ವರದಿ: ವಿಠಲ‌ ಕೆಳೂತ್


ಮಸ್ಕಿ:
ಸಾಲಭಾದೆ ತಾಳಲಾರದೆ‌ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತುರ್ವಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಉಪ್ಪಲದೊಡ್ಡಿ ಗ್ರಾಮದ ಹುಲುಗಪ್ಪ ಎಂಬ ರೈತನು ತಿಡಿಗೋಳದ ಪ್ರಗತಿ ಕೃಷ್ಣಾ ಗ್ರಾಮೀಣ ರಾಷ್ಟ್ರೀಯ ಬ್ಯಾಂಕಿನಲ್ಲಿ 1 ಲಕ್ಷ, ಪ್ರಾಥಮಿಕ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕನಲ್ಲಿ 50 ಸಾವಿರ ಸಾಲ, ಜಮೀನಿನ ಅಗ್ರಿಮೆಂಟ್ ಗಾಗಿ 5 ಲಕ್ಷ, ಖಾಸಗಿ ಸಂಸ್ಥೆಗಳ ಬ್ಯಾಂಕನಲ್ಲಿ 1 ಲಕ್ಷ ಅಧಿಕ ಸಾಲ ಸೇರಿದಂತೆ ಒಟ್ಟು 7 ಲಕ್ಷ 50 ಸಾವಿರ ರೂಪಾಯಿಯನ್ನು ಸಾಲವನ್ನು ತಗೆದುಕೊಂಡಿದ್ದು, ಸಾಲ ತೀರಿಸಲು ಆಗದೇ ಮನನೊಂದು ಕೆನಾಲ್ ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ತುರ್ವಿಹಾಳ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆತ್ಮಹತ್ಯೆ ಮಾಡಿಕೊಂಡ ರೈತನು ಬಡ ಕುಟುಂಬಕ್ಕೆ ಆಸರೆಯಾಗಿದ್ದ, ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ಕುಟುಂಬ ದಿಕ್ಕು ತೋಚದಂತಾಗಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ ಈ ನೊಂದ ಕುಟುಂಬಕ್ಕೆ ತಾಲೂಕ ಆಡಳಿತ, ಸರ್ಕಾರ ಕುಟುಂಬದ ನೆರವಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You May Also Like

ಸಾಹಿತ್ಯ ಪರಿಷತ್ತು ಡಿಜಟಲಿಕರಣವಾಗಬೇಕು : ಚನ್ನೆಗೌಡ

ಕನ್ನಡ ಸಾಹಿತ್ಯ ಪರಿಷತ್ತು ಒಂದು ಸಂಸ್ಥೆಯಾಗಿ ಬೆಳೆಯಬೇಕಾಗಿದೆ. ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಚುಣಾಯಿತನಾದರೆ ಸಾಹಿತ್ಯ ಪರಿಷತ್ತನ್ನು ಸಾರ್ವಜನಿಕರಿಗೆ ವಿಶ್ವವಿದ್ಯಾಲಯದಂತೆ ಬೆಳಕು ಚೆಲ್ಲುವ ಕೆಲಸವನ್ನು ಸಾಹಿತ್ಯ ಪರಿಷತ್ತಿನ ಮೂಲಕ ಮಾಡುವೆ ಎಂದು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ವಿ.ಸಿ. ಚನ್ನೇಗೌಡ ಹೇಳಿದರು.

ಬೀದಿಗೆ ಬಂದ ಕಾರ್ಮಿಕರು…!

ಲಾಕ್ ಡೌನ್ ನಿಂದ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಸಕ್ಕರೆ ಕಾರ್ಖಾನೆಯೊಂದರ 350ಕ್ಕೂ ಹೆಚ್ಚು ಕಾರ್ಮಿಕರು ಸದ್ಯ ಇದರಿಂದಾಗಿ ಬೀದಿಗೆ ಬಂದಿದ್ದಾರೆ.

ಶಿಕ್ಷಕ ಶಾಂತಕುಮಾರ ಭಜಂತ್ರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಗದಗ: ತಾಲೂಕಿನ ಲಿಂಗಧಾಳ ಸರಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರು ಹಾಗೂ ಕನ್ನಡ ಜಾನಪದ ಪರಿಷತ್…

ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್ ಮುಧೋಳ್ ನಿಧನ

ಗದಗ: ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್ ಮುಧೋಳ್ ಬುಧವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಮೂಲತ: ಗದಗ ನಗರದವರಾದ…