ಗದಗ: ಲಾಕ್ ಡೌನ್ ನಡುವೆ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಹಿಳೆಯ ಪ್ರತಿಭಟನೆ ನಡೆಸಿರುವಂತಹ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದಲ್ಲಿ ನಡೆದಿದೆ. ಕದಾಂಪುರ ಗ್ರಾಮದಲ್ಲಿ ಹಲವು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಕಂಡು ಮಹಿಳೆಯರು ಗ್ರಾಮ ಪಂಚಾಯತ ಎದುರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕ ಬೇಕಿದ್ದ ಅಬಕಾರಿ ಇಲಾಖೆ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ಗ್ರಾಪಂ ಪಿಡಿಓ ಮುಂದೇ ಕಣ್ಣೀರು ಹಾಕುತ್ತಾ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ಗ್ರಾಮದ ಓರ್ವ ಯುವತಿ ನಂಗೆ ತಂದೆ ಇಲ್ಲಾ ತಾಯಿ ದುಡಿಯುತ್ತಾರೆ. ದುಡಿದ ಹಣ ಮನೆಯಲ್ಲಿಡುತ್ತಾರೆ. ಅದನ್ನು ನನ್ನ ಸಹೋದರರು ಹಣ ತಗೆದುಕೊಂಡು ಕುಡಿಯಲು ಹೋಗತ್ತಾರೆ ಅಂತಾ ಕಣ್ಣೀರು ಹಾಕಿದ್ದಾಳೆ. ಊರಲ್ಲಿ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರೋದೇ ಇದಕ್ಕೆಲ್ಲಾ ಕಾರಣ ಎಂದು ಯುವತಿ ಪಿಡಿಓ ಮುಂದೆ ತನ್ನ ಗೋಳು ತೋಡಿಕೊಂಡಳು. ಇನ್ನು ತಕ್ಷಣವೇ ಅಕ್ರಮ ಮದ್ಯ ಬಂದ್ ಮಾಡಿಸುವ ಭರವಸೆಯನ್ನು ಪಿಡಿಓ ನೀಡಿದರು.
ಈ ವೇಳೆ ಗ್ರಾಪಂ ಸದಸ್ಯರು, ಸಿಬ್ಬಂದಿ, ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಬಿಟ್ ಕಾಯಿನ್ ದಂಧೆಯ ಕೈವಾಡ: ಒಬಾಮಾ, ಗೇಟ್ಸ್ ಟ್ವೀಟರ್ ಅಕೌಂಟ್ ಹ್ಯಾಕ್ಡ್!

ಬಿಟ್ ಕಾಯಿನ್ ಹಗರಣವೊಂದನ್ನು ಪ್ರಮೋಟ್ ಮಾಡಲು ಅಮೆರಿಕದ ಖ್ಯಾತನಾಮರ ಟ್ವೀಟರ್ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗಿದೆ. ಟ್ವೀಟರ್ ಕಂಪನಿ ಈಗ ಆ ಅಕೌಂಟ್ಸ್ ಸ್ಥಗಿತಗೊಳಿಸಿದೆ.

ಗದಗ ಜಿಲ್ಲಾಡಳಿತಕ್ಕೆ 40 ಲಕ್ಷ ವೈದ್ಯಕೀಯ ಸಾಮಾಗ್ರಿ ನೆರವು ನೀಡಿದ ಐಪಿಎಸ್ ಅಧಿಕಾರಿ ಸಜ್ಜನ್.

ಗದಗ: ಮೂಲತಃ ಗದಗ ಜಿಲ್ಲೆಯವರಾದ ತೆಲಂಗಾಣ ರಾಜ್ಯದ ಸೈಬರ್ ಪೋಲಿಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಅಂದಾಜು 40 ಲಕ್ಷ ಮೌಲ್ಯದ ವೈಧ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ನೆರವು ನೀಡಿದ್ದಾರೆ.

ಇಂಧನ ಬೆಲೆ ಮತ್ತು ಹಣದ ಮೌಲ್ಯ ಒಂದೇ ನಾಣ್ಯದ ಮುಖಗಳು

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಇಂಧನ ದರ ಏರಿಕೆ ಆರಂಭಗೊAಡಿದೆ. ಯಾವುದೇ ಚುನಾವಣೆ ನಂತರ ಇಂಧನ ಬೆಲೆ ಏರಿಸುವದು ಸಾಮಾನ್ಯ. ಈ ಸಂಪ್ರದಾಯ ಇಂದು-ನಿನ್ನೆಯದಲ್ಲ, ಹಲವು ದಶಕಗಳ ಸಂಪ್ರದಾಯ ಈಗಲೂ ಅಷ್ಟೇ ಅಚ್ಚು ಕಟ್ಟಾಗಿ ಎಲ್ಲಾ ಸರ್ಕಾರಗಳು ಪಾಲಿಸುತ್ತಿವೆ.

ಕೊರೊನಾ ವಾರಿಯರ್ಸ್ ಗೆ ಉಪಹಾರ ವ್ಯವಸ್ಥೆ

ರೋಣ: ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಇಲ್ಲಿನ ಗ್ರಾಮ ಪಂಚಾಯತಿ ವತಿಯಿಂದ ಕೊರೊನಾ ವಾರಿಯರ್ಸ್ ಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇಂತಹ ಸಂಕಷ್ಟದ ದಿನಗಳಲ್ಲಿಯೂ ಜನರ ರೋಗ್ಯ ಹಾಗೂ ಪ್ರಾಣ ಕಾಪಾಡಲು ಕೊರೊನಾ ವಾರಿಯರ್ಸ್ ಗಳು ಇನ್ನಿಲ್ಲದೇ ಶ್ರಮಿಸುತ್ತಿದ್ದಾರೆ. ಆಶಾ, ಅಂಗನವಾಡಿ, ನರ್ಸ್ ಹಾಗೂ ವೈದ್ಯರು, ಶಿಕ್ಷಕರು ಇತರ ಎಲ್ಲ ವಿಭಾಗದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.