ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳ ವರೆಗೂ ಎಚ್ಚರಿಕೆ ಗಂಟೆಯನ್ನು ಬಾರಿಸಿರುವ ಕರೊನಾ ಎರಡನೆಯ ಅಲೆಯು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆಯಾದರೂ ಫಂಗಸ್‌ನ (ಶಿಲೀಂಧ್ರ) ಕಾಟ ಮಾತ್ರ ಮುಂದುವರಿಯುತ್ತಲೇ ಇದೆ. ಸದ್ಯ ಲಭ್ಯವಿರುವ ಲಿಪೊಸೊಮಲ್ ಆಂಪೊಟೆರಿಸಿನ್ ಬಿ ಔಷಧವನ್ನು ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾದವರಿಗೆ ನೀಡಲಾಗುತ್ತಿದೆ. ಆದರೆ ದಿನದಿಂದ ದಿನಕ್ಕೆ ಆತಂಕ ಹುಟ್ಟಿಸಿದ್ದ ಈ ಬ್ಲಾಕ್ ಫಂಗಸ್‌ನ ರೋಗಿಗಳ ಪ್ರಮಾಣ ಸಹ ಹೆಚ್ಚುತ್ತಾ ಹೋಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕರೊನ ಸೊಂಕಿನಿoದ ಗುಣಮುಖ ರಾಗಿ ಬಂದರೂ ಸಹ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು ಸ್ವಲ್ಪ ಎಚ್ಚರ ತಪ್ಪಿದರೂ ಸಹ ಈ ಬ್ಲಾಗ್ ಫಂಗಸ್ ಅಪಾಯಕಾರಿಯಾಗುವ ಸಂಗತಿಯಾಗಿದೆ. ತಜ್ಞ ವೈದ್ಯರು ಹೇಳುವ ಹಾಗೆ ಈ ಬ್ಲಾಗ್ ಫಂಗಸ್ ಚಿಕಿತ್ಸೆಗೆ ಔಷಧದ ವೆಚ್ಚ ವ್ಯಕ್ತಿ ಒಬ್ಬರಿಗೆ ದಿನಕ್ಕೆ 15 ರಿಂದ 20 ಸಾವಿರ ವೆಚ್ಚ ತಗಲುತ್ತದೆ ಅಲ್ಲದೆ ವ್ಯಕ್ತಿಯ ರೋಗ ಲಕ್ಷಣವನ್ನಾಧರಿಸಿ ಹತ್ತರಿಂದ ಮೂವತ್ತು ದಿನಗಳವರೆಗೆ ಈ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ ಕರೊನ ಸೊಂಕಿನಿoದ ಚೇತರಿಸಿಕೊಂಡಿದ್ದರೂ ಸಹ ನಂತರದಲ್ಲಿ ಆರೋಗ್ಯ ಕಾಳಜಿ ವಹಿಸದೇ ಹೋದರೆ ಅನ್ಯ ಕಾಯಿಲೆಗಳು ಕರೊನ ಸೋಂಕಿತ ವ್ಯಕ್ತಿಗೆ ಬಾಧಿಸಬಹುದು ಎನ್ನುವ ತಜ್ಞರ ಸಲಹೆಯನ್ನು ಆಧರಿಸಿದಾಗ ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯದ ರಕ್ಷಣೆಯನ್ನು ಮಾಡಿಕೊಳ್ಳುವ ಅನಿವಾರ್ಯವಾದ ಸಂದರ್ಭದಲ್ಲಿ ಇದ್ದೇವೆ ಎನ್ನುವುದು ಅರಿವಾಗುತ್ತದೆ
ಇದೆಲ್ಲದರ ಮಧ್ಯೆ ಈ ಎರಡನೇ ಅಲೆ ಸೃಷ್ಟಿಸಿರುವ ಅದೆಷ್ಟೋ ಅವಾಂತರಗಳ ಮಧ್ಯದಲ್ಲಿ ಹೊಸದೊಂದು ರಾಜಕೀಯ ಭಿನ್ನಾಭಿಪ್ರಾಯದ ಅಲೆ ಸೃಷ್ಟಿಯಾಗಿದೆ. ಈ ತರಹದ ಅಲೆ ಎಲ್ಲ ಜನರಿಗೆ ಹೊಸತೇನಲ್ಲ ಪ್ರತಿ ಬಾರಿ ಚುನಾವಣೆ ಆದ ನಂತರದಿAದ ಖಾತೆ ಹಂಚಿಕೆಯಿoದ ಹಿಡಿದು ಮಂತ್ರಿಗಿರಿಯ ವರೆಗೆ, ಮತ್ತೆ ಒಬ್ಬರನ್ನೊಬ್ಬರು ಟೀಕಿಸುವ ಅಲೆ, ಇವರೆಲ್ಲರನ್ನು ಆಯ್ಕೆ ಮಾಡಿ ಕಳಿಸಿದ ಜನರೆ ಮುಜುಗರ ಪಡುವಂತಹ ಇವರ ಒಂದಿಲ್ಲೊoದು ಪ್ರಕರಣಗಳ ಅಲೆ, ಹೀಗೆ ಹೇಳುತ್ತಾ ಹೋದರೆ ಈ ರಾಜಕೀಯ ಅಲೆಗಳು ಮುಗಿಯುವುದಿಲ್ಲ .ಮರಳಿ 5 ವರ್ಷದ ಬಳಿಕ ಚುನಾವಣೆ ಬರುವವರೆಗೂ ಈ ಅಲೆಯ ಅಬ್ಬರ ಸಾಗುತ್ತಲೇ ಇರುತ್ತದೆ. ಆದರೆ ಇಂದು ನಿತ್ಯ ಒಂದಾಲಲ್ಲೊoದು ರೀತಿಯಲ್ಲಿ ಸಾವಿನ ಸುಳಿಗೆ ಸಿಲುಕುತ್ತಿರುವ ಸೋಂಕಿತರ ಪ್ರಮಾಣ ಏರುತ್ತಿದೆ ಎಲ್ಲ ಕಡೆ ಸರಿಯಾದ ವೈದ್ಯಕೀಯ ಸೌಲಭ್ಯ ಗಳಿಲ್ಲದೇ ಸೊಂಕಿತರು ಪರದಾಡುತ್ತಿದ್ದಾರೆ. ಒಂದೇ ಕುಟುಂಬದಲ್ಲಿ ಅಲ್ಪ ಸಮಯದಲ್ಲಿ ಸಾಲು ಸಾಲು ಸಾವುಗಳು ಸಂಭವಿಸಿರುವ ಕರುಣಾಜನಕ ಸ್ಥಿತಿಯಲ್ಲಿ ಇಡೀ ನಾಡಿನ ಜನತೆ ಬದುಕುಳಿದರೆ ಸಾಕು ಎನ್ನುವ ಸಂಕೀರ್ಣತೆಯಲ್ಲಿರುವಾಗ ಜನರ ರಕ್ಷಣೆ ಕಡೆಗೆ ಮಾತ್ರ ಗಮನ ಹರಿಸಬೇಕಾಗಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಯಕತ್ವದ ಬದಲಾವಣೆ ಕುರ್ಚಿಗಾಗಿ ಬಡಿದಾಟ ರಾಜಕೀಯ ನಾಯಕರಲ್ಲಿನ ಭಿನ್ನಾಭಿಪ್ರಾಯಗಳು ಇವೆಲ್ಲವನ್ನು ನೋಡುತ್ತಿರುವ ಈ ನಾಡಿನ ಜನರು ನಿಜಕ್ಕೂ ರೋಸಿಹೋಗಿದ್ದಾರೆ.

