ಗದಗ: ರಾಜ್ಯ ಸರ್ಕಾರದ ನಿರ್ದೇಶನ ರೀತ್ಯ ಗದಗ ಜಿಲ್ಲೆಯಾದ್ಯಂತ  ಅಗಸ್ಟ 2 ರ ಮಧ್ಯರಾತ್ರಿಯವರೆಗೆ ಪ್ರತಿದಿನ ರಾತ್ರಿ 8 ರಿಂದ ಮುಂಜಾನೆ 5 ಗಂಟೆಯವರೆಗೆ ಅನಿವಾರ್ಯ ಕಾರಣ ಹೊರತುಪಡಿಸಿ ಎಲ್ಲ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಿ ಹಾಗೂ ಈ ಅವಧಿಯಲ್ಲಿನ ಎಲ್ಲ ರವಿವಾರಗಳಂದು ಸಂಪೂರ್ಣ ಲಾಕಡೌನ ವಿಧಿಸಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಕೋವಿಡ್-19 ಸೋಂಕು ನಿಯಂತ್ರಣದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಹಾಗೂ ಸಾರ್ವಜನಿಕ ಆರೊಗ್ಯ ಹಿತ ದೃಷ್ಟಿಯಿಂದ ಸಾಂಕ್ರಾಮಿಕ ರೋಗ ಕಾಯ್ದೆ ಹಾಗೂ ವಿಪತ್ತು ನಿರ್ವಹಣೆ ಕಾಯ್ದೆಯಡಿ ಹೊರಡಿಸಿರುವ ಈ ಆದೇಶ ಉಲ್ಲಂಘಿಸಿದವರ ಮೇಲೆ ಭಾರತೀಯ ದಂಡ ಸಂಹಿತೆ 188ರ ಹಾಗೂ ವಿಪತ್ತು ನಿರ್ವಹಣೆ ಕಾಯ್ದೆ ರೀತ್ಯ ಕ್ರಮ ಜರುಗಿಸಲಾಗುವುದು.  ಇದಲ್ಲದೇ 65 ವರ್ಷ ಮೀರಿದ  ಹಿರಿಯರು, 10 ವರ್ಷದೊಳಗಿನ ಮಕ್ಕಳ, ರೋಗಗ್ರಸ್ಥ ವ್ಯಕ್ತಿ ಗರ್ಭಿಣಿಯರ ಅನಿವಾರ್ಯ ಕಾರಣ ಕೊರತುಪಡಿಸಿ ಮನೆಯಲ್ಲಿಯೇ ಇರುವಂತೆ ಆದೇಶಿಸಲಾಗಿದೆ.  ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ   ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು ಎಲ್ಲ ತಹಶೀಲ್ದಾರರು, ಸಂಬಂಧಿತ ಇಲಾಖೆಗಳ ಎಲ್ಲ ಅಧಿಕಾರಿಗಳು ಈ ಆದೇಶ ಪಾಲನೆ ಆಗುವಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Leave a Reply

Your email address will not be published.

You May Also Like

ಹದಗೆಟ್ಟ ಸೊರಟೂರ – ಮುಳಗುಂದ ರಸ್ತೆ: ದಶಕ ಗತಿಸಿದರೂ ದುರಸ್ಥಿ ಭಾಗ್ಯ ಕಾಣದ ರಸ್ತೆ!

ಮುಳಗುಂದ: ಸಮೀಪದ ಸೊರಟೂರ ಗ್ರಾಮದಿಂದ ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ದುರಸ್ಥಿ ಕಾಮಗಾರಿ ಕೈಗೊಳ್ಳಬೇಕಿದೆ.

ದೇಶದಲ್ಲಿಯೂ ಭಯ ಹುಟ್ಟಿಸಲು ಪ್ರಾರಂಭಿಸಿದೆ ಕೊರೊನಾ ಸೋಂಕು!

ಕೊರೊನಾ ಯೋಧರಿಗೂ ಸೋಂಕು ತಗುಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶಾದ್ಯಂತ ಇಲ್ಲಿಯವರೆಗೂ 548 ವೈದ್ಯರು, ದಾದಿಯರಿಗೆ ಕೊರೊನಾ ತಗುಲಿದ್ದು, ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ

13 ವರ್ಷಗಳಿಂದ ಪ್ರೀತಿ…ಎರಡು ಬಾರಿ ಗರ್ಭಪಾತ…ಮದುವೆಯ ದಿನವೇ ನಾಪತ್ತೆ!

ಉಡುಪಿ : ಇಬ್ಬರೂ ಕಳೆದ 13 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿಯ ಪಾತ್ರವಾಗಿ ಎರಡು ಬಾರಿ ಯುವತಿಯ ಗರ್ಭಪಾತವೂ ಆಗಿದೆ. ಆದರೆ, ಮದುವೆಯೇ ದಿನವೇ ಹುಡುಗ ಕೈ ಕೊಟ್ಟ ಘಟನೆ ನಡೆದಿದೆ.

ಗದಗ, ನರಗುಂದ, ರೋಣ, ಮುಂಡರಗಿ ತಾಲೂಕಿನಲ್ಲಿಂದು ಸೋಂಕಿರು ಪತ್ತೆ

ಗದಗ: ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ಮದೆನಗುಡಿ ಗ್ರಾಮದ ನಿವಾಸಿ 35 ವರ್ಷದ ಪುರುಷ(ಪಿ-23121)…