ಬೆಂಗಳೂರು: ಜೂನ್ 7ರ ವರೆಗೆ ಎಂದಿನಂತೆ ಲಾಕ್ಡೌನ್ ಇರುತ್ತದೆ. ಜೂನ್ 7ರ ನಂತರ ಲಾಕ್ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಜೂನ್ 5 ರಂದು ಲಾಕ್ ಡೌನ್ ವಿಸ್ತರಣೆಯ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಈ ಕುರಿತು ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಲಾಕ್ ಡೌನ್ ಹಿನ್ನೆಲೆ ರಾಜ್ಯದ ಜನರು ಸಹಕಾರ ನೀಡಬೇಕು. ಜೂನ್ 7ರ ವರೆಗೆ ರಾಜ್ಯದಲ್ಲಿ ಬಿಗಿ ಕ್ರಮ ಮುಂದುವರಿಯುತ್ತದೆ. ಕೊರೊನಾ ನಿಯಂತ್ರಣ ನೋಡಿಕೊಂಡು ಲಾಕ್ಡೌನ್ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
2ನೇ ಅಲೆಯಲ್ಲಿ ನಿರೀಕ್ಷೆಗೂ ಮೀರಿ ಕೊವಿಡ್ ಪ್ರಕರಣ ಹೆಚ್ಚಳವಾಗಿದೆ. ಈಗ ಕೊರೊನಾ ಕೇಸ್ ಕಡಿಮೆಯಾಗಿರುವುದು ನೆಮ್ಮದಿ ವಿಚಾರ. ಕೊರೊನಾ ಕಡಿಮೆಯಾಯಿತು ಎಂದು ಸುಮ್ಮನಿರುವಂತಿಲ್ಲ. ಹಳ್ಳಿಗಳಲ್ಲಿ ಹೆಚ್ಚು ಕೊವಿಡ್ ಟೆಸ್ಟ್ ಮಾಡಬೇಕು. ಕೆಲವೊಂದು ಹಳ್ಳಿಗಳಲ್ಲಿ ಒಂದೇ ಒಂದು ಕೇಸ್ ಪತ್ತೆಯಾಗಿಲ್ಲ. ಅಂತಹ ಹಳ್ಳಿಗಳಿಗೆ ಕೊರೊನಾ ಹರಡದಂತೆ ನಿಗಾವಹಿಸಬೇಕು ಎಂದು ಜಿಲ್ಲಾಡಳಿತಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು.

Leave a Reply

Your email address will not be published. Required fields are marked *

You May Also Like

ನೇತ್ರ ದಾನ

ಉತ್ತರಪ್ರಭ ನೇತ್ರದಾನ ಮಾಡಬೇಕೆಂದು ಕೊಂಡಿದ್ದೇನೆನೊಂದಾಯಿಸಿಕೊಳ್ಳಿ ನನ್ನೆಯ ಹೆಸರನ್ನಉರಿಯುವ ಬೆಂಕಿಯಲಿಟ್ಟರೆ ಬೂದಿಯಾಗುತ್ತೇನೆಮಣ್ಣಿನೊಳಗೆ ಹುಗಿದರೆ ಕೊಳೆತು ಹೋಗುತ್ತೇನೆ ಸತ್ತ…

ಬಿಸಿಯೂಟದ ಬದಲು ಅಹಾರ ನೀಡಿ : ಹೈಕೋರ್ಟ್ ಸೂಚನೆ

ಕೊರೊನಾ ಸೋಂಕು ಮಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಿಗೆ ಅಹಾರ ಧಾನ್ಯ ವಿತರಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.