ಗದಗ: ಈಗಾಗಲೇ ಒಂದುವರೆ ತಿಂಗಳ ಲಾಕ್ ಡೌನ್ ನಿಂದಾಗಿ ಬಹುತೇಕ ಬಡ ಹಾಗೂ ಮದ್ಯಮ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಇದರಿಂದಾಗಿ ಸಾಕಷ್ಟು ಜನ ತಮ್ಮದೇ ಆದ ರೀತಿಯಲ್ಲಿ ಜನ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮುಂಡರಗಿ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ಕೂಡ ಇಡೀ ಮುಂಡರಗಿ ತಾಲೂಕಿಗೆ ಆಹಾರ ಕಿಟ್ ಹಾಗೂ ತರಕಾರಿ ವಿತರಿಸಲು ಮುಂದಾಗಿದ್ದಾರೆ.

ಬಸವೇಶ್ವರ ವಿದ್ಯಾ ಸಮಿತಿ ಕಲಕೇರಿ, ಶ್ರೀ ಎಸ್.ಎಸ್.ಪಾಟೀಲ ಪ್ರತಿಷ್ಠಾನ, ಶ್ರೀ.ಎಸ್.ಎಸ್.ಪಾಟೀಲ್, ಮಾಜಿ ಸಹಕಾರ ಸಚಿವರು, ಕರ್ನಾಟಕ ಸರಕಾರ ಹಾಗೂ ಶಾಸಕರು ಮುಂಡರಗಿ ಮತಕೇತ್ರ ಮತ್ತು ಮುಂಡರಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಡಳಿತ ಮಂಡಳಿ, ತಾಲೂಕಿನ ವಿವಿಧ ಸಹಕಾರಿ ಸಂಘಗಳ ಆಡಳಿತ ಮಂಡಳಿ ಹಾಗೂ ಶ್ರೀಮತಿ ಗಂಗಮ್ಮ ಎಸ್. ಪಾಟೀಲ ಮೆಮೊರಿಯಲ್ ಬಾಗೇವಾಡಿ, ಶ್ರೀಮತಿ ಸುಶೀಲಮ್ಮ ಎಸ್. ಪಾಟೀಲ ಮೆಮೊರಿಯಲ್ ಗಂಗಾಪೂರ, ಶ್ರೀ ಶಿವಕುಮಾರಗೌಡ ಎಸ್. ಪಾಟೀಲ, ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಡರಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆಗೂ ಆಹಾರ ಕಿಟ್ ಹಾಗೂ ತರಕಾರಿ ವಿತರಣೆಗೆ ಮುಂದಾಗಿದ್ದಾರೆ.

ಮೇ.5 ರಂದು ಡಂಬಳ ಗ್ರಾಮದಿಂದ ಈ ಕಾರ್ಯ ಆರಂಭವಾಗಲಿದೆ. ಈಗಾಗಲೇ ತಾಲೂಕಿನ ಒಟ್ಟು 60 ಗ್ರಾಮಗಳ ಪೈಕಿ ಅಂದಾಜು 30,000 ಮನೆಗಳಿಗೆ ಕಿಟ್ ಪೂರೈಕೆಯ ಯೋಜನೆ ಹಮ್ಮಿಕೊಂಡಿದ್ದಾರೆ. ದಿನ ಬಳಕೆಯ ಆಹಾರ ಸಾಮಾಗ್ರಿ ಹಾಗೂ ಸ್ವತಃ ರೈತರಿಂದ ಖರೀದಿಸಿದ ತರಕಾರಿಯನ್ನು ಪ್ರತಿ ಮನೆಮನೆಗೆ ವಿತರಿಸಲಾಗುತ್ತದೆ.

