ಮುಳಗುಂದ: ಪಟ್ಟಣದ ಹೃದಯ ಭಾಗದ ಗಾಂಧಿಕಟ್ಟಿಯ ಹತ್ತಿರ ವೃತ್ತ ಪ.ಪಂ ಮಾಜಿ ಸದಸ್ಯ ದಿ.ಆರ್.ಎನ್ ದೇಶಪಾಂಡೆ ಅವರ ಹೆಸರು ನಾಮಕರಣ ಮಡಬೇಕು. ಎಂದು ಉನ್ನತಿ ಮಹಿಳಾ ಸಮಾಜ ಸೇವೆ ಹಾಗೂ ವಿವಿದೋದ್ದೇಶಗಳ ಸಂಘ, ಜೈ ಮಾತಾ ಜೀಜಾಬಾಯಿ ಕ್ಷತ್ರೀಯ ಮರಾಠ ಮಹಿಳಾ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ.ಪಂ.ಮುಖ್ಯಾಧಿಕಾರಿ ಎಂಎಸ್.ಬೆಂತೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ದಿ. ಆರ್.ಎನ್.ದೇಶಪಾಂಡೆಯವರು ಶಿಕ್ಷಣ ಪ್ರೇಮಿ,ಭೂದಾನಿ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಜಾತಶತ್ರು, ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಸವೆಸಿದವರು. ಪಟ್ಟಣದ ಅಭಿವೃದ್ಧಿಗೆ ಕಾರಣರಾದ ಅವರ ಸೇವೆ ಅಚ್ಚಳಿಯದೇ ಉಳಿದಿದೆ, ಅವರ ಸವಿನೆನಪಿನ ಅಂಗವಾಗಿ ಪಟ್ಟಣದ ಹೃದಯ ಭಾಗದಲ್ಲಿ ವೃತ್ತಕ್ಕೆ ದಿ.ದೇಶಪಾಂಡೆ ಅವರ ಹೆಸರು ನಾಮಕರಣ ಮಾಡಬೇಕು. ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉನ್ನತಿ ಮಹಿಳಾ ವಿವಿದೋದ್ದೇಶ ಸಂಘದ ಉಪಾಧ್ಯಕ್ಷೆ ಮಂಗಳಾ.ಕೆ.ನೀಲಗುಂದ, ಸಂಘದ ಅಧ್ಯಕ್ಷೆ ಗೀತಾ ಜಾಧವ, ಆರ್.ಬಿ ಜಾಧವ, ವಿಜಯಲಕ್ಷ್ಮೀ, ಕಿರಣ ನೀಲಗುಂದ, ಪ್ರಸನ್ನಕುಮಾರ ಹಿರೇಮಠ, ಫಕ್ಕಿರೇಶ ಕತ್ತಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

You May Also Like

ಸಿಇಟಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ : ಸಂಪೂರ್ಣ ಮಾಹಿತಿ

ವೃತ್ತಿಪರ ಕೋರ್ಸ್ಗಳ ಆಯ್ಕೆಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳಾಪಟ್ಟಿ ಪ್ರಕಟವಾಗಿದೆ.

ರೈತನಿಗೆ ಆರ್ಥಿಕ ನೆರವು.

ಉತ್ತರಪ್ರಭ ಸುದ್ದಿ ಚಿಟಗುಪ್ಪ: ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ…

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ:ಶಾಸಕ ಬಂಡಿ

ಮನಸೊರೆಗೊಂಡ ಮಲ್ಲಕಂಬ ಪ್ರದರ್ಶನ ಉತ್ತರಪ್ರಭ ನರೆಗಲ್ಲ: ನೆಲದ ಮೇಲೆ ಮಾಡುವ ಯೋಗಾಸನವನ್ನು ಕಂಬದ ಮೇಲೆ ಚಾಕಚಕ್ಯತೆಯಿಂದ…

ಡಿವೈಎಸ್ ಪಿ ವೆಂಕಟಪ್ಪ ನಾಯಕಗೆ ಸನ್ಮಾನ.

ವರದಿ: ವಿಠಲ ಕೆಳೂತ್ಮಸ್ಕಿ: ರಾಷ್ಟ್ರಪತಿ ಪ್ರಶಸ್ತಿ ಪಡೆದ ಸಿಂಧನೂರಿನ ಡಿವೈಎಸ್ ಪಿ ವೆಂಕಟಪ್ಪ ನಾಯಕಗೆ ಮಾಜಿ…