ಲಕ್ಷ್ಮೇಶ್ವರ: ಪಟ್ಟಣದ ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಕೊರೋನಾ ಸೇನಾನಿಗಳಿಗೆ ಬದಿಬೀದಿ ವ್ಯಾಪಾರಸ್ಥರಿಗೆ ಮತ್ತು ನಿರ್ಗತಿಕರಿಗೆ ಆಹಾರ ವಿತರಿಸಲಾಯಿತು.
ಈ ವೇಳೆ ಡಾ.ಚಂದ್ರು ಲಮಾಣಿ ಮಾತನಾಡಿ, ಕೊರೋನಾದಿಂದ ಕೆವಲ ಆರೋಗ್ಯ ಸಮಸ್ಯೆ ಅಲ್ಲದೇ ಕೈಗಳಿಗೆ ಉದ್ಯೋಗವಿಲ್ಲದೆ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನ ದುಡಿದು ಊಟ ಮಾಡುವ ಜನರು ಕಷ್ಟದಲ್ಲಿದ್ದಾರೆ. ಇದರಿಂದ ನಿತ್ಯ 60 ಕೆ.ಜಿ ಪಲಾವ ಸಿದ್ದಪಡಿಸಿ ಪುರಸಭೆ ಸಿಬ್ಬಂದಿ ಪೊಲೀಸರು ಸೇರಿದಂತೆ ಮುಂತಾದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಹಾಗೂ ದೊಡ್ಡೂರ ಸೂರಣಗಿ ಕೊಂಚಿಗೇರಿ ಸೇರಿ ಗ್ರಾಮೀಣ ಪ್ರದೇಶದಲ್ಲಿ ತೆರಳಿ ಸಿದ್ದಪಡಿಸಿದ ಆಹಾರದ ಬಾಕ್ಸ್ ವಿತರಿಸಿದರು.
ವೀರಣ್ಣ ಪವಾಡದ, ನವೀನ ಬೆಳ್ಳಟ್ಟಿ, ಅರುಣ ಪಾಟೀಲ, ಗಿರೀಶ ಚೌರೆಡ್ಡಿ, ಕೆ.ಆರ್.ಲಮಾಣಿ ಸೇರಿದಂತೆ ಮುಂತಾದವರಿದ್ದರು.

Leave a Reply

Your email address will not be published. Required fields are marked *

You May Also Like

ಮೊಸಳೆ ಬಂತು.. ಮೊಸಳೆ..! ಹೊಳೆಯಾಲೂರು: ಮಲಪ್ರಭ ನದಿ ದಡದಲ್ಲಿ ಮೊಸಳೆ ಪತ್ತೆ!

ಮಲಪ್ರಭಾ ನದಿಯಲ್ಲಿ ಮೊಸಳೆ ಪತ್ತೆಯಾಗಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗದಗ ಜಿಲ್ಲೆ ರೊಣ ತಾಲೂಕಿನ ಹೊಳೆಆಲೂರ ಗ್ರಾಮದ ಮಲಪ್ರಭಾ ನದಿಯಲ್ಲಿ ಬುಧುವಾರ ಸಂಜೆ ಮೊಸಳೆ ಪ್ರತ್ಯಕ್ಷವಾಗಿಜe. ಮೊಸಳೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಆಕ್ರೋಶ: ಸರ್ಕಾರದ ಕೆಟ್ಟ ಧೋರಣೆ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲದು

ಸರ್ಕಾರದ ಕೆಟ್ಟ ಧೋರಣೆಗಳು ಎಲ್ಲಿಯವರೆಗೆ ನಡೆಯುತ್ತವೇಯೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವದಿಲ್ಲ ನಮ್ಮ ಕಾರ್ಮಿಕ ವರ್ಗದವರು ಅನುಭವಿಸುವ ನೋವು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಂದಮ್ಮಗಳಿಗೂ ಕೋವಿಡ್ ಕಾಟ.!: ಗದಗ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ..!

ಗದಗ: ವಿಕೆಂಡ್ ಗದಗ ಜಿಲ್ಲೆಯ ಜನರ ನಿದ್ದೆ ಕದ್ದಂತಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ…

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ

 ಉತ್ತರಪ್ರಭ ಗದಗ: ತೋಂಟದಾರ್ಯ  ಇಂಜೀನಿಯರಿಂಗ್ ಕಾಲೇಜಿನ  ಇಲೇಕ್ಟ್ರೀಕಲ್ & ಇಲೇಕ್ಟ್ರಾನಿಕ್ಸ್ ವಿಭಾಗ ಮತ್ತು ಕಾಲೇಜಿನ ಇಂಟರಪುನರಶಿಪ್…