ಎಲ್ಲರೂ ಗಮನ ಹರಿಸಬೇಕಾಗಿರುವುದು ಇಂದು ಬಂದೊದಗಿರುವ ಗಂಭೀರವಾದ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಜನರ ಆರೋಗ್ಯ ರಕ್ಷಣೆಗೆ ಇನ್ನೂ ಯಾವೆಲ್ಲ ರೀತಿಯಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಂದು ಅದೆಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟದಿoದ ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿವೆ. ಅದೆಷ್ಟೋ ಕೂಲಿ ಕಾರ್ಮಿಕರು ಇಂದಿನ ಸಂಕಷ್ಟದಿoದ ಕೆಲಸವಿಲ್ಲದೆ ನಿತ್ಯದ ಜೀವನ ನಿರ್ವಹಣೆಗೂ ಒದ್ದಾಡುತ್ತಿವೆ. ಇಂತಹ ಸ್ಥಿತಿ ಗತಿಗಳನ್ನು ಅರ್ಥೈಸಿಕೊಂಡು ರಾಜಕೀಯ ನಾಯಕರು ತಮ್ಮ ತಮ್ಮ ಒಳ ಮುನಿಸುಗಳನ್ನ ಬಿಟ್ಟು ಜನರ ಒಳಿತಿಗಾಗಿ ತಮ್ಮ ಸೇವೆಯನ್ನು ಮೀಸಲಿಡಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾಗಿ ಜನರಿಗೆ ನ್ಯಾಯ ಸಿಗಲು ಸಾಧ್ಯ. ಇಲ್ಲವಾದರೆ ವೈಯಕ್ತಿಕ ಹಿತಾಸಕ್ತಿ ಅಧಿಕಾರ ಪ್ರತಿಷ್ಠೆಗಾಗಿ ಮಾತ್ರ ಚುನಾವಣೆಗಳು ಆಡಳಿತ ಎಂದಾಗುತ್ತದೆ. ಉಳ್ಳವರು ತಮಗೆ ಏನೇ ಸಂಕಷ್ಟ ಬಂದರೂ ಸೂಕ್ತ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುತ್ತಾರೆ. ಮಧ್ಯಮ ವರ್ಗದವರು ಬಡವರು ನಿರ್ಗತಿಕರ ಗತಿಯೇನು?ಸರಕಾರ ನೀಡುತ್ತಿರುವ ಸೌಲಭ್ಯಗಳು ಆರ್ಥಿಕ ಪ್ಯಾಕೇಜ್‌ಗಳು ಕೆಳ ಹಂತದವರೆಗೂ ತಲುಪುವುದರ ಒಳಗಾಗಿ ಅದೆಷ್ಟೋ ಜೀವಗಳ ಬಲಿಯಾಗಬೇಕಾಗುತ್ತದೆ.

ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು ಶಿರಹಟ್ಟಿ

Leave a Reply

Your email address will not be published. Required fields are marked *

You May Also Like

ಬಿಜೆಪಿಯ ಉಷಾ ದಾಸರಗೆ ಅಧ್ಯಕ್ಷ ಗದ್ದುಗೆ ಪಕ್ಕಾ ! ಕಾಂಗ್ರೆಸ್ ಪಟ್ಟಕ್ಕೆರಲು ಕೊನೆಯ ಕಸರತ್ತು

ಉತ್ತರಪ್ರಭಗದಗ: ಗದಗ ಬೆಟಗೇರಿ ನಗರ ಸಭೆಯ 35 ವಾರ್ಡಗಳಲ್ಲಿ 18 ವಾರ್ಡಗಳಲ್ಲಿ ಬಿಜೆಪಿ, 15 ವಾರ್ಡಗಳಲ್ಲಿ…

ನಗರಸಭೆ ಚುನಾವಣೆ :ವಾರ್ಡ ನಂ22ರ ಕಾಂಗ್ರೇಸ್ ಅಭ್ಯರ್ಥಿ ಪರ ಮಾಜಿ ಶಾಸಕ ಡಿ ಆರ್ ಪಾಟೀಲ ಗಂಗಿಮಡಿಯಲ್ಲಿ ಪ್ರಚಾರ

ಗದಗ:ನಗರಸಭೆ ಚುನಾವಣೆ ಡಿ. 20-12-2021 ರಂದು ವಾರ್ಡ್ ನಂ 22 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ…

ಸದ್ದಿಲ್ಲದೆ ಸಾಗುತ್ತಿದೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿ:ಸಾವಿತ್ರಿ ಬಾಯಿ ಫುಲೆ” ಕಲಿಕಾ ಕೇಂದ್ರ

ಕೋರೊನಾ ಈ ಹೆಸರಿನ ಮಹಾಮಾರಿ ಯಾರಿಗೆ ಗೊತ್ತಿಲ್ಲ ದೇಶದಲ್ಲಿ ಈ ಮಹಾಮಾರಿಯಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಸಂಪ್ರದಾಯಿಕವಾಗಿ…

ಕೊರೋನಾ ಸೋಂಕು ಹರಡುತ್ತಿರುವುದರ ಹಿಂದಿನ ಕ್ವಾರಂಟೈನ್ ಕಥೆ ಏನು ಗೊತ್ತಾ..!

ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚತ್ತಲಿದ್ದು ಜನರಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ. ಆದರೆ ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬರುತ್ತದೆ ಎನ್ನುವಷ್ಟರಲ್ಲಿ ವಲಸಿಗರಿಗೆ ವಿನಾಯಿತಿ ನೀಡಲಾಯಿತು. ಇದು ಒಂದು ರೀತಿಯಿಂದ ಸೋಂಕು ಮತ್ತಷ್ಟು ಹರಡಲು ಕಾರಣವಾಯಿತು ಎನ್ನಬಹುದು.