ಉತ್ತರಪ್ರಭ
ರೋಣ: ರೋಣ ಬಸ್ ನಿಲ್ದಾಣದಲ್ಲಿ ಬಾಗಲಕೋಟೆ ಘಟಕಕ್ಕೆ ಒಳಪಟ್ಟ ಬಸ್ ಹೈಕೋರ್ಟ್ ಆದೇಶದ ಮೇರೆಗೆ ವಶಕ್ಕೆ ಪಡೆದು ಕೊಂಡ ಘಟನೆ ಬುಧವಾರ ನಡೆದಿದೆ.

ಬಾಗಲಕೋಟೆ ಘಟಕದ ಬಸ್ ಚೊಳಚಗೊಡ್ಡದ ಕ್ರಾಸ್ ಬಳಿ 2014ರಲ್ಲಿ ಅಪಘಾತ ಸಂಭವಿಸಿ ನಾಲ್ಕು ಜನ ಮರಣ ಹೊಂದಿದ್ದರು, ಅವರಲ್ಲಿ ಇಬ್ಬರು ಮೃತರ ಸಂಬಂಧಿಕರು. ರೋಣ ಕೋರ್ಟಿನಲ್ಲಿ ಧಾವೆ ಹುಡಲಾಗಿ ಹೈಕೋರ್ಟ್, ಮೃತರ ಸಬಂಧಿಕರಿಗೆ ಅಸಲು, ಬಡ್ಡಿ ಸೇರಿ ಸುಮಾರು ಇಪತ್ತೊಂದು ಲಕ್ಷ ಪರಿಹಾರ ನೀಡಲು ಆದೇಶ ಮಾಡಿತ್ತು ,ಆದರೂ ಕೂಡಾ ಬಾಗಲಕೋಟೆ ಘಟಕ ಬರೀ ಹನ್ನೊಂದು ಲಕ್ಷ ಮಾತ್ರ ಪರಿಹಾರ ನೀಡಿ ಇನ್ನುಳಿದ ಹಣ ನೀಡಲು ಸತಾಯಿಸುತ್ತಿರುವ ಕಾರಣ. ಹಿರಿಯ ನ್ಯಾಯಾಧೀಶರ ಆದೇಶದ ಮೇರೆಗೆ ಈ ಬಸ್ಸನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಮೃತರ ವಾದಿಪರ ವಕೀಲ ಬಿ ಎಚ್ ಮಾಡಲಗೇರಿ ಹೇಳಿದರು.
ಈ ಸಂದರ್ಭದಲ್ಲಿ ಏನ್ ಪಿ ನದಾಫ್, ಎಸ್ ಈ ಕಾಳೆ , ಬಿ ಎಂ ಯಲಬುರ್ಗಿ ಧಿಲಿಪರು(ಅಮೀನರು ) ಉಪಸ್ಥಿತರಿದ್ದರು.
2 comments
There are lot of typo errors.pls correct it in future.
yes