ಆಲಮಟ್ಟಿ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಅಪಾರ ಜಲರಾಶಿಯಿದೆ. ಕೆಆರ್ ಎಸ್ ಕ್ಕಿಂತ ಎರಡೂವರೆ ಪಟ್ಟು ಹೆಚ್ಚು ನೀರು ಇಲ್ಲಿದೆ. ಆದರೆ ಹಚ್ಚು ಹಸಿರು ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಬನ್ನೂರ ನಾರಾಯಣ ವಿಷಾಧಿಸಿದರು.
ಸಂಘದ ವತಿಯಿಂದ ಏರ್ಪಡಿಸಿರುವ ಅಧ್ಯಯನ ಪ್ರವಾಸಕ್ಕಾಗಿ ಆಲಮಟ್ಟಿಗೆ ಆಗಮಿಸಿರುವ ಅವರು, ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನಾ೯ಟಕ ರಾಜ್ಯ ರೈತ ಸಂಘ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಬನ್ನೂರ ನಾರಾಯಣ ಅವರು ಸಂಘದ ವತಿಯಿಂದ ಏರ್ಪಡಿಸಿರುವ ಅಧ್ಯಯನ ಪ್ರವಾಸತ್ಕಾಗಿ ಗುರುವಾರ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಆಗಮಿಸಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರ ಜೊತೆಗೆ ಸಂಘದ ಪ್ರಮುಖರು ಹಾಜರಿದ್ದರು.


ಕಾವೇರಿ ಭಾಗದಲ್ಲಿ ಎಕರೆಗೆ ಕನಿಷ್ಠ 60 ಟನ್ ನಿಂದ 100 ಟನ್ ವರೆಗೆ ಕಬ್ಬು ಬೆಳೆಯುತ್ತಾರೆ, ರೈತರಲ್ಲಿ ನೀರಿನ ಬಳಕೆ, ಮಿತವ್ಯಯ, ಜಾಗೃತಿ ಹೆಚ್ಚಿದೆ. ಆದರೆ ಈ ಭಾಗದಲ್ಲಿ ಕಬ್ಬಿನ ಇಳುವರಿಯೂ ಕಡಿಮೆ, ನೀರಿನ ಜಾಗೃತಿಯೂ ಕಡಿಮೆ ಎಂದರು. ನೀರು ಬಳಕೆದಾರರ ಸಂಘಗಳು ಇದ್ದು ಅವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಕೃಷ್ಣೆಯ ಭಾಗದಲ್ಲಿ ಕಂಡು ಬರುವುದಿಲ್ಲ ಎಂದರು.
ಕೃಷ್ಣೆಯ ಭಾಗದ ರೈತರಲ್ಲಿಯೂ ನೀರಿನ ಸದ್ಭಳಕೆಯ ಬಗ್ಗೆ ಜಾಗೃತಿ ಮೂಡಿ, ಬೆಳೆದ ಬೆಳೆಯ ಇಳುವರಿ ದ್ವಿಗುಣಗೊಳ್ಳಲು ರೈತರು ಕಷ್ಟಪಡಬೇಕು ಎಂದರು. ಕಾವೇರಿ ಭಾಗದಲ್ಲಿ ಜುಲೈನಿಂದ ಡಿಸೆಂಬರ್ ವರೆಗೆ ಕಾಲುವೆಗಳಿಗೆ ವಾರಾಬಂದಿ ಇರುವುದಿಲ್ಲ. ಜನವರಿಯಿಂದ ಏಪ್ರಿಲ್ ವರೆಗೆ ಮಾತ್ರ ವಾರಾಬಂಧಿಯಿದ್ದು, ಕೆಲ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಕೊಡುವುದಿಲ್ಲ ಎಂದರು.
ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಜಮೀನಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳು ಕಂಡು ಬರಲಿಲ್ಲ. ಇದು ತಪ್ಪು, ಒಳಗಿನ ಜಮೀನಿಗೂ ರಸ್ತೆ ಅಗತ್ಯ. ಕೃಷ್ಣಾ ಕಾಡಾ ವತಿಯಿಂದ ಅಚ್ಚುಕಟ್ಟು ರಸ್ತೆಯನ್ನು ನಿರ್ಮಿಸಬೇಕು. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಎಲ್ಲೆಡೆಯೂ ಉತ್ತಮ ಅಚ್ಚುಕಟ್ಟು ರಸ್ತೆಗಳಿವೆ ಎಂದರು.
ಕಾವೇರಿ ಭಾಗದಲ್ಲಿ ಪ್ರತಿ ಕಾಲುವೆಗಳ ಅಂತ್ಯದ ಜಮೀನಿಗೂ ನೀರು ಹರಿಯುತ್ತದೆ. ಘೋಷಿತ ಪ್ರದೇಶಕ್ಕೆ ಕಡ್ಡಾಯವಾಗಿ ನೀರು ಹೋಗುತ್ತದೆ ಎಂದರು.
ಈ ಭಾಗದಲ್ಲಿ ಬೆಲ್ಲ ತಯಾರಿಕಾ ಆಲೆಮನೆಗಳಿಲ್ಲ ಎಂದರು.


