ಉತ್ತರಪ್ರಭ ನರಗುಂದ:
ನರಗುಂದ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಸಿ.ಸಿ.ಪಾಟೀಲ ನಾಳೆ ದಿ. 19-4-2023ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಪುರಸಭೆಯ ಮುಂಭಾಗದಿಂದ ಮೇರವಣಿಗೆ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

ತದನಂತರ ಹುಬ್ಬಳ್ಳಿ ರಸ್ತೆಯಲ್ಲಿರುವ ಶ್ರೀ ಅಣ್ಣಪ್ಪ ಕಾಂಬಳೆ ಇವರ ಜಮೀನಿನಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ನಾಮಪತ್ರ ಸಲ್ಲಿಸುವ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ನರಗುಂದ ಮತಕ್ಷೇತ್ರದ ನರಗುಂದ ಮಂಡಲ, ಹೊಳೆಆಲೂರ ಮಂಡಲ ಮತ್ತು ಲಕ್ಕುಂಡಿ ಮಂಡಲದ ಎಲ್ಲ ಮತದಾರ ಬಾಂಧವರು, ಪಕ್ಷದ ಪ್ರಮುಖರು, ಕಾರ್ಯಕರ್ತರು, ಪಕ್ಷದ ಹಿರಿಯರು, ಮುಖಂಡರು, ಅಭಿಮಾನಿಗಳನ್ನು ಒಳಗೊಂಡ ಬೃಹತ್ ಮೆರವಣಿಗೆಗೆ ಸಾರ್ವಜನಿಕರು ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ಆಶೀರ್ವದಿಸಿ ಎಂದು ಕೋರಿದ್ದಾರೆ.

Leave a Reply

Your email address will not be published. Required fields are marked *

You May Also Like

ನರೇಗಲ್ಲ: ಲಗೂನಾ ಬ್ರೀಡ್ಜ್ ಕೆಲ್ಸಾ ಮುಗಿಸ್ರಿ: ಕೊಂಕಣಾ ಸುತ್ತಿ ಮೈಲಾರಕ್ ಬರುವಂಗಾಗೈತಿ!

ನಿಗದಿತ ಸಮಯಕ್ಕೆ ಮೇಲ್ಸೆತುವೆ ಕಾಮಗಾರಿ ಮುಕ್ತಾಯವಾಗದ ಕಾರಣ ಗ್ರಾಮಸ್ಥರ ಸ್ಥಿತಿ ಕೊಂಕಣಾ ಸುತ್ತಿ ಮೈಲಾರಕ್ಕೆ ಹೋದ್ರು ಅನ್ನುವಂತಾಗಿದೆ.

ರೋಜಗಾರ್ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಛಬ್ಬಿ ತಾಂಡ ಹಾಗೂ ಗುಡ್ಡದಪೂರ ಮತ್ತು ರಣತೂರ ಗ್ರಾ.ಪಂ ವ್ಯಾಪ್ತಿಯ ದೇವಿಹಾಳ ತಾಂಡಾಗಳಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜಗಾರ್ ಮಿತ್ರ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದೇಶದ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆಯಂತೆ!

ಮಹಾಮಾರಿ ಕೊರೊನಾದಿಂದಾಗಿ ಜಿಡಿಪಿ ಕುಸಿತ ಕಂಡಿದ್ದು, ಈ ವರ್ಷದಲ್ಲಿ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಅಂದಾಜು ಮಾಡಿದೆ.

ನಿರುದ್ಯೋಗಿಗಳಿಗೆ ಭತ್ಯೆ ನೀಡಲು ಒತ್ತಾಯಿಸುತ್ತೇನೆ: ಕೆ.ಆರ್.ಎಸ್ ಅಬ್ಯರ್ಥಿ ಕಾಂಬಳೆ

ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ದೊರಕುವವರೆಗೆ ನಿರುದ್ಯೋಗ ಭತ್ಯೆ ನೀಡಲು ನಾನು ಒತ್ತಾಯಿಸುತ್ತೇನೆ ಎಂದು ಪಶ್ಚಿಮ ಪದವಿಧರ ಕ್ಷೇತ್ರದ ಕೆ.ಆರ್.ಎಸ್ ಅಬ್ಯರ್ಥಿ ಶಿವರಾಜ್ ಕಾಂಬಳೆ ಹೇಳಿದರು.