ನರೆಗಲ್: ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಹಾಗು ದೇಶದ ಬಹುದೊಡ್ಡ ಆಸ್ತಿ ಎಂದು ನರೆಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷೆ  ಅಕ್ಕಮ್ಮ ಯ ಮಣೋಡ್ಡರ ಹೇಳಿದರು.

ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಐದು ವರ್ಷದ ಎಲ್ಲಾ ಮಕ್ಕಳಿಗೆ ತಪ್ಪದೆ ಪೋಲಿಯೊ ಲಸಿಕೆ ಹಾಕಿಸಿ ಹಾಗೂ ಮಕ್ಕಳ ಜೀವಕ್ಕೆ ಮುಂದೆ ಆಗುವ ಅಪಾಯವನ್ನು ತಪ್ಪಿಸಲು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎ.ಡಿ.ಸಾಮುದ್ರಿ ಮಾತನಾಡಿ, ಪೋಲಿಯೊ ಮುಕ್ತ ದೇಶ ನಮ್ಮದಾಗಲಿ 1995 ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು, ಮೊದಲು ಎರಡು ಸುತ್ತು ಪಲ್ಸ್ ಪೋಲಿಯೊ ಹಾಕಲಾಗುತ್ತಿತ್ತು. ಕಳೆದ ವರ್ಷದಿಂದ ಒಂದು ಸುತ್ತು ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.

ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೂರಧಾನ್ಯಮಠ ಮಾತನಾಡಿ, ಭಾರತವು ಪೋಲಿಯೊ ಮುಕ್ತ ದೇಶವಾಗಿದೆ. ಆದರೆ ನೆರೆ ಹೊರೆ ದೇಶಗಳಲ್ಲಿ ಇನ್ನೂ ಪೊಲೀಯೊ ಸಮಸ್ಯೆ ಇದೆ. ಈ ನಿಟ್ಟಿನಲ್ಲಿ ದೇಶದಲ್ಲಿ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿ ಮಕ್ಕಳನ್ನು ಕಾಪಾಡಬೇಕು ಎಂದರು

ಎಸ್.ಎಫ್.ಅಂಗಡಿ, ಎಸ್.ಎನ್.ಪಾಟೀಲ, ಎಂ.ಎಚ್.ಜಾಲಿಹಾಳ, ಎಂ.ಎ.ಡಾಲಾಯತ್, ಜೆ.ಎಸ್.ಬಿಭೂತಿ, ಶೋಭಾ ಪಲ್ಲೇದ, ಜ್ಯೋತಿ ಪಲ್ಲೇದ, ಪಿ.ಸಿ.ಹಳಗೇರಿ, ರತ್ನಾ ಧರ್ಮಾಯತ, ಎಸ್.ವಿ.ಹಿರೇವಡೆಯರ, ವಿರಣ್ಣ ಕಮಲಾಪುರ, ಚಂದ್ರು ಹುನಗುಂಡಿ, ರಾಮಚಂದ್ರ ಕಜ್ಜಿ, ವಿ.ಬಿ.ಪೋಲಿಸ್ ಪಾಟೀಲ, ಎಸ್.ಎಸ್.ಮುಚಕಂಡಿ, ಭಾಗ್ಯಲಕ್ಷ್ಮೀ ಅರಕೇರಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಮಹಾರಾಷ್ಟ್ರಕ್ಕೆ ಖಡಕ್ ಸಂದೇಶ ರವಾನಿಸಿದ ಲಕ್ಷ್ಮಣ್ ಸವದಿ!

ಬೆಳಗಾವಿ : ಡಿಸಿಎಂ ಲಕ್ಷ್ಮಣ ಸವದಿ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗೇಟು ನೀಡಿ, ವಾಗ್ದಾಳಿ ನಡೆಸಿದ್ದಾರೆ.

ಶಿರಹಟ್ಟಿ: ನೂತನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಉದ್ಘಾಟನೆ

ಕಳೆದ ಹತ್ತು ತಿಂಗಳಿನಿಂದ ನೆನೆಗುದಿಗೆ ಬಿದಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ನೂತನ ಕೇಂದ್ರ ಕಚೇರಿಯನ್ನು ಮಂಗಳವಾರ ಶಾಸಕ ರಾಮಣ್ಣ ಲಮಾಣಿ ಉದ್ಘಾಟಿಸಿದರು.

ಲೋಕಸಭೆಯಲ್ಲಿ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಮಂಡನೆ –ಮತದಾರರ ಪಟ್ಟಿಗೆ ಆಧಾರ ಜೊಡಣೆ ಪ್ರತಿಪಕ್ಷ ವಿರೋಧ

ದೆಹಲಿ:ಲೋಕಸಭೆಯಲ್ಲಿ ಚುಣಾವಾಣಾ ಕಾನೂನು (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ತಿದ್ದುಪಡಿಯಲ್ಲಿ ಮುಖ್ಯವಾಗಿ ನಕಲಿ ಮತದಾರರನ್ನು ತಡೆಯುವುದು…