ಅಳ್ನಾವರ: ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗೆ ಗ್ರಾಮದಲ್ಲಿ ಬೇರೆ ಬೇರೆ ತಾಂಡಾಗಳಿಂದ ತಮ್ಮ ಉಪಜೀವನಕ್ಕಾಗಿ ಕಬ್ಬು ಕಡಿಯಲು ಬಂದ ಬಂಜಾರ ಜನಾಂಗದ ಕೂಲಿ ಕಾರ್ಮಿಕರ ಮೇಲೆ ಏಕಾ ಏಕಿ ಮಹಿಳೆಯರು ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದೆ.


ಹಲ್ಲೆ ಆರೋಪಿ ಅರ್ಜುನ ತಂದೆ ಗಂಗಾರಾಮ ವಡ್ಡರ ಉರ್ಪ ಮಲ್ಲಾಪುರ ವಯಾ: 35 ವರ್ಷ ಸಾ:ಕುಂಬಾರಕೊಪ್ಪ ಮತ್ತು ಆತನ ಸಹಚರರು ಸೇರಿ ಕಬ್ಬು ಕಾಠಾವು ಮಾಡುತ್ತಿದ್ದ ಕಾರ್ಮಿಕರ ಮೇಲೇ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಮಹಿಳೆಯರನ್ನು ಎಳೆದಾಡಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲೇಬೇಕೆಂದು ಅವರನ್ನು ಅಟ್ಟಾಡಿಸಿ ಕೊಂದು ಹಾಕಲು ತನ್ನ ಕಾರಿನಲ್ಲಿ ಗೂಂಡಾಗಳನ್ನು ಕರೆದು ಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಮಾರಣಾಂತಿಕ ಹಲ್ಲೆಗೊಳಗಾದ ಲಕ್ಷ್ಮಿಬಾಯಿ ಸೇರಿ ಅನೇಕ ಮಹಿಳೆಯರು ಗಂಭೀರ ಪ್ರಮಾಣದಲ್ಲಿ ಹಲ್ಲೆ ಗೊಳಗಾಗಿದ್ದು, ಆರೋಪಿಗಳು ಕಟ್ಟಿಗೆಯಿಂದ ಹೊಡೆದ ಪರಿಣಾಮ ಗಂಭೀರ ಪ್ರಮಾಣದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ಹೇಯ ಕೃತ್ಯ ಎಸಗಿದ ಆರೋಪಗಳನ್ನು ಕೂಡಲೇ ಬಂಧಿಸಬೇಕು. ಕಾರ್ಮಿಕರ ಹಲ್ಲೆ ಖಂಡನಿಯ ಇಂತಹ ಘಟನೆಗಳನ್ನು ಬಂಜಾರ ಜನಾಂಗ ಸಹಿಸುವುದಿಲ್ಲ .ಧಾರವಾಡ ಜಿಲ್ಲಾಧಿಕಾರಿ ಮತ್ತು ಪೋಲಿಸ ವರೀಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಗಳನ್ನು ಬಂಧಿಸಬೇಕು ಇಲ್ಲದಿದ್ದಲ್ಲಿ ಉಗ್ರವಾದ ಹೊರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ– ಶ್ರೀ ರವಿಕಾಂತ ಅಂಗಡಿ, ವಕೀಲರು ಕಾರ್ಮಿಕ ಮುಖಂಡರು ಗೋರ ಸೇನಾ ರಾಜ್ಯಾಧಕ್ಷರು
ತಕ್ಷಣವೇ ಪ್ರಕರಣ ದಾಖಲಿಸದ ಪೋಲಿಸರು ಕಾರ್ಮಿಕರ ಪ್ರತಿಭಟನೆಯ ನಂತರ ಪ್ರಕರಣವನ್ನು ಕಾಟಾಚರಕ್ಕೆ ದಾಖಲಿಸದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು. ಆರೋಪಿಗಳ ರಕ್ಷಣೆ ಮಾಡಲು ಪೋಲಿಸರು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಪೊಲೀಸರು ಇನ್ನೂ ವರೆಗೂ ಆರೋಪಗಳನ್ನು ಬಂಧಿಸದೆ ಇರುವುದು ಎಲ್ಲೋ ಆರೋಪಿಗಳ ಪ್ರಭಾವ ಮಣಿದರಾ ಎನ್ನುವ ಶಂಕೆ ವ್ಯಕ್ತವಾಗಿದೆ.