ಮುಂಡರಗಿ ತಾಲೂಕಿನ ಪ್ರತಿ ಗ್ರಾಮದ ಜನರಿಗೆ ಆಹಾರ ಹಾಗೂ ತರಕಾರಿ ವಿತರಣೆಗಾಗಿ ಕಿಟ್ ತಯಾರಿಕೆ ಕಾರ್ಯ

ಕೊರೋನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದೇಶವನ್ನು ಈಗಾಗಲೇ ಲಾಕ್‌ಡೌನ್ ಮಾಡಲಾಗಿದೆ. ಇದರಿಂದ ಹಲವಾರು ಕುಟುಂಬಗಳಿಗೆ ಕೆಲಸವಿಲ್ಲದೆ ಹಣಕಾಸಿನ ತೊಂದರೆಯಾಗಿ ಆಹಾರ ಹಾಗೂ ತರಕಾರಿ ತೆಗೆದುಕೊಳ್ಳಲು ತೊಂದರೆಯಾಗಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬರ ಸಂಕಷ್ಟಕ್ಕೆ ಮತ್ತೊಬ್ಬರು ಸ್ಪಂದಿಸುವುದು ಮಾನವೀಯ ಗುಣವಾಗಿದೆ. ಈ ಕಾರಣದಿಂದ ಮುಂಡರಗಿ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ವಾಸವಾಗಿರುವಂತಹ ಕುಟುಂಬಗಳಿಗೆ ದಿನಬಳಕೆಗೆ ಬೇಕಾಗುವಂತಹ ಆಹಾರ ಧಾನ್ಯ ಪದಾರ್ಥಗಳು ಹಾಗೂ ರೈತರಿಂದ ನೇರವಾಗಿ ಖರೀದಿಸಿರುವಂತಹ ತರಕಾರಿ ವಿತರಣೆ ಮಾಡಲು ನಿರ್ಣಯಿಸಲಾಗಿದೆ ಅಂತಾರೆ ಶಿವಕುಮಾರಗೌಡ.

ಮುಂಡರಗಿ ಪಟ್ಟಣದ ಎಪಿಎಂಸಿ ಗೋಡೌನ್ ನಲ್ಲಿ ಕಿಟ್ ಗಳ ಪ್ಯಾಕಿಂಗ್ ಕಾರ್ಯ ಭರದಿಂದ ಸಾಗಿದೆ. ಇವರ ಈ ಜನಪರ ಕಾರ್ಯದ ಸಹಭಾಗಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು, ಸಹಕಾರಿಗಳು, ಯುವಕರು ಬೆಂಬಲವಾಗಿ ನಿಂತಿದ್ದು, ಪ್ರಸ್ತುತ ದಿನಮಾನಗಳಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ.  

Leave a Reply

Your email address will not be published. Required fields are marked *

You May Also Like

ಗದಗ, ಶಿರಹಟ್ಟಿ ತಾಲೂಕಿನಲ್ಲಿಂದು ಸೋಂಕಿತರು ಪತ್ತೆ!

ಗದಗ: ತಾಲೂಕಿನ ಹರ್ತಿ ಗ್ರಾಮದ ನಿವಾಸಿ 22 ವರ್ಷದ ಮಹಿಳೆ (ಪಿ-18287) ಸೋಂಕಿತರ ಸಂಪರ್ಕದಿಂದಾಗಿ ಗದಗ-ಬೆಟಗೇರಿ…

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ನೀಡಿದ ಸಲಹೆ ಏನು?

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಪ್ರೌಢ ಶಾಲಾ ಸಹ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ;

ಉತ್ತರಪ್ರಭ ಕೊಪ್ಪಳ: ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳನ್ನು  ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ…

ರೈತರ ಹೋರಾಟಕ್ಕೆ ಸ್ಪಂದಿಸಿ ಶೀರ್ಘದಲ್ಲೆ ರೈತರ ಬೇಡಿಕೆಗಳನ್ನ ಈಡೇರಿಸಲು ಭರವಸೆ

ಉತ್ತರಪ್ರಭ ಸುದ್ದಿ ಗದಗ: ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ರೈತರು ಶಿಂಗಟಾಲೂರ ಏತ ನೀರಾವರಿ ಎಡದಂಡೆ…