ತಂದೆ ಬರ್ತಡೆಗೆ ಕೇಕ್ ತರಲು ಬಂದವರ ಬೈಕ್ ಜಪ್ತಿ!

ಗದಗ: ಜೂ.1ರವರೆಗೆ ಗದಗ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದಾಗ್ಯೂ ಜನರು ಮಾತ್ರ ಅನಾವಶ್ಯಕ ಓಡಾಟ ನಿಲ್ಲಿಸುತ್ತಿಲ್ಲ. ತಂದೆಯ ಹುಟ್ಟು ಹಬ್ಬ ಹಿನ್ನೆಲೆ ಕೇಕ್ ತರಲು ಹೊರ ಬಂದವರನ್ನು ತಡೆದ ಪೊಲೀಸರು ಬೈಕ್ ಸೀಜ್ ಮಾಡಿದ್ದಾರೆ.

ರೋಣದಲ್ಲಿ ಕಠಿಣ ಲಾಕ್ ಡೌನ್ ಗೆ ಜನರ ಸಾಥ್

ರೋಣ: ಪಟ್ಟಣದಾದ್ಯಂತ ಕಠಿಣ ಲಾಕ್ ದೌನ್ ಹಿನ್ನೆಲೆ ಘೋಷಣೆಯಾಗಿದ್ದು, ಸತತವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಠಿಣ ಕ್ರಮಕ್ಕೆ ಜನರು ಸಹಕಾರ ನೀಡಿದ ಪರಿಣಾಮ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅನಗತ್ಯವಾಗಿ ಯಾರೊಬ್ಬರೂ ಹೊರಬರದೆ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಲಾಕ್ ಡೌನ್ ವಿಸ್ತರಣೆಯ ನಿರ್ಧಾರದ ಕುರಿತು ಸಿಎಂ ಹೇಳಿದ್ದೇನು?

ಬೆಂಗಳೂರು: ಜೂನ್ 7ರ ವರೆಗೆ ಎಂದಿನಂತೆ ಲಾಕ್ಡೌನ್ ಇರುತ್ತದೆ. ಜೂನ್ 7ರ ನಂತರ ಲಾಕ್ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಜೂನ್ 5 ರಂದು ಲಾಕ್ ಡೌನ್ ವಿಸ್ತರಣೆಯ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕಟ್ಟಡ ಕಾರ್ಮಿಕರು ಲಾಕ್ ಡೌನ್ ಪರಿಹಾರಧನ ಪಡೆಯಲು ಇರುವ ಷರತ್ತುಗಳೇನು?

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿರುವಂತೆ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ.3,000 ಲಾಕ್ ಡೌನ್ ವಿಶೇಷ ಪರಿಹಾರಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಕಾಲೇಜ್ ಟೀಚರ್ತಿಯ ಸೇವಾ ಕಾರ್ಯ

ಗದಗ: ಕೊರೊನಾದ ಈ ಸಂಕಷ್ಟದಲ್ಲಿ ಅದೆಷ್ಟೋ ಜನರು ಬಡ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಕೆಲವರು ಪ್ರಾಮಾಣಿಕ ಸಹಾಯ ಮಾಡಿದರೆ ಇನ್ನು ಕೆಲವರ ಸಹಾಯದ ಉದ್ದೇಶವೇ ಬೇರೆಯದ್ದಾಗಿರುತ್ತದೆ.

ಗದಗನಲ್ಲಿ ಎಸ್ಪಿ ಯತೀಶ್ ಎನ್ ಸಿಟಿ ರೌಂಡ್ಸ್

ಗದಗ: ಈಗಾಗಲೇ ಜೂನ್ 1 ರವರೆಗೆ ಗದಗ ಜಿಲ್ಲೆಯನ್ನು ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆ ಎಸ್ಪಿ ಯತೀಶ್ ಎನ್ ಬೆಳ್ಳಂಬೆಳಿಗ್ಗೆ ಫಿಲ್ಡಿಗಿಳಿದು ಅನವಶ್ಯಕ ಓಡಾಡುವವರಿಗೆ ಖಡಕ್ ವಾರ್ನಿಂಗ್ ಮಾಡಿದರು. ಗದಗ- ಬೆಟಗೇರಿ ಅವಳಿ ನಗರವನ್ನು ರೌಂಡ್ ಹಾಕಿದರು.

