ಉತ್ತರಪ್ರಭ ಗದಗ :

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಬಿಜೆಪಿ-ಕಾಂಗ್ರೆಸ್ ನಡುವೆ ಕಾವುಕಟ್ಟಿದ ರಾಜಕೀಯ ಹಕ್ಕೊತ್ತುವರಿ..!

ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ನಡೆಯಿತು. ಈ ಸಂದರ್ಭ ನಗರಸಭೆ ಕಚೇರಿ ಮುಂದೆ ಭಾರಿ ಹೈಡ್ರಾಮಾ ಸೃಷ್ಟಿಯಾಯಿತು.

ನಾಮಪತ್ರ ಸಲ್ಲಿಸಲು ನಗರಸಭೆ ಕಚೇರಿ ಬಳಿ ಆಗಮಿಸಿದ್ದ ಬಿಜೆಪಿಯ ಸದಸ್ಯರು, ಕಾರ್ಯಕರ್ತರು, ಹಾಗೂ ಪ್ರಮುಖ ನಾಯಕರು ಪ್ರವೇಶದ ನಾಕಾಬಂದಿಗೆ ಸಿಲುಕಿದರು.

ನಗರಸಭೆ ಅಧಿಕಾರಿಗಳು ಸದಸ್ಯರಿಗೆ ಮಾತ್ರ ಪ್ರವೇಶ ನೀಡುವ ನಿಯಮವನ್ನು ಮುಂದಿಟ್ಟುಕೊಂಡು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹಾಗೂ ಸ್ಥಳೀಯ ನಾಯಕರನ್ನು ನಗರಸಭೆ ಗೇಟ್ ಬಳಿ ತಡೆ ನೀಡಿದರು.

ಬಿಜೆಪಿ ಕಾರ್ಯಕರ್ತರು, ಪೊಲೀಸರ ಜತೆ ವಾಗ್ವಾದಕ್ಕಿಳಿದರೆ, ಸಚಿವ ಎಚ್.ಕೆ. ಪಾಟೀಲ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಅಸಮಾಧಾನಗೊಂಡ ಬಿಜೆಪಿ ಕಾರ್ಯಕರ್ತರು, ಪೊಲೀಸರ ಜತೆ ವಾಗ್ವಾದಕ್ಕಿಳಿದರೆ, ಸಚಿವ ಎಚ್.ಕೆ. ಪಾಟೀಲ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯು ಈಗ ಗದಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ :

ಬಿಜೆಪಿಯ ಅಭ್ಯರ್ಥಿಗಳು :

  • ಅಧ್ಯಕ್ಷ ಸ್ಥಾನಕ್ಕೆ : ಚಂದ್ರಶೇಖರ ತಡಸದ್
  • ಉಪಾಧ್ಯಕ್ಷೆ ಸ್ಥಾನಕ್ಕೆ : ವಿಜಯಲಕ್ಷ್ಮೀ ದಿಂಡೂರು

ಕಾಂಗ್ರೆಸ್ ಅಭ್ಯರ್ಥಿಗಳು :

  • ಅಧ್ಯಕ್ಷ ಸ್ಥಾನಕ್ಕೆ : ಕೃಷ್ಣಾ ಪರಾಪುರ್
  • ಉಪಾಧ್ಯಕ್ಷ ಸ್ಥಾನಕ್ಕೆ : ಶಕುಂತಲಾ ಅಕ್ಕಿ

ಈ ಬೆಳವಣಿಗೆಗಳಿಂದ ಗದಗ-ಬೆಟಗೇರಿ ನಗರಸಭೆ ರಾಜಕೀಯವಾಗಿ ಬಿಸಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮುಖಾಮುಖಿ ಹೋರಾಟ ತೀವ್ರ ಸ್ವರೂಪ ತಾಳಲಿದೆ ಎಂಬುದು ಸ್ಪಷ್ಟವಾಗಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾದಿಂದಾಗಿ ಮಲೆ ಮಹದೇಶ್ವರನಿಗೆ ಎಷ್ಟು ನಷ್ಟವಾಗಿದೆ ಗೊತ್ತಾ?

ಹುಂಡಿಯೊಂದರಲ್ಲಿಯೇ ಪ್ರತಿ ತಿಂಗಳು ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗುತ್ತಿತ್ತು. ಚಿನ್ನದ ತೇರು, ವಿವಿಧ ಸೇವೆ ಲಾಡು ಮಾರಾಟ ಹಾಗೂ ವಸತಿ ಗೃಹ ಮೊದಲಾದ ಮೂಲಗಳಿಂದ ಬರುತ್ತಿದ್ದ ಆದಾಯದಲ್ಲಿ ಇದೀಗ ಕೋಟಿಗಟ್ಟಲೆ ಕಡಿತವಾಗಿದೆ.

ನರೆಗಲ್ಲ: ಅತೀಯಾದ ಮಳೆಯಿಂದ ಕೊಳೆಯುತ್ತಿದೆ ಈರುಳ್ಳಿ

ಹೋಬಳಿಯ ಎಲ್ಲೇಡೆ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗೆ ತಿವ್ರ ಹಿನ್ನೆಡೆಯಾಗಿದೆ.

ಸಿಎಂಗೆ ಕೊರೊನಾ ಪಾಸಿಟಿವ್ ದೃಢ!

ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಕೋಟೆ ನಾಡಿನಲ್ಲಿ ತುಂತುರು ಮಳೆ

ಗಜೇಂದ್ರಗಡ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಗಜೇಂದ್ರಗಡದಲ್ಲಿ ತುಂತುರು ಮಳೆ ಸುರಿಯಿತು. ಗಜೇಂದ್ರಗಡದಲ್ಲಿ ಬೆಳಿಗ್ಗೆಯಿಂದಲೇ ದಟ್ಟನೆಯ…