ರೋಣ: ತಾಲೂಕಿನ ಹಳ್ಳಿಗಳಿಂದ ಬರುವ ಸೋಂಕಿತರಿಗೆ ಕಾಳಜಿ ಪೂರ್ವಕವಾಗಿ ಚಿಕಿತ್ಸೆ ನೀಡಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದರು.
ತಾಲೂಕು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ತಾಲೂಕಿನಾದ್ಯಂತ ವೈದ್ಯರ ನಡೆ ಹಳ್ಳಿಯ ಕಡೆ ಯಾವ ರೀತಿ ನಡೆದಿದೆ ಎಂಬುದು ಪರಿಶೀಲಿಸಿ ಮಾತನಾಡಿದರು.
ಪ್ರತಿಯೊಬ್ಬ ಸೋಂಕಿತರಿಗೂ ಯಾವುದೇ ಕುಂದು ಕೊರತೆಯಾಗದಂತೆ ನೋಡಿಕೊಳ್ಳಿ. ಅವರಿಗೆ ಯಾವ ತರಹ ಊಟೋಪಚಾರ ಬೇಕೋ ಅದೇ ತರಹ ತಲುಪಿಸಲು ಪ್ರಯತ್ನ ಮಾಡಿ ಎಂದು ಆದೇಶ ಮಾಡಿದರು.
ಹಳ್ಳಿಗಳಲ್ಲಿ ಸೆರ್ಟಿಫೈಡ್ ಮಾಡಿ ಮನೆಯಲ್ಲಿ ಮತ್ತು ಹೊರಗಡೆ ಇರುವವರ ಬಗ್ಗೆ ಹಾಗೂ ಮನೆಯಲ್ಲಿರುವವರಿಗೆ ಔಷದಿಯನ್ನು ತಲುಪಿಸುವಿರಾ ಎಂದು ಪ್ರಶ್ನಿಸಿದರು. ಗ್ರಾಮೀಣ ಭಾಗದ ಜನರ ಕೋವಿಡ್ ಪರೀಕ್ಷೆಯ ಕಡೆಗೆ ಹೆಚ್ಚಿನ ಗಮನ ನೀಡಿರಿ ಎಂದು ತಾಲೂಕ ಆರೋಗ್ಯಾಧಿಕಾರಿ ಡಾ ಭಜಂತ್ರಿ ಅವರಿಗೆ ಸೂಚಿಸಿದರು.
ಟಿಎಚ್ ಒ ಭಜಂತ್ರಿ ಮಾತನಾಡಿ, ಸರ್ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ಒಂದು ಹಳ್ಳಿಯಲ್ಲಿ ನೂರು ಜನ ಕೆಲ ಗ್ರಾಮಗಳಲ್ಲಿ 25 ರಿಂದ 30 ಜನರ ಪರೀಕ್ಷೆಗೊಳಗಾಗಿದ್ದರೆ ಎಂದು ತಿಳಿಸಿದರು.
ನಂತರ ಆಕ್ಷಿಜನ್ ರೂಮ್ ಪರಿಶೀಲಿಸಿ ಸಾಧ್ಯವಾದರೆ ಇನ್ನೂ ಹೆಚ್ಚಿನ ಆಕ್ಷಿಜನ್ ಅಳವಡಿಸಿಕೊಳ್ಳಲು ಮುಂದಾಗಿ. ಅದಕ್ಕೆ ಬೇಕಾಗಿರುವ ವ್ಯವಸ್ಥೆ ಮಾಡಿಸೋಣ. ಪ್ರತಿ ದಿನದ ಅಪಡೇಟ್ ನಮಗೆ ತಲುಪುವಂತೆ ಮಾಡಿ ಎಂದರು.
ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ಎನ್, ತಹಸೀಲ್ದಾರ್ ಜೆ.ಬಿ.ಜಕ್ಕನಗೌಡ, ಹೊಳೆ ಆಲೂರ ಕಂದಾಯ ನಿರೀಕ್ಷಕ ರವಿ ಬಾರಕೇರ, ಸಿಡಿಪಿಒ ಬಿ.ಎಂ.ಮಾಳೇಕೊಪ್ಪ, ಭೀಮಸೇನ್ ಜೋಶಿ ಆಸ್ಪತ್ರೆಯ ವೈದ್ಯಾಧಿಕಾರಿ ಎಚ್.ಎಲ್.ಗಿರಡ್ಡಿ, ಸಿಪಿಐ ಸುನೀಲ್ ಸವದಿ, ಪಿಎಸ್ ಐ ವಿನೋದ ಪೂಜಾರಿ ಮುಂತಾದವರಿದ್ದರು.