ಲಾಕ್ ಡೌನ್ ಮದ್ಯೆಯೂ ಅಕ್ರಮ ಮದ್ಯ ಮಾರಾಟ ಮಹಿಳೆಯರ ಆಕ್ರೋಶ

ದಗ: ಲಾಕ್ ಡೌನ್ ನಡುವೆ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಹಿಳೆಯ ಪ್ರತಿಭಟನೆ ನಡೆಸಿರುವಂತಹ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಂದಪೂರ ಗ್ರಾಮದಲ್ಲಿ ನಡೆದಿದೆ. ಕಂದಪೂರ ಗ್ರಾಮದಲ್ಲಿ ಹಲವು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಕಂಡು ಮಹಿಳೆಯರು ಗ್ರಾಮ ಪಂಚಾಯತ ಎದುರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕ ಬೇಕಿದ್ದ ಅಬಕಾರಿ ಇಲಾಖೆ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್: ಫಿಲ್ಡಿಗಿಳಿದ ಡಿವೈಎಸ್ಪಿ

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್: ಫಿಲ್ಡಿಗಿಳಿದ ಡಿವೈಎಸ್ಪಿ ಗದಗ: ಕೊರೊನಾ ನಿಯಂತ್ರಣ ಹಿನ್ನೆಲೆ ಐದು‌ ದಿನಗಳ ಕಾಲ ಗದಗ ಜಿಲ್ಲೆಯಲ್ಲಿ ಕಠೀಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಶುಕ್ರವಾರ ವಿನಾಕಾರಣ ರಸ್ತೆಗಿಳಿದವರ ಬೈಕ್ ಸೀಜ್ ಮಾಡಲಾಯಿತು. ಸ್ವತ: ಡಿವೈಎಸ್ಪಿ ಫಿಲ್ಡಿಗಿಳಿದು ಬೈಕ್ ಸವಾರರಿಗೆ ತರಾಟೆಗೆ ತೆಗೆದುಕೊಂಡ ದೃಷ್ಯಗಳು ಕಂಡು ಬಂದವು. ರಿಪೋರ್ಟರ್ ಎಂದು ಸುಳ್ಳು ಹೇಳಿದ ವ್ಯಕ್ತಿ, ನಕಲಿ‌ ಪತ್ರಕರ್ತ ಎಂದು ತಿಳಿದ ತಕ್ಷಣ ಬೈಕ್ ವಶಕ್ಕೆ ಪಡೆಯಲಾಯಿತು.

ಗಡಿಬಿಡಿಯ ಲಾಕ್ ಡೌನ್ ಜಾರಿ: ಗಲಿಬಿಲಿಯಲ್ಲಿ ಉತ್ಪಾದನಾ ಫ್ಯಾಕ್ಟರಿ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ಜಿಲ್ಲೆ ಮತ್ತು ನಗರಗಳಲ್ಲಿ ದಿಢೀರ್ ಲಾಕ್ ಡೌನ್ ಹೇರಿದ್ದರಿಂದ ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಗದಗ ಜಿಲ್ಲೆಗೂ ಒಂದು ವಾರದ ಲಾಕ್ಡೌನ್?

ಸಿಎಂ ಯಡಿಯೂರಪ್ಪ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡೀಯೋ ಸಂವಾದ ನಡೆಸುತ್ತಿದ್ದಾರೆ. ಅಭಿಪ್ರಾಯ ಆಧರಿಸಿ ಲಾಕ್ ಡೌನ್ ಜಾರಿ ಮಾಡಬಹುದು ಎನ್ನಲಾಗಿದೆ.

ಸಂಡೇ ಲಾಕ್ ಡೌನ್ ಸಂಕಟ: ಕಂಗಾಲಾದ ಕಾಗೆಗಳಿಗೆ ಖಾರಾ-ಡಾಣಿ ಊಟ

ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಗದಗ ಜಿಲ್ಲೆಯಲ್ಲಿ ಕೊರೊನಾ ಭಯ!: ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆಯಾ ಜಿಮ್ಸ್..!

ಗದಗ: ನಿನ್ನೆ ರಾತ್ರಿಯಿಂದಲೇ ಕೊರೊನಾ ಪಾಸಿಟಿವ್ ಎಂದು 30 ಸೊಂಕಿತರ ಲೀಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ…