ಬೆಂಗಳೂರು: ಕರ್ನಾಟಕದ ಸರ್ಕಾರೀ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮತ್ತು ವೇತನ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ರಾಜ್ಯಮಟ್ಟದ ವಿಚಾರ ಸಂಕಿರಣ (ವೆಬಿನಾರ್) ಅನ್ನು 2020 ಆಗಸ್ಟ್ 19 ರಂದು ಬುಧವಾರ ಮಧ್ಯಾಹ್ನ 2.30 ಕ್ಕೆ (ಸಾಮಾಜಿಕ ಜಾಲತಾಣದ ಮೂಲಕ) ಆಯೋಜಿಸಲಾಗಿದೆ.

ಖ್ಯಾತ ಸಾಹಿತಿ, ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ವಿಷಯ ಮಂಡನೆ: ಸೇವಾ ಭದ್ರತೆ- ಸರ್ಕಾರ ಅನುಸರಿಸಬಹುದಾದ ಕ್ರಮಗಳು ಎಂಬ ವಿಷಯವಾಗಿ ಕರ್ನಾಟಕ ಉಚ್ಚ ನ್ಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ವಿಷಯ ಮಂಡಿಸಲಿದ್ದಾರೆ. ಹಿರಿಯ ಆರ್ಥಿಕ ತಜ್ಞ ಪ್ರೊ.ಟಿ.ಆರ್.ಚಂದ್ರಶೇಖರ ಉನ್ನತ ಶಿಕ್ಷಣ ಪದವೀಧರರು ಮತ್ತು ವಿವಿಗಳಲ್ಲಿ ಉದ್ಯೋಗಾವಕಾಶಗಳು ಎಂಬ ವಿಷಯವಾಗಿ ಮಾತನಾಡಲಿದ್ದಾರೆ.

ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರು ಉನ್ನತ ಶಿಕ್ಷಣ ಪದವೀಧರರ ನಿರುದ್ಯೋಗ- ಸಮೂಹ ಮಾಧ್ಯಮಗಳ ಪಾತ್ರ ಎಂಬ ವಿಷಯ ಮಂಡಿಸಲಿದ್ದು, ಸಾಮಾಜಿಕ ಚಿಂತಕ ಬಿ.ರಾಜಶೇಖರ ಮೂರ್ತಿ ಸೇವಾ ಭದ್ರತೆ- ಉಪನ್ಯಾಸಕರು ಮುಂದಿಡಬೇಕಾದ ಹೆಜ್ಜೆಗಳು ಎಂಬುದಾಗಿ ವಿಚಾರ ಮಂಡನೆ ಮಾಡಲಿದ್ದಾರೆ.

ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯ ಹಾಗೂ ವಿವಿಗಳ ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ/ ಅರೆಕಾಲಿಕ/ ತಾತ್ಕಾಲಿಕ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಾಹ್ನ 2.25 ಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಲಾಗಿನ್ ಆಗಬೇಕಾಗಿ ಕರ್ನಾಟಕ ವಿವಿಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಪ್ರಕಟಣೆ ತಿಳಿಸಿದೆ.

1 comment
Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು ಯಾವ ಊರಲ್ಲಿ ಎಷ್ಟು ಪಾಸಿಟಿವ್!

ಜಿಲ್ಲೆಯಲ್ಲಿ ಸೋಮವಾರ ದಿ. 20 ರಂದು 30 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.ಜಿಡಿಜಿ-498 ಮಲ್ಲಸಮುದ್ರ ನಿವಾಸಿ (46,ಪುರುಷ) ಹಾಗೂ ಜಿಡಿಜಿ-585 ಹುಲಕೋಟಿ

ರಾಜ್ಯದಲ್ಲಿಂದು 161 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 161 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5921 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 164. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 2605 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 3248 ಸಕ್ರೀಯ ಪ್ರಕರಣಗಳಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಒತ್ತುವರಿ ತೆರವಿಗೆ ಸೂಚನೆ: ಡಿಸಿ ಎಂ.ಸುಂದರೇಶ್ ಬಾಬು

ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆಗಳ ಗಡಿ ಗುರುತಿಸಿ, ಅತಿಕ್ರಮಣವಾದ ಕೆರೆಗಳನ್ನು ನವೆಂಬರ್ ತಿಂಗಳ ಅಂತ್ಯದೊಳಗಾಗಿ ತೆರವುಗೊಳಿಸಿ ಉದ್ಯಾನವನ (ಪ್ಲಾಂಟೇಷನ್) ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಪಿಡಿಒಗಳಿಗೆ ಸೂಚನೆ ನೀಡಿದರು.