ಕಾರ್ಮೀಕರು ರಕ್ಷಣೆ ಮಾಡ ಬೇಕಾದ ಕಾರ್ಮಿಕ ಇಲಾಖೆ ಇತ್ತ ನೋಡುವ ಗೊಜಿಗೆ ಹೊಗಿಲ್ಲ , ತಮ್ಮ ತುತ್ತಿನ ಚಿಲಕ್ಕಾಗಿ ಬೇರೆ ಬೇರೆ ತಾಂಡಾಗಳಿಂದ ಬಂದ ಜನರನ್ನು ಹಲ್ಲೆ ಮಾಡೋದು ,ಕೊಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಇವರ ರಕ್ಷಣೆ ಮಾಡಬೇಕಾದ ಸರ್ಕಾರ ಕಣ್ಣಮುಚ್ಚಿ ಕುಳಿತಿದ್ದು ವಿಪರ್ಯಾಸವೇ ಸರಿ ಅದರಲ್ಲೂ ತಾಂಡಾ ಅಭಿವೃದ್ಧಿ ನಿಗಮ ಅಂತ ಮಾಡಿ ಈ ಜನರ ಭವಣೆಯನ್ನು ನಿಗಿಸಬಹುದು ಎಂಬ ನಿರೀಕ್ಷೆ ಆ ಸಮುದಾಯದಲ್ಲಿ ಇತ್ತು. ಇಂತಹ ಘಟನೆ ನಡೆದರು ಮೌನ ವಹಿಸಿದ್ದು ನೋಡಿದರೆ ಆ ಸಮುದಾಯದ ದುರಾದುಷ್ಟವೇ ಸರಿ.
1 comment
*ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅನ್ನೋಹಾಗೆ ನಮ್ಮ ಬಂಜಾರ ಸಮಾಜದ ಮೇಲೆ ದಿನೇ ದಿನೇ ಆಗುತ್ತಿರುವ ದೌಜನ್ಯ ದಬ್ಬಾಳಿಕೆ ಅನ್ಯಾಯ ಅತ್ಯಾಚಾರಗಳೆ ಸಾಕ್ಷಿ*
ಈ ಘಟನೆ ನಡೆದಿದ್ದು ಧಾರವಾಡ ಹತ್ತಿರ ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದಲ್ಲಿ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಲಚ್ಚಮಾನಾಯ್ಕ್ ತಾಂಡದ ಕುಟುಂಬವೊಂದು ಕಬ್ಬು ಕಟಾವಿಗೆ ಹೋಗಿದ್ದರು ,ನಾಲ್ಕು ಐದು ತಿಂಗಳಿಂದ ಕಬ್ಬು ಕಟಾವು ಮಾಡುತ್ತಿದರು. ಅರವಟಗಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುತಿದ್ದಾಗ ಬೇರೊಬ್ಬ ವ್ಯಕ್ತಿ ಬಂದು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾನೆ ಚಿಕ್ಕ ಮಕ್ಕಳು ಎನ್ನದೆ ಅವರನ್ನು ಕಬ್ಬಿನಿಂದ ಹಲ್ಲೆ ನಡೆಸಿ.ಮಹಿಳೆ ಒಬ್ಬಳಿಗೆ ಕಬ್ಬಿನಿಂದ ಹೊಡೆದು ತೀರ್ವ ಗಾಯಗೊಂಡಿದ್ದಾಳೆ ಅವಳನ್ನು ಚಿಕಿತ್ಸೆಗಾಗಿ ದಾರವಾಡದ ಆಸ್ಪತ್ರೆಗೆ ಆಂಬುಲೆನ್ಸ್ ನಿಂದ ವರ್ಗಾಯಿಸಲಾಗಿದೆ.. ಆ ಸಮಯದಲ್ಲಿ ಗಂಡಸರೆಲ್ಲಾ ಕಬ್ಬಿನ ಲಾರಿ ಲೋಡ್ ಮಾಡಲು ಹೋಗಿದ್ದು ಯಾರು ಇಲ್ಲದ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಕೂಡಲೇ ಪೊಲೀಸರು ಬಂದಿಸಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಕಬ್ಬು ಕಟಾವಿಗೆ ಹೋಗಿದ್ದ ಬಂಜಾರ ಸಮುದಾಯದವರು ಒತ್ತಾಯಿಸಿದ್ದಾರೆ ಹಾಗೂ ವಿಡಿಯೋವನ್ನು ಎಲ್ಲರಿಗೂ ಶೇರ ಮಾಡಿ. ಕಬ್ಬು ಕಟಾವಿಗೆ ಕರೆದುಕೊಂಡು ಹೋಗಿರುವಂತಹ ಬ್ಯಾಚಿನ ಮೇಸ್ತ್ರಿ ಆಗಿರುವಂತಹ ಹನುಮನಾಯಕ ಅವರಿಗೆ ಸಂಪರ್ಕ ಮಾಡಿದ್ದು ಎಸ್ಸಿ ಎಸ್ ಟಿ ಕಾಯ್ದೆ ಅಡಿಯಲ್ಲಿ ಮಾನ ನಷ್ಟ ಮತ್ತು ದೌರ್ಜನ್ಯ ಪ್ರಕರಣವನ್ನು ದಾಖಲಿಸಬೇಕು ಎಂದು ಮನವಿ ಮಾಡಲಾಗಿದೆ..
ಆರೋಪಿಯಾದ ಅರ್ಜುನ್ ಗಂಗರಯ ವಡ್ಡರ ಅವರನ್ನು ಕೂಡಲೇ ಬಂಧಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ವಿಜಯನಗರ ಜಿಲ್ಲಾ ಗೋರ ಸೇನಾ ಸಂಘಟನೆ ಹಾಗೂ ಗೋರ್ ಸಿಕ್ವಡಿ ಸಂಘಟನೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Patel Naik. ವರದಿಗಾರ ಕೆ ಬಿ ತಾಂಡ (ಕೊಟ್ಟೂರು)