ನಿಂಗಪ್ಪ ಬಿ, ಮಡಿವಾಳರ

ನರೇಗಲ್‌: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯ ಅಡಿಯಲ್ಲಿ 2013/14,2017/18, ಹಾಗೂ 2018/19 ಪಿ.ಎಮ್.ವೈ ಪ್ರಧಾನ ಮಂತ್ರಿ ಆವಾಸ್ ಯೋಜನೆ, ವಾಜಪೇಯಿ ವಸತಿ ಯೋಜನೆ, ಅಂಬೇಡ್ಕರ್ ಆವಾಸ್ ಯೋಜನೆ, ಅಡಿಯಲ್ಲಿ ಐದು ನೂರಕ್ಕೂ ಹೆಚ್ಚು ಫಲಾನುಭವಿಗಳು ಆಯ್ಕೆ ಆಗಿದ್ದು ಹಲವು ವರ್ಷಗಳು ಕಳೆದರು ಯಾವುದೇ ಫಲಾನುಭವಿಗಳಿಗೆ ಸಂಪೂರ್ಣ ಸಹಾಯಧನ ಬಂದಿಲ್ಲ. ಇದರಲ್ಲಿ ಅರ್ಧ ಮನೆಗಳು ಕಟ್ಟಡ ಸಂಪೂರ್ಣ ಮುಗಿದಿದ್ದು ಇನ್ನುಳಿದ ಮನೆಗಳು ಅರ್ಧಕ್ಕೆ ನಿಂತಿವೆ. ಸೂರು ಇಲ್ಲದವರಿಗೆ ಸೂರು ಒದಗಿಸಲು ಅರ್ಜಿ ಆಹ್ವಾನ ಮಾಡಿದ್ದು ಅದರಂತೆ ಅರ್ಜಿಯನ್ನು ಹಾಕಿದ ಫಲಾನುಭವಿಗಳಿಗೆ ಒಂದೊ-ಎರಡು ಕಂತು ಹಣ ಬಂದಿದ್ದು ಇನ್ನುಳಿದ ಕಂತುಗಳ ಸಹಾಯಧನ ಬಾರದೆ ಅರ್ಧಕ್ಕೆ ನಿಂತ ಮನೆಗಳ ಫಲಾನುಭವಿಗಳ ಗೋಳು ಕೇಳೋರು ಯಾರು? ಎನ್ನುವಂತಾಗಿದೆ.

ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಓಟ ಕೇಳಲು ನೂರಾರು ಭರವಸೆ ಕೊಡುತ್ತಾರೆ. ಬಡವರಿಗೆ ವಸತಿ ನೀಡುತ್ತೇವೆ. ಗುಡಿಸಲು ಮುಕ್ತ ಭಾರತ ಮಾಡುತ್ತೆವೆ ಎನ್ನುವ ಭರವಸೆ ಎನೊ ಕೊಡ್ತಾರೆ. ಆದ್ರೆ ಆ ಭರವಸೆಗಳು ಇಡೆರಿದೆಯಾ ಎನ್ನುವ ಯೊಚನೆಯೂ ಕೂಡಾ ಯಾರಿಗೂ ಬರುವುದಿಲ್ಲ. ವರದಿಯೊಂದರ ಪ್ರಕಾರ ಶೇ.35 ಬಡಜನತೆ ಇಂದಿಗೂ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ಅಥವಾ ಬೀದಿಯಲ್ಲಿ ಮಲಗುವ ಸ್ಥಿತಿ ಕಾಣಬಹುದು. 2022 ಒಳಗೆ ಗುಡಿಸಲು ಮುಕ್ತ ಭಾರತ ಮಾಡುತ್ತೆವೆ ಎಂದು ಹೇಳುವ ರಾಜಕಾರಣೆಗಳಿಗೆ ಜನರು ಛಿಮಾರಿ ಹಾಕುತ್ತಿದ್ದಾರೆ.