ಗುಡಿ ಕೈಗಾರಿಕೆಯಾಗಿ ಎಥೆನಾಲ್ ಉತ್ಪಾದನೆಯಾಗಿಸಲು ತಂತ್ರಜ್ಞಾನ ಸರಳೀಕೃತಗೊಳಿಸಬೇಕು, ಅದನ್ನು ರೈತರಿಗೆ ನೀಡಿ, ಪ್ರತಿಯೊಬ್ಬರು ಆಲಮನೆ ರೀತಿಯಲ್ಲಿ ಎಥೆನಾಲ್ ಉತ್ಪಾದನೆ ಮಾಡಲು ತಂತ್ರಜ್ಞಾನ ಅಭಿವೃದ್ಧಿಗೊಳಿಸಬೇಕು ಎಂದರು. ಅದಕ್ಕಾಗಿ ಮುಖ್ಯಮಂತ್ರಿಗಳ ಜತೆ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದರು. ಎಳೆ ನೀರು ಸಂಸ್ಕರಣ ಘಟಕ ಆರಂಭಿಸಬೇಕು, ಈ ಭಾಗದಲ್ಲಿ ಎರಡು ಮೂರು ಚಿಕ್ಕ ಚಿಕ್ಕ ಕೈಗಾರಿಕೆಗಳು ಬಂದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಕೆಆರ್ ಎಸ್ ಬೃಂದಾವನಕ್ಕಿಂತಲೂ ಸುಮಾರು ನಾಲ್ಕೈದು ಪಟ್ಟು ದೊಡ್ಡದಾದ ಉದ್ಯಾನಗಳ ಸಮುಚ್ಛಯ ಆಲಮಟ್ಟಿಯಲ್ಲಿದೆ. ಪ್ರವಾಸಿ ತಾಣವಾಗಿ ಆಲಮಟ್ಟಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕರ್ನಾಟಕದ ಅತ್ಯಂತ ದೊಡ್ಡ ಉದ್ಯಾನಗಳ ತಾಣ ಆಲಮಟ್ಟಿ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ, ತಿರುಪತಿ ಬಂಡಿವಡ್ಡರ, ಬಿ.ಪಿ. ಅಶೋಕ, ಗೋವಿಂದರಾಜು, ಕೃಷ್ಣಪ್ಪ, ಶಂಕರ, ಸುರೇಶ, ಲೋಕೇಶ, ನಾಗಪ್ಪ ಇನ್ನೀತರರು ಇದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದ ಮಹಾಮಾರಿ!

ಬೀದರ್: ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಈ ನಿಟ್ಟಿನಲ್ಲಿ ಸಾವಿನ ಸಂಖ್ಯೆ 45ಕ್ಕೆ ಏರಿಕೆ ಕಂಡಿದೆ.ಇಲ್ಲಿಯ…

ಪಾನ ನಿಷೇಧ ಒಂದು ವಿಶ್ಲೇಷಣೆ

ಈಗ ನಲವತ್ತು ದಿವಸದಿಂದ ಬಂದ್ ಆಗಿದ್ದ ಮದ್ಯ ಮಾರಾಟ ಈಗ ಪುನರಾರಂಭವಾಗಿದೆ. ಈಗ ಕೆಲವರು ರಾಜಕೀಯ, ಕೆಲವರು ಸಾಮಾಜಿಕ ಕಳಕಳಿಯಿಂದ ಮತ್ತೆ ಕೆಲವರು ಸುಮ್ಮನೆ ಪ್ರಚಾರದ ಕಾರಣ ಪಾನ ನಿಷೇಧ ಮಾಡಿರಿ ಎಂದು ಸರಕಾರಕ್ಕೆ ಹೇಳುತ್ತಿದ್ದಾರೆ. ಈ ಬಗ್ಗೆ ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಚ್.ಮಿಟ್ಟಲಕೊಡ ಅವರ ವಿಶ್ಲೇಷಣೆ ಇಲ್ಲಿದೆ…

ಕತ್ತಲ ಕೋಣೆ ಕನ್ನಡ ಸಿನಿಮಾಕ್ಕೆ ಭೋಜಪುರಿ ನಿರ್ಮಾಪಕನ ಕಣ್ಣು!

ಕತ್ತಲ ಕೋಣೆ ಕನ್ನಡ ಸಿನಿಮಾ ಮೇಲೆ ಇದೀಗ ಭೋಜಪುರಿ ನಿರ್ಮಾಪಕರು ಕಣ್ಣು ಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾ ಇದಾಗಿದ್ದು 1998ರ ಸತ್ಯ ಘಟನೆ ಆಧಾರಿತ ಚಿತ್ಯರ. ಉಡುಪಿಯ ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿತ್ತು. ಚಿತ್ರದ ನಾಯಕ ನಟ ಕೂಡ ಸಂದೇಶ ಅವರೆ. ಅಂದುಕೊಂಡಂತಾದರೆ ಕನ್ನಡದ ಕತ್ತಲ ಕೋಣೆ ಮರಾಠಿಯಲ್ಲೂ ಸದ್ದು ಮಾಡಲಿದೆ.

ಹಾವೇರಿ ಜಿಲ್ಲೆಯ ಜನತೆಗೆ ಮೊದಲ ಸಿಹಿ ಸುದ್ದಿ.

40 ವರ್ಷದ ಕರೊನಾ ಸೋಂಕಿತ ವ್ಯಕ್ತಿ ಗುಣಮುಖವಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಹಾವೆರಿ ಜಿಲ್ಲೆಯ ಜನತೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಪಿ-672 ಸೋಂಕಿತ ಗುಣಮುಖವಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.