ನರೇಗಲ್: ಮತದಾನ ಎಂಬುದು ಸಂವಿಧಾನ ನೀಡಿರುವ ಅತ್ಯಮೂಲ್ಯವಾದ ಹಕ್ಕು ಅದನ್ನು  ಸಮರ್ಥವಾಗಿ ಬಳಸಿಕೊಂಡು ಎಲ್ಲರೂ ತಪ್ಪದೆ  ಮತದಾನ ಮಾಡುವ ಅಗತ್ಯವಿದೆ ಎಂದು ಪ್ರಾಚಾರ್ಯ ವೈ.ಸಿ.ಪಾಟೀಲ ಹೇಳಿದರು.

ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸ್ಥಳೀಯ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕ ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಪಾವಿತ್ರ್ಯತೆ, ಮಹತ್ವ ಅರಿಯದ ಹಲವರು ಮತದಾನದಲ್ಲಿ ಪಾಲ್ಗೊಳ್ಳದೆ ಇರುವುದರಿಂದ ಉತ್ತಮ ಅಭ್ಯರ್ಥಿ ಚುನಾಯಿಸುವ ಸುವರ್ಣಾವಕಾಶಗಳು ಕೈತಪ್ಪುತ್ತವೆ ಎಂದರು.  ದೇಶದ ಭವಿಷ್ಯ ಯುವಕರ ಕೈಯಲ್ಲಿದೆ  ಗ್ರಾಮ ಪಂಚಾಯ್ತಿ ಚುನಾವಣೆಯೂ ತನ್ನ ಪಾತ್ರವನ್ನು ವಹಿಸಲಿದೆ ಆದ್ದರಿಂದ ಮತದಾನ ಬಗ್ಗೆ ನಕಾರಾತ್ಮಕ ಮನೋಭಾವ ತೋರದೆ ಸಕ್ರಿಯರಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಕರೆ ಕೊಟ್ಟರ.

ಬಸವರಾಜ ಗಿರಿತಮ್ಮಣ್ಣವರ, ಎಸ್.ಸಿ.ಗುಳಗಣ್ಣವರ, ಎಂ.ವಿ.ಜೂಜನಿ, ಪಿ.ಎನ್.ಬಳೂಟಗಿ, ಬಸವರಾಜ ಹೊಳಿ, ಎಫ್.ಎನ್.ಹುಡೇದ, ಎಂ.ಎ.ನದಾಫ್, ಸಂಗಮೇಶ ವಸ್ತ್ರದ, ಅನುಪಮಾ ಮೂಡಬಿದರೆ ಇದ್ದರು.

Leave a Reply

Your email address will not be published. Required fields are marked *

You May Also Like

1ನೇ ಮತ್ತು 20ನೇ ವಾರ್ಡ ಕಾಂಗ್ರೇಸ್ 31ನೇ ವಾರ್ಡ ಬಿಜೆಪಿ

ಗದಗ ಬೇಟಗೇರಿ:ನಗರ ಸಭೆ 1, 20, 31ನೇ ವಾರ್ಡನ ಮತ ಎಣಿಕೆ ಮುಕ್ತಾಯವಾಗಿದ್ದು , 1ನೇ…

ಸಾರಿಗೆ ಮುಷ್ಕರ: ಕೋಡಿಹಳ್ಳಿ ಅವರಿಗೆ 10 ಲಕ್ಷ ಪರಿಹಾರ ಕೇಳಿದ ವಿದ್ಯಾರ್ಥಿನಿ

ಬೇಡಿಕೆ ಇಡೆರಿಕೆಗೆ ಒತ್ತಾಯಿಸಿ ಏ.7 ರಿಂದಲೇ ರಾಜ್ಯವ್ಯಾಪಿ ಎಲ್ಲ ನಿಗಮಗಳಲ್ಲಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಮುಷ್ಕರ ಹಿನ್ನೆಲೆ ಸರ್ಕಾರಿ ಬಸ್ ಗಳು ರಸ್ತೆಗೆ ಇಳಿಯುತ್ತಿಲ್ಲ. ಸಾರಿಗೆ ನೌಕರರ ಮುಷ್ಕರ ಕಾರಣದಿಂದ ಖಾಸಗಿ ವಾಹನಗಳಿಗೆ ಪ್ರಯಾಣಿಕರು ಹೆಚ್ಚಿನ ಹಣ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

” ಶಿಕ್ಷಕ- ಮಕ್ಕಳಲ್ಲಿ ನವ ಚೇತನ ತುಂಬಿದ ವಿಷಯ ವೇದಿಕೆ ” ಚಿತ್ರಕಲೆ ಪಠ್ಯಗಳ ಜೀವಾಳ

ಉತ್ತರಪ್ರಭ ಸುದ್ದಿವಿಜಯಪುರ: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಹಾಗು ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಸಹಕಾರಿಯಾಗಿದೆ ಅಲ್ಲದೇ ಪಠ್ಯಾಧಾರೀತ…

ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬುಡಮೇಲು ಸಮೇತ ಜನರೇ ಕಿತ್ತೆಸೆಯುತ್ತಾರೆ – ಸಿ.ಟಿ.ರವಿ ವಾಗ್ದಾಳಿ

ಕುಕ್ಕರ್ ಬಾಂಬರ್ ಗಳಿಗೆ ಬಿರಿಯಾನಿ ತಿನ್ನಿಸುವವರು ಅಧಿಕಾರಕ್ಕೆ ಬಂದರೆ ಭದ್ರತೆಗೆ ಅಪಾಯ !ನಿಡಗುಂದಿ: ರಾಜ್ಯದಲ್ಲಿ ಕುಕ್ಕರ್…