ನರೇಗಲ್ಲ್ ನಲ್ಲಿ ಸಹಾಯಧನ ಬಾರದೆ ಅರ್ಧಕ್ಕೆ ನಿಂತ ಮನೆಗಳು!
ನರೇಗಲ್: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯ ಅಡಿಯಲ್ಲಿ 2013/14,2017/18, ಹಾಗೂ 2018/19 ಪಿ.ಎಮ್.ವೈ ಪ್ರಧಾನ ಮಂತ್ರಿ ಆವಾಸ್ ಯೋಜನೆ, ವಾಜಪೇಯಿ ವಸತಿ ಯೋಜನೆ, ಅಂಬೇಡ್ಕರ್ ಆವಾಸ್ ಯೋಜನೆ, ಅಡಿಯಲ್ಲಿ ಐದು ನೂರಕ್ಕೂ ಹೆಚ್ಚು ಫಲಾನುಭವಿಗಳು ಆಯ್ಕೆ ಆಗಿದ್ದು ಹಲವು ವರ್ಷಗಳು ಕಳೆದರು ಯಾವುದೇ ಫಲಾನುಭವಿಗಳಿಗೆ ಸಂಪೂರ್ಣ ಸಹಾಯಧನ ಬಂದಿಲ್ಲ. ಇದರಲ್ಲಿ ಅರ್ಧ ಮನೆಗಳು ಕಟ್ಟಡ ಸಂಪೂರ್ಣ ಮುಗಿದಿದ್ದು ಇನ್ನುಳಿದ ಮನೆಗಳು ಅರ್ಧಕ್ಕೆ ನಿಂತಿವೆ. ಸೂರು ಇಲ್ಲದವರಿಗೆ ಸೂರು ಒದಗಿಸಲು ಅರ್ಜಿ ಆಹ್ವಾನ ಮಾಡಿದ್ದು ಅದರಂತೆ ಅರ್ಜಿಯನ್ನು ಹಾಕಿದ ಫಲಾನುಭವಿಗಳಿಗೆ ಒಂದೊ-ಎರಡು ಕಂತು ಹಣ ಬಂದಿದ್ದು ಇನ್ನುಳಿದ ಕಂತುಗಳ ಸಹಾಯಧನ ಬಾರದೆ ಅರ್ಧಕ್ಕೆ ನಿಂತ ಮನೆಗಳ ಫಲಾನುಭವಿಗಳ ಗೋಳು ಕೇಳೋರು ಯಾರು? ಎನ್ನುವಂತಾಗಿದೆ.