ವಿವಿಧ ಯೋಜನೆಯಗಳ ಉದ್ದೇಶ ಸ್ವಂತ ಜಾಗವನ್ನು ಹೊಂದಿದ ಫಲಾನುಭವಿಗಳಿಗೆ ವಸತಿ ಯೋಜನೆ ಅಡಿಯಲ್ಲಿ ಮನೆ ಕಟ್ಟಿಕೊಳ್ಳಲು ಸರಕಾರ ವಸತಿ ಯೋಜನೆ ಜಾರಿಗೆ ತಂದಿದೆ. ಅಂದಾಜು 260 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಮನೆ ಕಟ್ಟಲು ಫಲಾನುಭವಿಗಳು ಸಹಾಯ ಧನವೆಂದು ಒಟ್ಟು 2,70000 ಸಾವಿರ ಇದರಲ್ಲಿ ರಾಜ್ಯ ಸರ್ಕಾರದ ಸಹಾಯಧನ 1,20,000 ಕೇಂದ್ರ ಸರ್ಕಾರದ ಸಹಾಯಧನ 1,50,000 ಆದರೆ ಬಡ ಜನತೆಗೆ ಸರ್ಕಾರದ ಸಹಾಯಧನ ತಲುಪುವುದು ತುಂಬಾ ವೀರಳ. ಮನೆ ನಿರ್ಮಾಣಕ್ಕಿಂತ ಫಲಾನುಭವಿಗಳಲ್ಲಿ ವೇದನೆ ಹೆಚ್ಚು ಸೃಷ್ಟಿಯಾಗಿದೆ.
ಸರ್ಕಾರ ಬಡವರಿಗಾಗಿ ಮೀಸಲಿಟ್ಟ ಸಹಾಯಧನ ಕೂಡಲೇ ಮನೆಯನ್ನು ನಿರ್ಮಿಸಿಕೊಂಡವರಿಗೆ ಹಾಗೂ ಅರ್ಧಕ್ಕೆ ನಿಂತ ಮನೆಗಳಿಗೆ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಫಲಾನುಭವಿಗಳು ಒತ್ತಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವುದೆ ಎಂದು ಕಾದು ನೋಡಬೇಕಿದೆ.


ಅಲೆದಾಡಿ ಸಾಕಾಗಿದೆ
ಕಳೆದ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಳ್ಳಲು ಪ್ರಾರಂಬಿಸಿದ್ದೆವೆ. ಮನೆಯ ಜಿಪಿಎಸ್ ಕೂಡ ಮಾಡಿಕೊಂಡು ಹೋಗಿದ್ದಾರೆ. ಹಣ ಜಮಾ ಮಾಡುವಂತೆ ಕೇಳಿದರೆ ನಿಗಮದಿಂದ ಹಣ ಬಂದಿಲ್ಲ. ಹಣ ಬಂದ ಮೇಲೆ ಜಮಾ ಆಗುತ್ತದೆ ಎಂದು ಹೇಳಿ ಕಳಿಸುತ್ತಾರೆ. ಹಾಗೂ ಪಟ್ಟಣ ಪಂಚಾಯತಿಗೆ ಅಲೆದಾಡಿ ಸಾಕಾಗಿದೆ ಇದರಿಂದ ಮನೆಯೆ ಬೇಡ ಎನ್ನುವಂತಾಗಿದೆ.
-ಹನಮಂತ, ಫಲಾನುಭವಿ

ಸಹಾಯಧನ ಬಿಡುಗಡೆ ಮಾಡಿ
ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಮನೆಗಳಿಗೆ ಹಾಗೂ ಅರ್ಧಕ್ಕೆ ನಿಂತ ಮನೆಗಳಿಗೆ ಸರ್ಕಾರದಿಂದ ಸಹಾಯ ಧನ ಬಿಡುಗಡೆ ಆಗದಿರುವದರಿಂದ ಬಡ ಜನರಿಗೆ ತುಂಬಾ ತೊಂದರೆ ಆಗಿದೆ. ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿಗಳಿಗೆ ಉಳಿದ ಸಹಾಯಧನವನ್ನು ಬಿಡುಗಡೆ ಮಾಡಬೇಕು.
-ಬಸೀರಬಾನು ನಧಾಪ್, ಪಪಂ ಸದಸ್ಯೆ


ಮನೆ ಇಲ್ಲದವರಿಗೆ ಮಾನ ಇಲ್ಲ ಎನ್ನುವಂತಾಗಿದೆ ನಮ್ಮ ಪರಿಸ್ಥಿತಿ. ಕಳೆದ ಹಲವು ವರ್ಷದಿಂದ ಬಾಡಿಗೆ ಮನೆಯಲ್ಲೇ ವಾಸವಿದ್ದು ಬಾಡಿಗೆಗೆ ಕೊಟ್ಟ ಮಾಲೀಕರು ಮನೆ ಬಿಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದಷ್ಟು ಬೇಗ ಇನ್ನುಳಿದ ಕಂತುಗಳ ಸಹಾಯ ಧನ ಬಿಡುಗಡೆ ಮಾಡಿದರೆ ಪೂರ್ತಿಯಾಗಿ ಮನೆ ಕಟ್ಟಿಸಿಕೊಳ್ಳಲು ಅನುಕೂಲ ವಾಗುತ್ತದೆ.
-ಹಸನಸಾಬ್, ಫಲಾನುಭವಿ

