಬರಹಗಾರರಿಗೆ ಒಂದು ಬರಹದ ಪ್ರೋತ್ಸಾಹವಿರಲಿಲ್ಲ. ಆಗ ಸಾ.ರಾ ಅಬೂಬಕರ್ ರ ಬರಹದ ಪ್ರೋತ್ಸಾಹಕ್ಕೆ ಬಂದವರು ಪಿ.ಲಂಕೇಶ್‌ರು. ಹಾಗಾಗಿ ಸಾ.ರಾ.ಅಬೂಬಕರ್‌ರ ಮೊದಲ ಗುರುಗಳು ಪಿ.ಲಂಕೇಶ್‌ರು ಅಂದರೆ ಅಡ್ಡಿಯಿಲ್ಲ. ಮುಸ್ಲಿಂ ಮಹಿಳೆಯರಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕಲು ಪ್ರತ್ಯೇಕ ವೇದಿಕೆಗಳೇ ಇಲ್ಲದ ಕಾಲದಲ್ಲಿ, ಮುಸ್ಲಿಂ ಮಹಿಳೆಯರ ದನಿಯಾಗಿ ಸಾಹಿತ್ಯದ ಮೂಲಕ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಸಿದ ಲೇಖಕಿ ಸಾ.ರಾ.ಅಬೂಬಕರ್ ರವರು. ಸಾ.ರಾ.ಅಬೂಬಕರ್ ಹುಟ್ಟಿದ್ದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮದಲ್ಲಿ.

ಬಿಸ್ಲಾಗ ನಿಂತಕಿಯ ನೆರಳಿನಾಟ

ಇದು ‘ಸುದ್ದಿ ಕಾಲ’! ಹಾಗಂದರೆ ಏನೆಂದು ತಿಳಿದಿರಬೇಕಲ್ಲವೆ? ಹೌದು ಅದೇ ‘ಸುದ್ದಿ’ ವಿಷಯ. ಕೆಟ್ಟ ಸುದ್ದಿಯ ಸುರಿಮಳೆ. ಈಗ ತಿಳಿಯಿತಲ್ಲ ಸಾವಿನ ಸುದ್ದಿ ಎಂದು? ಇತ್ತೀಚೆಗೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮವರು, ತಮ್ಮವರು, ಬಹಳ ಹತ್ತಿರದಿಂದ ಕಂಡವರು, ಸಣ್ಣ ವಯಸ್ಸಿನವರು, ವಯಸ್ಸಾದವರು, ಹೀಗೆ ಒಬ್ಬರಲ್ಲ ಒಬ್ಬರು ನಿತ್ಯ ನಮ್ಮನ್ನಗಲುತ್ತಿದ್ದಾರೆ. ಇದಕ್ಕೆ ಕೊನೆ ಎಂದು? ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಉತ್ತರವಿಲ್ಲದ ಪ್ರಶ್ನೆಗೆ ‘ಕಾಲ’ವೇ ಉತ್ತರಿಸಬೇಕು.