ಬೆಳ್ಳಂಬೆಳ್ಳಗ್ಗೆ ಫೀಲ್ಡ್‌ಗಿಳಿದ ಶಾಸಕ ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ: ನ್ಯಾಮತಿ ತಾಲೂಕಿನಾದ್ಯಂತ ನಿನ್ನೆ ಸುರಿದ ಭಾರಿ ಮಳೆಯಿಂದ ಕೆಲವು ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಈ ಕಾರಣದಿಂದ ಇಂದು ಶಾಕಸ ಎಂ.ಪಿ.ರೇಣುಕಾಚಾರ್ಯ ಬೆಳ್ಳಂಬೆಳಿಗ್ಗೆಯೇ ಫಿಲ್ಡ್ ಗೆ ಇಳಿದರು.

ಮಳೆಯಿಂದಾದ ಹಾನಿ ಪರಿಶೀಲಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ

ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಮಳೆ ಹಾನಿ ಪರಿಶೀಲಿಸಿ ಮಳೆಯಿಂದ ಹಾನಿಗೀಡಾದವರ ಸಂಕಷ್ಠ ಆಲಿಸಿದರು. ಗ್ರಾಮದಲ್ಲಿ ಗಾಳಿ ಮಳೆಯಿಂದ ನೂರಾರು ಮರ, 25 ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇನ್ನು ಮಳೆಯಿಂದಾಗಿ ನೆಲ ಕಚ್ಚಿದ ಭತ್ತ ಗದ್ದೆ ಪರಿಶೀಲನೆ ನಡೆಸಿದರು. ಇನ್ನು 27 ಮನೆಗಳಿ ಭಾಗಶಃ ಹಾನಿಯಾಗಿದ್ದು, ಮನೆಯಲ್ಲೇ ಇದ್ದ ವಯೋವೃದ್ಧರು ಮೇಲ್ಛಾವಣಿ ಕುಸಿತದಿಂದ ಗಾಯ ಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 16 ನರ್ಸರಿಗಳಿಗೆ ಹಾನಿಯಾಗಿದೆ. ಇನ್ನು ಬಿದ್ದ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲು ಸ್ಥಳದಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.  ಈ ಮೂಲಕ ರೈತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

Exit mobile version