ಬೆಂಗಳೂರು: ಶಾಲೆಗಳಿಗೆ ರಜೆ ಮುಗಿದು ಇನ್ನೇನು ಶಾಲೆಗಳು ಆರಂಭವಾಗುವಷ್ಟರಲ್ಲಿ ಮತ್ತೆ ಸರ್ಕಾರ ಜೂನ್ 14 ರವರೆಗೆ ಬೇಸಿಗೆ ರಜೆ ವಿಸ್ತರಿಸಿದೆ. ಆದರೆ ಜೂನ್ 15 ರಿಂದ 8, 9, 10ನೆ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಇನ್ನು,ಪ್ರಾಥಮಿಕ ಶಾಲೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ. ಅನ್ಬುಕುಮಾರ್ ಈ ಕುರಿತಂತೆ ಮಾತನಾಡಿ ಸರಕಾರಿ ಶಾಲೆಯ ಶೇ.70 ರಷ್ಟು ಮಕ್ಕಳಿಗೆ ಆನ್‌ಲೈನ್ ಪಾಠ ಗಳನ್ನು ಕೇಳಲು ಸಾಧ್ಯವಾಗಿಲ್ಲ ಎಂಬ ಅರಿವು ನಮ ಗಿದೆ. ಹೀಗಾಗಿ, ಕೆಲ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಗಳಿಂದ ಮಕ್ಕಳಿಗೆ ಟ್ಯಾಬ್ ಕೊಡಿಸುವ ಪ್ರಯತ್ನ ನಡೆದಿದೆ. ಅದೇ ರೀತಿ, ಪ್ರತಿ ಮಗುವಿಗೂ ಗಮನ ನೀಡುವವರನ್ನು ಗುರುತಿಸಲು ಯೋಜನೆ ರೂಪಿಸುತ್ತೇವೆ. ಸಮಿತಿ ರೂಪುಗೊಂಡ ನಂತರ ನಮ್ಮ ಆಲೋಚನೆಗಳನ್ನು ಸಮಿತಿಯ ಸದಸ್ಯರೊಂ ದಿಗೆ ಹಂಚಿಕೊಳ್ಳುತ್ತೇವೆ ಎಂದರು.