ರೈತರ, ಜನರ ಧ್ವನಿ ಸರ್ಕಾರಕ್ಕೆ ಕೇಳುತ್ತಿಲ್ಲ: ಟಿ.ಈಶ್ವರ ಅಸಮಾಧಾನ

ಭಾಜಪಾ ಸರ್ಕಾರ ಕಂಪನಿ ಸರ್ಕಾರರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆರೈತರ, ಜನರ ಧ್ವನಿ ಸರ್ಕಾರಕ್ಕೆ ಕೇಳುತ್ತಿಲ್ಲಟಿ.ಈಶ್ವರ ಅಸಮಾಧಾನಕಾಂಗ್ರೆಸ್ ಮುಖಂಡ ಟಿ.ಈಶ್ವರ ಉತ್ತರಪ್ರಭ ವಿಶೇಷ ಚರ್ಚೆಯಲ್ಲಿ ಟಿ.ಈಶ್ವರ ಹೇಳಿಕೆ.

ಅದೇ ಮುಖದೊಂದಿಗೆ ಪ್ರೇಕ್ಷಕರಿಗೆ ಲಗ್ಗೆ ಇಡಲು ಸಜ್ಜಾಗಿದ್ದಾರೆ ಸಂದೇಶ

ವರನಟ ಡಾ. ರಾಜ್ ಕುಮಾರ್ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ ಚಲನಚಿತ್ರ ಇಂದಿಗೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಈ ವಿಚಾರ ಯಾಕೆ ಅಂತೀರಾ. ಈಗ ”ಅದೇ ಮುಖ” ಎಂಬ ಸಿನಿಮಾದ ಟೈಟಲ್. ಗಾಂಧಿನಗರದಲ್ಲಿ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ.

ಉತ್ತರ ಪ್ರಭ ಫಲಶೃತಿ: ಬೆಳೆ ಹಾನಿ ವೀಕ್ಷಿಸಿಸಿದ ಅಧಿಕಾರಿಗಳು

ರೋಣ: ಇತ್ತಿಚೆಗಷ್ಟೆ ಅಪಾರ ಮಳೆಯಿಂದ ರೈತರ ಬೆಳೆ ಹಾನಿಗೀಡಾಗಿತ್ತು. ಇದರಿಂದ ಸವಡಿ ಗ್ರಾಮದ ರೈತ ಮೇಘರಾಜ್ ಬಾವಿ ಅವರ ಜಮೀನಿನಲ್ಲಿ ಬೆಳೆದ ಬೆಳೆ ಹಾನಿ ಕುರಿತು ನಿಮ್ಮ ಉತ್ತರಪ್ರಭ ವರದಿ ಬಿತ್ತರಿಸಿತ್ತು. ವರದಿ ಪರಿಣಾಮ ಇಂದು ಸವಡಿ ಗ್ರಾಮಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಗೀಡಾದ ಬೆಳೆ ವೀಕ್ಷಿಸಿದರು.

ಪೊಲೀಸರ ಮೂಲಕ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಫೋನ್ ಟ್ರ್ಯಾಪ್

ಪೊಲೀಸರ ಮೂಲಕ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಫೋನ್ ಟ್ರ್ಯಾಪ್ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಎನ್ ಹೆಚ್ ಕೊನರೆಡ್ಡಿ ಗಂಭೀರವಾದ ಆರೋಪ ಮಾಡಿದರು.

ಬಂದ್ ಗೆ ಬೆಂಬಲಿಸಿ ಹುಬ್ಬಳ್ಳಿಯಲ್ಲಿ ಕ್ರಾಂತಿ ಗೀತೆಗಳ ಕಹಳೆ..!

ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ದಲಿತ ಸಂಘಟನೆಗಳು ಜನಪರಹಾಡುಗಳನ್ನು ಹಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದವು.

ಲಕ್ಷ್ಮೇಶ್ವರ: ಕೆಸರು ಗದ್ದೆಯಂತಾದ ರಸ್ತೆಗಳು

ಲಕ್ಷ್ಮೀ ನಗರದ 5 ಮತ್ತು 6 ನೇ ವಾರ್ಡಿನ ರಸ್ತೆಗಳು ಕೆಸರುಗದ್ದೆಯಂತಾಗಿದೆ. ಮಳೆಯಿಂದಾಗಿ ಓಡಾಡುವುದಕ್ಕೆ ತೊಂದರೆ ಆಗುತ್ತಿದೆ. ಮನೆಯಿಂದ ಹೊರಗಡೆ ಬರುವುದಕ್ಕೆ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರ ಗೋಳಂತು ಹೇಳತೀರದು. ರಸ್ತೆಯಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ.

ಧುಮ್ಮಿಕ್ಕುತ್ತಿವೆ ಕಿರು ಜಲಧಾರೆಗಳು,ಕೋಟೆ ನಾಡಿನಲ್ಲಿ ಜಲಧಾರೆಗಳ ವೈಭವ

ಐತಿಹಾಸಿಕ ಹಿನ್ನಲೆ ಹೊಂದುವುದರ ಜತೆಗೆ ಬರದ ನಾಡೆಂದೆ ಬಿಂಬಿತವಾಗಿರುವ ಕೋಟೆ ನಾಡು ಗಜೇಂದ್ರಗಡದಲ್ಲಿ ಈಚೆಗೆ ಸತತವಾಗಿ ಸುರಿದ ಮಳೆಯಿಂದ ಕೋಟೆ ಕೊತ್ತಲುಗಳು ಮಧುವಣಗಿತ್ತಿಯಂತೆ ಹಸಿರೊದ್ದು ನಿಂತಿವೆ. ಅಗಾಧ ಪ್ರಕೃತಿ ಸೌಂದರ್ಯದ ಒಡಲಿನಲ್ಲಿರಿಸಿ ಘನ ಗಾಂಭಿರ್ಯದಿAದ ತೆಲೆಯತ್ತಿರುವ ಬೆಟ್ಟಗಳಲ್ಲಿ ವಯ್ಯಾರದಿಂದ ಧುಮುಕುತ್ತಿರುವ ಕಿರು ಜಲಪಾತಗಳು ಜನರನ್ನು ತನ್ನತ್ತ ಆಕರ್ಷಿಸುತ್ತಿವೆ.

