ಬೆಂಗಳೂರು: ಕನ್ನಡಪರ ಹೋರಾಟಗಾರ, ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಿಜೆಪಿ ಸೇರ್ತಾರಾ..? ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ. ಇತ್ತಿಚೆಗೆ ಅವರು ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ ವಿಚಾರ ಇಂಥ ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿತ್ತು.

ಆದರೆ ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ನಾನು ಮತ್ತು ಶ್ರೀನಿವಾಸ್ ಪ್ರಸಾದ್ 40 ವರ್ಷದ ಸ್ನೇಹಿತರು. ಹೀಗಾಗಿ ಅವರ ಅರೋಗ್ಯ ವಿಚಾರಿಸಲು ಹೋಗಿದ್ದೆ ಅಷ್ಟೇ ಎಂದಿದ್ದಾರೆ. ಆದರೆ ಇವರು ಇದೇ ವೇಳೆ ಬಿಜೆಪಿ ಪಕ್ಷ ನನಗೆ ಎಂ.ಎಲ್.ಸಿ ಮಾಡಿದರೆ ಬಿಜೆಪಿಗೆ ಶಕ್ತಿ ಮತ್ತು ಗೌರವ ಬರುತ್ತದೆ. ಇದರಿಂದ ರಾಜ್ಯದ ಜನ ಅವರನ್ನು ಮೆಚ್ಚುತ್ತಾರೆ. ನಾನು ಯಾರನ್ನು ಎಂಎಲ್ಸಿ ಮಾಡಿ ಎಂದು ಕೇಳಿಲ್ಲ. ನಾನು 5 ಭಾರಿ  ಶಾಸಕನಾಗಿದ್ದೇನೆ. ಹೀಗಾಗಿ ನನ್ನನ್ನು ಎಂಎಲ್ಸಿ ಮಾಡಿದರೆ ಬಿಜೆಪಿಗೆ ಗೌರವ ಬರುತ್ತದೆ. ಆದರೆ ಈ ವಿಚಾರ ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ಹಾಗಾದರೆ ವಾಟಾಳ್ ನಾಗರಾಜ್ ಅವರ ಮಾತಿ ಒಳ ಅರ್ಥ ಏನು ಎನ್ನುವುದು ಪ್ರಶ್ನೆಗೆ ಗ್ರಾಸವಾಗಿದೆ. ವಾಟಾಳ್ ಬಿಜೆಪಿಯಿಂದ ಎಂಎಲ್ಸಿ ಆಗುವ ಇರಾದೆ ಹೊಂದಿದ್ದಾರೆಯೇ? ಎನ್ನುವ ಚರ್ಚೆಗೆ ಇವರ ಮಾತುಗಳೇ ಪುಷ್ಟಿ ನೀಡುವಂತಿವೆ.  

ಮುಂದುವರೆದು ಮಾತನಾಡಿದ ಅವರು ಎಂಎಲ್ಸಿ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತೇನೆ. ಗುಲ್ಬರ್ಗ ಈಶಾನ್ಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಒತ್ತಾಯ ಇದೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧಾರಿಸಿಲ್ಲ. ಆದರೆ ಚುನಾವಣೆ ಸ್ಪರ್ಧೆ ಮಾತ್ರ ಶತಸಿದ್ಧ ಎಂದಿದ್ದಾರೆ. ಕೊನೆಗೆ ಮೂರು ಜನ್ಮ ಕಳೆದರೂ ನಾನು ಬಿಜೆಪಿ ಸೇರಲ್ಲ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡಿದ್ದಾರೆ.

Leave a Reply

Your email address will not be published.

You May Also Like

ಸಾರಿಗೆ ನೌಕರರ ಗೊಂದಲಕ್ಕೆ ತೆರೆ ಎಳೆದ ಸಚಿವ ಸವದಿ

ಸಾರಿಗೆ ಇಲಾಖೆ ನೌಕರರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ. ಕೆಲವು ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಎನ್ನುವ ವದಂತಿ ಹಬ್ಬಿದೆ. ಅಂತಹ ಯಾವುದೇ ಪ್ರಸ್ತಾಪ ಇಲ್ಲ.

ಕೊವಿಡ್-19 ನಿಯಂತ್ರಣ : ನಿಯಮ ಉಲ್ಲಂಘಿಸಿದ ಸಂಘ, ಸಂಸ್ಥೆ, ಹೊಟೆಲ್‍ಗಳ ವಿರುದ್ದ ಪ್ರಕರಣ ದಾಖಲು

ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಖಕ್ಕೆ ಮಾಸ್ಕ ಧಾರಣೆ, ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಗುಂಪು ಸೇರದಿರುವ ಮುಂತಾದ ನಿರ್ದೇಶನಗಳನ್ನು ಉಲ್ಲಂಘಿಸಿದ ಗದಗ ಬೆಟಗೇರಿ ವ್ಯಾಪ್ತಿಯ ಸಂಘ, ಸಂಸ್ಥೆ, ಹೊಟೆಲ್‍ಗಳ ವಿರುದ್ದ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.

ಗದಗನಲ್ಲಿ ‌ಮತ್ತೊಂದು ಕೊರೊನಾ ಪಾಸಿಟಿವ್..!

ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬೆಂಗಳೂರಿನಲ್ಲಿ ಪತ್ತೆಯಾಗಿದೆ. P-4079 ರೋಗಿ ಗದಗನ ನಗರದ ನಿವಾಸಿಯಾಗಿದ್ದು ಇತ್ತಿಚೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಎನ್ ಆರ್ ಬಿ ಸಿ 5ಎ ಕೆನಾಲ್ ಯೋಜನೆ: ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡುವಂತೆ ಒತ್ತಾಯ

ರಾಯಚೂರು: ಎನ್ ಆರ್ ಬಿ ಸಿ 5 ಕೆನಾಲ್ ಯೋಜನೆಯ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟದಲ್ಲಿ…