ಬೆಂಗಳೂರು: ಕೋವಿಡ್ ಸಂಬಂಧಿ ಪಿಪಿಇ ಕಿಟ್ ಮತ್ತು ಇತರ ಸಲಕರಣೆ ಕೊಳ್ಳುವಾಗ ಸರ್ಕಾರ ಭಾರಿ ದುಡ್ಡು ಹೊಡೆದಿದೆ ಎಂಬ ತಮ್ಮ ಆರೋಪವನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರವೂ ಪುನರುಚ್ಛರಿಸಿದ್ದಾರೆ.

ತಮ್ಮ ಟ್ವೀಟರ್ ಖಾತೆಯಲ್ಲಿ ‘#100PercentCorruptSarkar’ ಹ್ಯಾಷ್ ಟ್ಯಾಗ್ ಮುಂದುವರೆಸಿರುವ ಅವರು, ತಪ್ಪು ತಿದ್ದಿಕೊಳ್ಳದೇ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯ’ ಎಂದು ಟ್ವೀಟ್ ಮಾಡಿ, ಯಡಿಯೂರಪ್ಪ, ಶ್ರೀರಾಮುಲು, ಸುಧಾಕರ್ ಮತ್ತು ಗೋವಿಂದ ಕಾರಜೋಳರನ್ನು ಟ್ಯಾಗ್ ಮಾಡಿದ್ದಾರೆ.

‘ಈ ಸಂಕಷ್ಟ ಸಮಯದಲ್ಲಿ ಅಗತ್ಯ ಬಿದ್ದಾಗ ಸಹಕಾರ ಕೊಟ್ಟೆವು. ಸರ್ಕಾರದ ಅಕ್ರಮ-ವೈಫಲ್ಯಗಳನ್ನು 3 ತಿಂಗಳ ಕಾಲ ಪತ್ರಗಳ ಮೂಲಕವೇ ಟೀಕಿಸಿದ್ದೆ. ಆದರೆ ಬಿಎಸ್ವೈ ತಿದ್ದಿಕೊಳ್ಳದ ಕಾರಣ ಈಗ ಬಹಿರಂಗವಾಗಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದೇನೆ ಎಂದಿದ್ದಾರೆ.

ಭ್ರಷ್ಟ ಪ್ರಭುತ್ವದ ಪರ ನಿಲ್ಲಲೂ ಆಗುವುದಿಲ್ಲ. ವಿರೋಧ ಪಕ್ಷವಾಗಿ ನಾವು ಜನರ ಪರ, ಭ್ರಷ್ಟ ಸರ್ಕಾರದ ಪರ ಅಲ್ಲ ಎಂದೂ ಅವರು ಟೀಕಿಸಿದ್ದಾರೆ.

ಬುಧವಾರದ ಟ್ವೀಟ್ ನಲ್ಲಿ ಅವರು, ‘ಮುರುಗೇಶ್ ನಿರಾಣಿ ಬಳಿಯಿರುವ ಪೆನ್ ಡ್ರೈವ್ ನಲ್ಲಿ ಅಕ್ರಮ ಖರೀದಿಯ ವಿವರ ಇವೆಯಂತೆ. ಬಿಎಸ್ವೈ ಅದನ್ನು ಪಡೆದು ಬಹಿರಂಗ ಮಾಡಲಿ’ ಎಂದು ಹೇಳಿ, ಸದನ ಸಮಿತಿಯ ವರದಿಯ ಪುಟವೊಂದನ್ನು ಸಾಕ್ಷಿಯಾಗಿ ಅಟ್ಯಾಚ್ ಮಾಡಿದ್ದರು.

Leave a Reply

Your email address will not be published. Required fields are marked *

You May Also Like

ಮತ್ತೆ ಕೇಂದ್ರದಿಂದ ಪಡಿತರರಿಗೆ ಶುಭ ಸುದ್ದಿ

ಕೊರೋನಾ ಹಿನ್ನಲೆಯಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪರಿತರ ಚೀಟಿ ಹೊಂದಿದವರಿಗೆ 5 ಕೆ.ಜಿ ಅಕ್ಕಿ ವಿತರಸಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ತಿಳಿಸಿದ್ದಾರೆ.

ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಆಗ್ರಹ: ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸಲು ಒತ್ತಾಯ

ಕುರುಬರು ಮೂಲತ: ಬುಡಕಟ್ಟು ಜನಾಂಗದವರಾಗಿದ್ದು, ರಾಜ್ಯದಲ್ಲಿ ಈಗಾಗಲೇ ಜೇನು ಕುರುಬ, ಕಾಡು ಕುರುಬರು, ಗೊಂಡ, ರಾಜಗೊಂಡ, ಕುರುಬ, ಕುರುಮನ್ಸ್ ಜಾತಿಗಳು ಪರಿಶಿಷ್ಟ ಪಂಗಡದಲ್ಲಿವೆ. ಆದರೆ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಕುರುಬರಿಗೂ ಎಸ್.ಟಿ.ಮೀಸಲಾತಿ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಎಸ್.ಟಿ ಮೀಸಲಾತಿ ಹೋರಾಟ ಸಮೀತಿ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ತಿಳಿಸಿದರು.

ಮಸ್ಕಿ: ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಮಂಜೂರು

ತಾಲೂಕ ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಭರವಸೆ ನೀಡಿದರು.

ಮೌಲ್ಯ ಮಾಪನವಿಲ್ಲದೆ ವಿಟಿಯು ಪರೀಕ್ಷೆ ತೇರ್ಗಡೆಗೆ ಅಭಿಯಾನ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಡಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾಲೇಜುಗಳು ಮಾನ್ಯತೆ ಪಡೆದಿವೆ. ಈ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಮೌಲ್ಯಮಾಪನವಿಲ್ಲದೆ ವಿಟಿಯು ಎಲ್ಲಾ ವಿದ್ಯಾಥಿಗಳನ್ನು ತೆರ್ಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.