ನಾಳೆ ರೈತಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಇಂದು ಹುಬ್ಬಳ್ಳಿಯಲ್ಲಿ ಸಭೆ

ಹುಬ್ಬಳ್ಳಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಾಳೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ವಿವಿಧ ಸಂಘನೆಗಳಿಂದ ನೂರಾರು ಕಾರ್ಯಕರ್ತರು ಭಾಗಿಯಾಗಿ ವಿವಿಧ ವಿಷಯಗಳನ್ನು ಚರ್ಚಿಸಿದರು.

ಹುಬ್ಬಳ್ಳಿ :ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕು ಜಯನಗರದಲ್ಲಿ

ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ಅಲ್ಲಿ ನೀವು ಏನಾದರೂ ಸಂಚಾರ ಮಾಡಬೇಕು ಎಂದರೆ ಸ್ವಲ್ಪ ಎಚ್ಚರಿಕೆ ಇರಬೇಕು. ಸ್ವಲ್ಪ ಅಪ್ಪ ತಪ್ಪಿದರೆ ಸೊಂಟ,‌ಅಥವಾ ಕೈಕಾಲು ಮುರಿಯುವುದು ಗ್ಯಾರಂಟಿ. ಇದು ನಗರದ ಕಿಮ್ಸ್ ಆಸ್ಪತ್ರೆಯ ಎದುರಿಗಿನ ಜಯನಗರ ರಸ್ತೆ. ಮಳೆಯಾದರೂ ಅಂತೂ ಮಳೆಯ ನೀರು ಮನೆ ತುಂಬೆಲ್ಲಾ ನುಗ್ಗುತ್ತವೆ.

ಮಳೆಗೆ ವೆಂಕಟಾಪೂರ ರಸ್ತೆ ಸಂಪೂರ್ಣ ಕಡಿತ

ಮಸ್ಕಿ: ಶುಕ್ರವಾರ ರಾತ್ರಿ ಸುರಿದ ಮಳೆಗೆ ಕಿರು ಹಳ್ಳ ಹರಿದು ಬಂದು ವೆಂಕಟಾಪೂರ ರಸ್ತೆ ಕಡಿತವಾಗಿದೆ. ಈ ರಸ್ತೆ ಮಾರ್ಗದಲ್ಲಿ ಕಿರು ಹಳ್ಳ ಹರಿದು ಡಾಂಬರ್ ರಸ್ತೆ ಕಿತ್ತು ಹೋಗಿ ರಸ್ತೆ ಸಂಪೂರ್ಣ ಕಡಿತವಾಗಿದೆ. ಈಚೆಗೆ ಮಸ್ಕಿ ಪಟ್ಟಣದಿಂದ ವೆಂಕಟಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು, ಕಾಮಗಾರಿ ಕೈಗೊಳ್ಳುವ ವೇಳೆಯಲ್ಲಿ ಹಳ್ಳ ಬರುವ ಜಾಗದಲ್ಲಿ ಕಿರು ಸೇತುವೆ ನಿರ್ಮಿಸಬೇಕೆಂಬ ಪರಿಜ್ಞಾನ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಇಲ್ಲವೇ ಎಂದು ಸಾರ್ವಜನಿಕರು ದೂರಿದ್ದಾರೆ.

ನೂರು ಮರಗಳನ್ನು ದತ್ತು ಪಡೆದ ಮಾಜಿ ಸಚಿವ ಎಸ್.ಎಸ್.ಪಾಟೀಲ್

ಇಂದಿನ ಜಾಕತಿಕ ತಾಪಮಾನ ವೈಪರಿತ್ಯ ಹಿನ್ನೆಲೆ ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಮರಗಳ ದತ್ತು ಸ್ವೀಕಾರ ಕಾರ್ಯ ಶ್ಲಾಘನೀಯ ಎಂದು ಮಾಜಿ ಅರಣ್ಯ ಹಾಗೂ ಸಹಕಾರ ಸಚಿವ ಎಸ್.ಎಸ್.ಪಾಟೀಲ್ ಹೇಳಿದರು.

ಲಕ್ಷ್ಮೇಶ್ವರ :ವಿಶ್ವ ಜೌಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮ

ವಿಶ್ವ ಜೌಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಲಕ್ಷ್ಮೇಶ್ವರ ತಾಲೂಕು ನೋಂದಾಯಿತ ಜೌಷಧಿ ವ್ಯಾಸ್ಥಾರ ಸಂಘದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋವಿಡ ಜಾಗೃತಿ ಜಾಥಾಕ್ಕೆ ಸಿಪಿಐ ವಿಕಾಶ ಲಮಾಣಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಜೌಷಧಿ ವ್ಯಾಪಾರಸ್ಥರು ವೈದ್ಯರು ತಾಳ್ಮೆ ಕಳೆದುಕೊಳ್ಳದೆ ಕಾರ್ಯನಿರ್ವಹಿಸುವ ಮೂಲಕ ತಮ್ಮ ಸೇವೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ವೈದ್ಯಕೀಯ ಲೋಕದಲ್ಲಿ ಜೌಷಧಿ ತಜ್ಞರು ಹಾಗೂ ವೈದ್ಯರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.