ಲಕ್ಷ್ಮೇಶ್ವರ: ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಸಿದ್ದರಾಮ ವಿಭೂತಿ ಹೇಳಿದರು.
ಪಟ್ಟಣದಲ್ಲಿ ಮುಂಬರುವ ಪರಿಸರ ದಿನಾಚರಣೆ ಅಂಗವಾಗಿ ಆರ್.ಎಸ್.ಎಸ್.ಮತ್ತು ಎಂಜಿಎಂ ಫೌಂಡೇಶನ್ ನಿಂದ 500 ಸಸಿಗಳನ್ನು ಶಾಲೆಗಳಲ್ಲಿ ಆಸಕ್ತರಿಗೆ ವಿತರಿಸಿ ಮಾತನಾಡಿದರು.
ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ, ಆಸಕ್ತರಿಗೆ ಸಸಿಗಳನ್ನು ನೀಡಲಾಗುತ್ತಿದ್ದು, ರಸ್ತೆಯ ಎರಡು ಬದಿಯಲ್ಲಿ ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಆರ್.ಎಸ್.ಎಸ್ ಕಾರ್ಯಕರ್ತರು ಹಾಗೂ ಎಂಜಿಎಂ ಫೌಂಡೇಶನ್ ನವರು, ಅರಣ್ಯ ಇಲಾಖೆಯ ಸಿಬ್ಬಂದಿಯ ವರ್ಗದವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಡಿಸಿ ಬಂಗಲೆಯಲ್ಲಿ ಶೂಟ್ ಮಾಡಿಕೊಂಡ ಪೊಲೀಸ್ ಪೇದೆ

ಜಿಲ್ಲಾಧಿಕಾರಿ ಬಂಗಲೆಯಲ್ಲಿಯೇ ಗುಂಡು ಹಾರಿಸಿಕೊಂಡು ಪೊಲೀಸ್ ಪೇದೆಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೂರುಸಾವಿರಮಠ ಮತ್ತು ಆಸ್ತಿಗಳ ವಿಚಾರ: ಬಹಿರಂಗ ಚರ್ಚೆಗೆ ದಿಂಗಾಲೇಶ್ವರ ಶ್ರೀಗಳ ಆವ್ಹಾನ

ಶ್ರೀ ಜಗದ್ಗುರು ಮಾರುಸಾವಿರಮಠದ ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಪಟ್ಟ ವಿಚಾರವಾಗಿ ಹೇಳಿಕೆ ನೀಡುವ ಯಾವುದೇ ವ್ಯಕ್ತಿಗಳು ನಮ್ಮೊಂದಿಗೆ ಚರ್ಚಿಸಿ ಹೇಳಿಕೆ ನೀಡಬೇಕು ಎಂದು ಬಾಲೇಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆ: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗದಗ : ಕಾರ್ಮಿಕ ಇಲಾಖೆ ಅಡಿಯಲ್ಲಿ ಬರುವ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಯಟಿಯಲ್ಲಿ ಖಾಲಿ…

ಸಿದ್ದರಾಮಯ್ಯ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲಾಗಿದೆ: ಮಾಜಿ ಸಿಎಂ ಎಚ್ಡಿಕೆ

ಸಿದ್ದರಾಮಯ್ಯ ಊಸುರವಳ್ಳಿ ಇದ್ದಂತೆ. ಅಧಿಕಾರದ ಲಾಲಸೆಯಿಂದಲೇ ಅವರು ಕಾಂಗ್ರೆಸ್ ಗೆ ಜಿಗಿದಿದ್ದಾರೆ. ಜೆಡಿಎಸ್ ಅವಕಾಶವಾದಿ ಪಕ್ಷ ಎಂದು ಹೇಳುವ ಮೂಲಕ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲಾಗಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.