ಉತ್ತರಪ್ರಭ

ಕಾರಟಗಿ: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಅಸ್ಪೃಶ್ಯತೆಯ ಆಚರಣೆಯು ಇಂದಿಗೂ ಜೀವಂತವಾಗಿದ್ದು, ಗ್ರಾಮದಲ್ಲಿ ವಾಸಿಸುವ 85ಕ್ಕೂ ಹೆಚ್ಚು ಮಾದಿಗ ಸಮುದಾಯದ ಕುಟುಂಬಗಳಿಗೆ ಇಂದಿಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಇಲ್ಲದಿರುವುದರಿಂದ, ಸಾಮಾಜಿಕ ನ್ಯಾಯ ಒದಗಿಸಿ, ಸಮಾನತೆ ಅವಕಾಶ ಮಾಡಿಕೊಡುವಂತೆ ಗ್ರಾಮದ ದಲಿತ ಯುವಕರು ಕಾರಟಗಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ 85ಕ್ಕೂ ಹೆಚ್ಚು ಮಾದಿಗ ಸಮುದಾಯದ ಕುಟುಂಬಗಳು ವಾಸವಾಗಿದ್ದು ಇಂದಿಗೂ ಜಾತಿ ನಿಂದನೆಯಲ್ಲೇ ಬದಕುವಂತಾಗಿದೆ. ಮೊದಲಿನಿಂದಲೂ ಈ ಗ್ರಾಮದಲ್ಲಿ ಸಾರ್ವನಿಕ ಸ್ಥಳಗಳಲ್ಲಿ ದಲಿತರ ಪ್ರವೇಶ ಇಲ್ಲದಂತಾಗಿದೆ. ಗ್ರಾಮದಲ್ಲಿ ಸಂಪೂರ್ಣ ಅಸ್ಪೃಶ್ಯತೆಯು ತಾಂಡವವಾಡುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ದಲಿತ ಕುಟುಂಬಗಳಿಗೆ ನಡೆಸಿಕೊಡಬೇಕೆಂದು ಕಾರಟಗಿಯ ತಹಸೀಲ್ದಾರ್ ರವಿ.ಎಸ್.ಅಂಗಡಿ ಅನುಪಸ್ಥಿತಿಯಲ್ಲಿ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು.

ನಂತರ ಗ್ರಾಮದ ದಲಿತ ಮುಖಂಡ ಮಾರೇಶ್ ಮುಷ್ಟೂರು ಮಾತನಾಡಿ ನಮ್ಮ ಗ್ರಾಮದಲ್ಲಿ ದಲಿತರಿಗೆ ಜಾತಿನಿಂದನೆ ನಡೆಯುತ್ತಿದೆ. ಕಾನೂನು ಕಠಿಣ ಕ್ರಮ ಕೈಗೊಂಡರೂ ಅನೇಕ ಗ್ರಾಮಗಳಲ್ಲಿ ಜಾತಿಯಿಂದ ಅನ್ಯಾಯವಾಗುತ್ತಿದೆ. ಅಸಮಾನತೆಗೆ ಉಂಟಾಗುತ್ತಿದೆ. ಗ್ರಾಮದ ಸೊಸೈಟಿಯಲ್ಲಿಯೂ ಸದಸ್ಯರಾಗಿ ಭಾಗವಹಿಸಲು ಅವಕಾಶ ನೀಡಿಲ್ಲ. ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಕ್ಷೌರದ ಅಂಗಡಿ, ದೇವಸ್ಥಾನ ಸೇರಿದಂತೆ ಅನೇಕ ಸ್ಥಳಗಳಲ್ಲಿ ಪ್ರವೇಶವಿಲ್ಲ. ದಲಿತರು ಎನ್ನುವ ಕಾರಣಕ್ಕೆ ಇಂದಿಗೂ ಶೋಷಣೆಗೆ ಹಾಗೂ ಜಾತಿನಿಂದನೆಗೆ ಒಳಗಾಗಿದ್ದೆವೆ, ದಯವಿಟ್ಟು ಇಲ್ಲಿನ ದಲಿತ ಕುಟುಂಬಗಳಿಗೆ ಅನ್ಯಾಯವಾಗುತ್ತಿದ್ದು ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಿ ಸಮಾನತೆಯನ್ನು ಸೃಷ್ಟಿಸಬೇಕೆಂದು ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಜಮದಗ್ನಿ, ಯಲ್ಲಪ್ಪ ಕಟ್ಟಿಮನಿ, ಹನುಮೇಶ, ಕುಮಾರಪ್ಪ, ಸೋಮಣ್ಣ, ಪುಟ್ಟಣ್ಣ, ಜಟರಾಜ, ಯಮನೂರ, ಚೆನ್ನಬಸವ, ಚಂದ್ರಶೇಖರ, ಹುಸೇನಪ್ಪ, ಸೋಮಣ್ಣ.ಪಿ, ಬಸವರಾಜ, ರಾಘವೇಂದ್ರ, ರಾಜು, ದುರಗಪ್ಪ, ಮಾರುತಿ ಸೇರಿದಂತೆ ಅನೇಕರು ಇದ್ದರು.

1 comment
Leave a Reply

Your email address will not be published. Required fields are marked *

You May Also Like

ಬ್ಲೇಡ್‌ನಿಂದ ಇರಿದುಕೊಂಡು ಅತ್ಮಹತ್ಯೆಗೆ ಯತ್ನ

ಓರ್ವ ವ್ಯಕ್ತಿ ದೇಹಕ್ಕೆ ಎಲ್ಲೆಂದರಲ್ಲಿ ಬ್ಲೇಡ್‌ನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

ಉತ್ತರಪ್ರಭ ಫಲಶೃತಿ: ಏನರಾ ಆಗ್ಲಿ ಧೂಳಿಗೆ ತೆರಿಗೆ ಕಟ್ಟೊ ಕಾಟ ತಪ್ಪಿದ್ರ ಸಾಕು..!

ಮನೆ, ಜಾಗೆ, ನೀರು, ಕಟ್ಟಡ ಹೀಗಿಲ್ಲ ತೆರಿಗೆ ಕಟ್ಟುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೆ ಏಕೆ ಸ್ವತಃ ಕಟ್ಟಿದ್ದೇವೆ. ಆದರೆ ಇದ್ಯಾವುದಿದು ಧೂಳಿಗೆ ಕರ ಕಟ್ಟುವುದು ಅಂದ್ಕೊಂಡ್ರಾ?

ನೀರಿನ ಕರ ಹೆಚ್ಚಳಕ್ಕೆ ಕನ್ನಡ ಕ್ರಾಂತಿ ಸೇನೆ ವಿರೋಧ

ವರ್ಷಕ್ಕೆ 950 ರೂ ನೀರಿನ ಕರವನ್ನು ಪುರಸಭೆ ನಿಗದಿ ಮಾಡಿತ್ತು. ಆದರೆ ಇದೀಗ ಏಕಾಏಕಿ 1550 ರೂ, ಏಕಾಏಕಿ ಹೆಚ್ಚಿಗೆ ಮಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.