ಕರೋನಾ ಚಿಕಿತ್ಸಾ ವೆಚ್ಚ ಹಿನ್ನೆಲೆ, ಸಾರ್ವಜನಿಕ ವಲಯದ ಬ್ಯಾಂಕ್ಗಳು (ಪಿಎಸ್ಬಿ) ಅಸುರಕ್ಷಿತ ಸಾಲ ನೀಡಲು ನಿರ್ಧರಿಸಿವೆ.
ಕೋವಿಡ್ ಎರಡನೇ ಅಲೆ ದೇಶಾದ್ಯಂತ ಹೆಚ್ಚು ವ್ಯಾಪಿಸಿ ಸಂದಿಗ್ಧ ಪರಿಸ್ಥಿತಿ ಉಂಟು ಮಾಡಿದ್ದು, ಇದರಿಂದ ಅಸುರಕ್ಷಿತ ಸಾಲ ನೀಡುಲು ನಿರ್ಧಾರ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ.

ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಪ್ರಕಟಣೆ ಪ್ರಕಾರ, ಸಂಬಳ ಪಡೆಯುವವರು, ಸಂಬಳ ಪಡೆಯದವರು, ಪಿಂಚಣಿದಾರರು ಸೇರಿದಂತೆ ವ್ಯಕ್ತಿಗಳು ಕೋವಿಡ್ ಚಿಕಿತ್ಸೆಗಾಗಿ (Covid-19 Treatment) ಅಸುರಕ್ಷಿತ ವೈಯಕ್ತಿಕ ಸಾಲಗಳನ್ನು ₹ 25,000 ದಿಂದ 5 ಲಕ್ಷದವರೆಗೆ ಪಡೆಯಬಹುದು . ಮರುಪಾವತಿ ಅವಧಿ 5 ವರ್ಷಗಳು ಮತ್ತು ಎಸ್‌ಬಿಐ ವಾರ್ಷಿಕ 8.5% ಬಡ್ಡಿ ವಿಧಿಸುತ್ತದೆ. ಇತರ ಬ್ಯಾಂಕುಗಳು ತಮ್ಮ ಬಡ್ಡಿದರವನ್ನು ನಿರ್ಧರಿಸಲು ಮುಕ್ತವಾಗಿವೆ ಎಂದಿದೆ.

ಆರ್‌ಬಿಐ ಮಾರ್ಗ ಸೂಚಿ ಪ್ರಕಾರ ಎಮರ್ಜೆನ್ಸಿ ಕ್ರೆಡಿಟ್ಲೈನ್ ಗ್ಯಾರಂಟಿ ಯೋಜನೆ ಅಡಿ ಆಮ್ಲಜನಕ ಘಟಕ ಸ್ಥಾಪಿಸಲು ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ 7.5% ಬಡ್ಡಿ ದರದಲ್ಲಿ 2 ಕೋಟಿ ವರೆಗೆ ಸಾಲ ನೀಡಲಾಗುತ್ತದೆ.
ಆರೋಗ್ಯ ರಕ್ಷಕ ಯೋಜನೆಯಡಿ- ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಸ್ಥಾಪಿಸಲು, ಅಭಿವೃದ್ಧಿಗೊಳಿಸಲು, ಉತ್ಪನ್ನ ತಯಾರಿಸಲು 100 ಕೋಟಿ ವರೆಗೆ ಸಾಲನೀಡಲಾಗುವುದು. ಜೊತೆಗೆ ತುರ್ತು ವೈದ್ಯಕೀಯ ಸೇವೆಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ 50 ಕೋಟಿ ರೂ ವಾಯಿದಿ ಸಾಲ ನೀಡುವ ವ್ಯವಸ್ಥೆ ರೂಪಿಸುವುದಾಗಿ ಈ ಹಿಂದೆ ರಿಸರ್ವ್ ಬ್ಯಾಂಕ್ ತಿಳಿಸಿತ್ತು.

Leave a Reply

Your email address will not be published. Required fields are marked *

You May Also Like

ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಎಫ್ಐಆರ್!

ಮಧ್ಯಪ್ರದೇಶ: ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಹಂಚಿಕೊಂಡ…

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರ ಆಯ್ಕೆ

ಉತ್ತರಪ್ರಭ ಸುದ್ದಿಶಿರಹಟ್ಟಿ : ತಾಲೂಕಿನ ಅಲಗಿಲವಾಡ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮರಿಯಪ್ಪ…

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು..?

ಬೆಂಗಳೂರು: ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರೆಸಿದೆ. ಸದ್ಯ ಕೊರೊನಾಗೆ…

ಶಿರಹಟ್ಟಿ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ

ಖಾತೆ ಬದಲಾವಣೆಗೆ ಲಂಚದ ಬೇಡಿಕೆ ಇಟ್ಟಿದ್ದ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ ಬಿದ್ದ ಘಟನೆ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿಯ ಪಟ್ಟಣ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಶರಣಪ್ಪ ಗೌಳಿ 3,500 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದನಂತೆ.