ದಾವಣಗೆರೆ: ನ್ಯಾಮತಿ ತಾಲೂಕಿನಾದ್ಯಂತ ನಿನ್ನೆ ಸುರಿದ ಭಾರಿ ಮಳೆಯಿಂದ ಕೆಲವು ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಈ ಕಾರಣದಿಂದ ಇಂದು ಶಾಕಸ ಎಂ.ಪಿ.ರೇಣುಕಾಚಾರ್ಯ ಬೆಳ್ಳಂಬೆಳಿಗ್ಗೆಯೇ ಫಿಲ್ಡ್ ಗೆ ಇಳಿದರು.

ಮಳೆಯಿಂದಾದ ಹಾನಿ ಪರಿಶೀಲಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ

ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಮಳೆ ಹಾನಿ ಪರಿಶೀಲಿಸಿ ಮಳೆಯಿಂದ ಹಾನಿಗೀಡಾದವರ ಸಂಕಷ್ಠ ಆಲಿಸಿದರು. ಗ್ರಾಮದಲ್ಲಿ ಗಾಳಿ ಮಳೆಯಿಂದ ನೂರಾರು ಮರ, 25 ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇನ್ನು ಮಳೆಯಿಂದಾಗಿ ನೆಲ ಕಚ್ಚಿದ ಭತ್ತ ಗದ್ದೆ ಪರಿಶೀಲನೆ ನಡೆಸಿದರು. ಇನ್ನು 27 ಮನೆಗಳಿ ಭಾಗಶಃ ಹಾನಿಯಾಗಿದ್ದು, ಮನೆಯಲ್ಲೇ ಇದ್ದ ವಯೋವೃದ್ಧರು ಮೇಲ್ಛಾವಣಿ ಕುಸಿತದಿಂದ ಗಾಯ ಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 16 ನರ್ಸರಿಗಳಿಗೆ ಹಾನಿಯಾಗಿದೆ. ಇನ್ನು ಬಿದ್ದ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲು ಸ್ಥಳದಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.  ಈ ಮೂಲಕ ರೈತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

Leave a Reply

Your email address will not be published. Required fields are marked *

You May Also Like

ಸಾಲಬಾಧೆ ತಾಳಲಾಗದೆ ಅನ್ನದಾತ ಆತ್ಮಹತ್ಯೆ

ವರದಿ: ವಿಠಲ‌ ಕೆಳೂತ್ ಮಸ್ಕಿ: ಸಾಲಭಾದೆ ತಾಳಲಾರದೆ‌ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತುರ್ವಿಹಾಳ…

ಸರ್ಕಾರಿ ವಿವಿಗಳ ತಾತ್ಕಾಲಿಕ- ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕುರಿತ ವಿಚಾರ ಸಂಕಿರಣ

ಕರ್ನಾಟಕದ ಸರ್ಕಾರೀ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮತ್ತು ವೇತನ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ರಾಜ್ಯಮಟ್ಟದ ವಿಚಾರ ಸಂಕಿರಣ (ವೆಬಿನಾರ್) ಅನ್ನು 2020 ಆಗಸ್ಟ್ 19 ರಂದು ಬುಧವಾರ ಮಧ್ಯಾಹ್ನ 2.30 ಕ್ಕೆ (ಸಾಮಾಜಿಕ ಜಾಲತಾಣದ ಮೂಲಕ) ಆಯೋಜಿಸಲಾಗಿದೆ.

ಶಿರಹಟ್ಟಿ ತಾಲೂಕಿನಲ್ಲಿ ಗಣರಾಜ್ಯೋತ್ಸವ ಆಚರಣೆ ಬಗ್ಗೆ ತಹಶೀಲ್ದಾರ ನೀಡಿದ ಮಾಹಿತಿ

ಶಿರಹಟ್ಟಿ: ಪ್ರಸ್ತುತ ವರ್ಷದಲ್ಲಿ ಕೊರೊನಾ ನಿಯಮಾನುಸಾರ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ ಯಲ್ಲಪ್ಪ…

ಅಪಾರ ಜಲವುಂಟು…ಹಚ್ಚ ಹಸಿರು ಇಲ್ಲ..!

ಆಲಮಟ್ಟಿ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಅಪಾರ ಜಲರಾಶಿಯಿದೆ. ಕೆಆರ್ ಎಸ್ ಕ್ಕಿಂತ ಎರಡೂವರೆ ಪಟ್ಟು ಹೆಚ್ಚು…