ಸತತವಾಗಿ ಎರಡು ವರ್ಷಗಳಿಂದ ಕೊರೊನಾ ಅಲೆಯಿಂದ ಸಹಾಯಧನ ಬರುವುದು ತಡವಾಗಿದೆ. ಸಂಬಂಧಪಟ್ಟ ನಿಗಮಗಳಿಗೆ ಈಗಾಗಲೇ ಸಹಾಯಧನ ಬರದೆ ಇರುವ ಫಲಾನುಭವಿಗಳ ಬಗ್ಗೆ ಹಾಗೂ ಅವರ ಮನೆಗಳ ಜಿಪಿಎಸ್ ಮಾಡಿ ಮಾಹಿತಿ ಕಳಿಸಿದ್ದು, ಆದಷ್ಟು ಬೇಗ ಇನ್ನುಳಿದ ಕಂತುಗಳ ಸಹಾಯಧನ ನೀಡಲಾಗುವುದು.
-ಮಹೇಶ ನಿಡಶೇಶಿ, ಪ.ಪಂ ಮುಖ್ಯಾಧಿಕಾರಿ

Leave a Reply

Your email address will not be published. Required fields are marked *

You May Also Like

ಭಾವೈಕ್ಯದ ಮಾಧುರ್ಯ ಬೆಳಕು ತೋಂಟದ ಸಿದ್ದಲಿಂಗ ಶ್ರೀ- ಪ್ರೊ.ಆಶಾದೇವಿ

ವರದಿ: ಗುಲಾಬಚಂದ ಜಾಧವಗದಗ : ತಾಯಿ ತನ್ನ ಮಕ್ಕಳಿಗೆ ಎಂದೂ ಭೇದಭಾವ ಮಾಡಲ್ಲ.ಹಾಗೆಯೇ ಬೆಂಕಿ,ಗಾಳಿ,ನೀರು ನಿಸರ್ಗದ…

ಕೊರೋನಾ : ನಗರ ಪ್ರದೇಶಗಳ ಆತಂಕ

ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ. ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ…

ರೈತರ ಜೀವನದ ಮೇಲೆ ಬರೆ ಎಳೆದಂತಾಗುತ್ತದೆ: ಟಿ.ಈಶ್ವರ ಆರೋಪ

ಪ್ರಸ್ತುತ ರಾಷ್ಟçದಲ್ಲಿ ನಡೆದಿರುವ ರೈತ ಚಳುವಳಿ ಹಾಗು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆಯ ಕುರಿತು ಕಾಂಗ್ರೆಸ್ ಮುಖಂಡ ಅರಣ್ಯ ಕೈಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಅವರೊಂದಿಗೆ ಉತ್ತರಪ್ರಭ ಪ್ರತಿನಿಧಿ ಕೆ.ಸದಾನಂದ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ..

I Love You ಅಂತಹೇಳಿದ್ದ ಗೆಳೆಯಾಗ ಗೆಳತಿ ಕೊಟ್ಟಿದ್ದೇನು ಗೊತ್ತಾ..?

ತನ್ನ ಭಾಳ್ ದಿನದ್ ಗೆಳತಿಗೆ ಆತ, ಐಲೌಯು ಅಂತ ಹೇಳಬೇಕು ಅಂದ್ಕೊಂಡಿದ್ನಂತ. ಆದ್ರ ಅವನಿಗೊಂದು ಹುಚ್ಚು. ತಾನು ಐಲೌಯು ಅಂತ ಹೇಳಿದ್ ಕೂಡ್ಲೆ ತನ್ನ ಗೆಳತಿಗೆ ಫುಲ್ ಥ್ರಿಲ್ ಆಗಬೇಕು. ಆಕಿ ಜೀವನದಾಗ ಈ ಘಟನಾ ಮರಿಲಾರದಂತ ಅನುಭವ ಆಗಬೇಕು. ಅಂಥ ಸರ್ಪ್ರೈಜ್ ಕೊಡಬೇಕು ಅನ್ನೋ ಖಯಾಲಿಯೊಳಗ ಒಂದು ಪ್ಲ್ಯಾನ್ ಮಾಡಿದ್ನಂತ. ಐಲೌಯು ಅಂತ ಹೇಳಿದ್ ಕೂಡ್ಲೆ ಮುಂದೇನಾತು ಅನ್ನೋದಾ ಆತ ಮಾಡಿದ ಪ್ಲ್ಯಾನ್ ನ ಕಥಿ ನೋಡ್ರಿ..