ಉತ್ತರಪ್ರಭ ಸುದ್ದಿ
ಮುಂಡರಗಿ: ತಾಲೂಕಿನ ಮುರುಡಿತಾಂಡಾ ಮತಗಟ್ಟೆ ಸಂಖ್ಯೆ 265, ರೋಣ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಇಲ್ಲಿ ಒಟ್ಟು,1590 ಮತಗಳಿದ್ದು, ಒಂದು ಮುಂಜಾನೆ 7ಗಂಟೆಗೆ ಮತದಾನ ಶುರುವಾಗಿದ್ದು, ಮುಂಜಾನೆಯಿಂದಲೆ ಮತದಾನಕ್ಕೆ ಮುಗಿಬಿದ್ದ ಜನ ಸಂಜೆಯಾದರು ಸರದಿ ಸಾಲು ಸಾಗುತ್ತಿಲ್ಲಾ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಂಜಾನೆ 7ರಿಂದ ಸಂಜೆ 4ಗಂಟೆಯೊಳಗೆ (ಗಂಡು 300), (ಹೆಣ್ಣು 411) ಮತ ಮಾತ್ರ ಚಲಾಯಿಸಲಾಗಿದೆ ಎಂದು ಚುಣಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕಾರಣ: ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಿದ್ದು, ಚುಣಾವಣಾಧಿಕಾರಿಗಳು ಸರಿಯಾಗಿ ಮತದ ಕೊಠಡಿಯನ್ನು ಏರ್ಪಡಿಸದಿರುವದು, ಬರಿ ಒಂದೆ ಮತದಾನದ ಕೊಠಡಿ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸರದಿ ಸಾಲು ಸಾಗದ ಕಾರಣ, ಸರದಿ ಸಾಲಿನಲ್ಲೆ ಬೆಸತ್ತು ಕುಳಿತ ಮತದಾರರು.
ವಾತಾವರಣದಲ್ಲಿ ಏರುಪೇರು: ಮೋಡಕವಿದ ವಾತಾವರಣ ಇದ್ದು ಮಳೆ ಬರುವ ಸಂಭವ ಎದ್ದು ಕಾಣುತ್ತಿದ್ದು, ಜನರು ಬೆಸರಗೊಂಡು ಮತಚಲಾಯಿಸದೆ ಮನೆಗೆ ತೆರಳುವ ಪರಿಸ್ಥಿತಿಯಲ್ಲಿ ಇದ್ದಾರೆ, ಇದಕ್ಕೆ ಜಿಲ್ಲಾಡಳಿತ ಸಂಬಧಪಟ್ಟ ಚುಣಾವಣಾಧಿಕಾರಿಗಳು ಏನು ಉತ್ತರಿಸುವರೊ ಕಾದು ನೋಡಬೇಕಾಗಿದೆ.

ಬಿಸಿಲಿನಲ್ಲಿ ಕುರಲು ಹಾಕಿದ ಸಿಟನ್ನು ಜನರು ಮಳೆಯಲ್ಲಿ ರಕ್ಷಿಸಿಕೊಳ್ಳಲು, ತಲೆಮೆಲೆ ಹೊದ್ದಿಕೊಂಡಿರುವ ದೃಶ್ಯ.