ಗದಗ: ಜಿಲ್ಲೆಯಲ್ಲಿ ಕೊರೊನಾಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 5 ಕ್ಕೆ ಏರಿದೆ.
ಗದಗ ತಾಲೂಕಿನ ಸೀತಾಲಹರಿ ಗ್ರಾಮದ 52 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜುಲೈ 8 ರಂದು ಕೆಮ್ಮು, ನೆಗಡಿ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತರಾಗಿ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡಿದ್ದರು.
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಆಗಮಿಸಿ ತಮ್ಮ ಗಂಟಲು ದ್ರವದ ಮಾದರಿ ಪರೀಕ್ಷೆಗಾಗಿ ಒದಗಿಸಿದ್ದು,
ಬಳಿಕ ಮನೆಗೆ ತೆರಳಿದ್ದರು. ಇಂದು ಮುಂಜಾನೆ ಎದೆ ಉರಿತದಿಂದ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ಅಂತ್ಯಕ್ರಿಯೆ ಕೋವಿಡ್-19 ಮಾರ್ಗಸೂಚಿಗಳನ್ವ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು
ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published.

You May Also Like

ಕೊರೊನಾ ಎಫೆಕ್ಟ್ – ಹೊಲದಲ್ಲಿ ಬೆಳೆದ ಎಲೆಕೋಸನ್ನು ನಾಶ ಮಾಡಿದ ರೈತ!

ಚಿಕ್ಕಮಗಳೂರು: ಸರ್ಕಾರ ಎಷ್ಟೇ ಭರವಸೆ ನೀಡಿದರೂ ರೈತರ ಬವಣೆ ಮಾತ್ರ ನೀಗುತ್ತಿಲ್ಲ. ರೈತರೊಬ್ಬರು ಹಗಲಿರುಳು ಕಷ್ಟಪಟ್ಟು…

ಕೊರೋನಾ ಸೋಂಕು: ದಿಗಿಲು ಮೂಡಿಸಿದ WHO ಸಂದೇಶ..!

ಕರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ವಿಶ್ವಕ್ಕೆ ಕಳುಹಿಸಿರುವ ಸಂದೇಶ ಜಗತ್ತಿಗೆ ಧಿಗಿಲು ಮೂಡಿಸುವಂತಿದೆ.

ಲಕ್ಷ್ಮೇಶ್ವರದಲ್ಲಿ ಕರ್ಫ್ಯೂ ಭಾಗಶಃ ಯಶಸ್ವಿ; ದಂಡಾಧಿಕಾರಿಗಳಿಂದ ರೂಲ್ಸ್ ಬ್ರೇಕ ಮಾಡಿದವರಿಗೆ ದಂಡ.

ಲಕ್ಷ್ಮೇಶ್ವರ: ಬಿಕೋ ಎನ್ನುತ್ತಿರುವ ಪ್ರಮುಖ ಹೆದ್ದಾರಿ, ಬಸ್ ನಿಲ್ದಾಣಗಳು… ಶುಕ್ರವಾರ ರಾತ್ರಿಯಿಂದಲೇ ಪೊಲೀಸರು ನೈಟ್ –…

ಮೌಲ್ಯ ಮಾಪನವಿಲ್ಲದೆ ವಿಟಿಯು ಪರೀಕ್ಷೆ ತೇರ್ಗಡೆಗೆ ಅಭಿಯಾನ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಡಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾಲೇಜುಗಳು ಮಾನ್ಯತೆ ಪಡೆದಿವೆ. ಈ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಮೌಲ್ಯಮಾಪನವಿಲ್ಲದೆ ವಿಟಿಯು ಎಲ್ಲಾ ವಿದ್ಯಾಥಿಗಳನ್ನು ತೆರ್ಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.