ನರೇಗಲ್: ಸಮೀಪದ ಕೂತಬಾಳ ಗ್ರಾಮದ ಬಸವ ಬಳಗ ಜಾನಪದ ಸಾಂಸ್ಕೃತಿಕ ಕಲಾತಂಡ ಅಧ್ಯಕ್ಷ ಹಾಗೂ ಸಗರ ಕಲಾ ಚಕ್ರವರ್ತಿ ಪ್ರಶಸ್ತಿ ಪುರಸ್ಕೃತ ಬಸವರಾಜ ಪಾಗದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.

ಜನಪದ ಸಾಹಿತ್ಯದಲ್ಲಿ ತಮ್ಮದೇಯಾದ ವಿನೂತ ಶೈಲಿಯ ಹಾಸ್ಯದ ಮೂಲಕ ಪಾಗದ ಮನೆಮಾತಾಗಿದ್ದರು. ಮಿಮಿಕ್ರಿಯೆ, ವಿವಿಧ ಜನಾಂಗದ ವೇಷ ಭೂಷಣಗಳೂಂದಿಗೆ ಅಭಿನಯಿಸಿ ಜನಪದ ಸಾರವನ್ನು ಜನರಿಗೆ ತಲುಪಿಸಿದ ಕೀರ್ತಿ ಬಸವರಾಜ ಪಾಗದ ಅವರಿಗೆ ಸಲ್ಲುತ್ತದೆ‌.
ಪ್ರಸ್ತುತ ದಿನಮಾನದಲ್ಲಿ ಜಾನಪದ ಕಲೆಗೆ ತನ್ನದೇಯಾದ ಕೊಡುಗೆ ನೀಡುತ್ತಿರುವ ಕೊತಬಾಳ ಗ್ರಾಮದಲ್ಲಿ ಹಿರಿಯ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ್ ಅವರೊಂದಿಗೆ ಇಪ್ಟಾ, ಅರುಣೋದಯ ಕಲಾ ತಂಡಗಳ ಮೂಲಕ ಜಾನಪದ ಕ್ಷೇತ್ರಕ್ಕೆ ತಮ್ಮನ್ನು ಪರಿಚಯಿಸಿಕೊಂಡ ಪಾಗದ ನಿಧನ ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಗಾರ್ಡನ್ ದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟನೆ

ಆಲಮಟ್ಟಿ : ಇಲ್ಲಿನ ಬಹು ವೈವಿಧ್ಯಮಯ ನಾನಾ ಬಗೆಯ ಉದ್ಯಾನವನಗಳ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ…

ನಾವು ಜನರ ಪರ, ಭ್ರಷ್ಟ ಸರ್ಕಾರದ ಪರವಲ್ಲ: ಸಿದ್ದು

ಬೆಂಗಳೂರು: ಕೋವಿಡ್ ಸಂಬಂಧಿ ಪಿಪಿಇ ಕಿಟ್ ಮತ್ತು ಇತರ ಸಲಕರಣೆ ಕೊಳ್ಳುವಾಗ ಸರ್ಕಾರ ಭಾರಿ ದುಡ್ಡು…

ಸಿಡಿಲು ಬಡಿದು ಇಬ್ಬರು ಸಾವು

ಉತ್ತರಪ್ರಭಶಿರಹಟ್ಟಿ: ಪಟ್ಟಣದ ಹೊರವಲಯದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ…

ಪ.ಜಾ-ಪ.ಪಂ ಕುಂದುಕೊರತೆ ಸಭೆ

ನಗರದ ಡಿ.ಸಿ.ಮಿಲ್ ತಳಗೇರಿ ಓಣಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ ಆಯೋಜಿಸಲಾಯಿತು.