ಗದಗ: ನಿನ್ನೆ ರಾತ್ರಿಯಿಂದಲೇ ಕೊರೊನಾ ಪಾಸಿಟಿವ್ ಎಂದು 30 ಸೊಂಕಿತರ ಲೀಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಇದರಲ್ಲಿ 30 ಸೋಂಕಿತರ ಹೆಸರು ಸಮೇತ ವಿವರಣೆ ಇದೆ. ಹೀಗಾಗಿ ಗದಗ ಜಿಲ್ಲೆಯ ಜನರಲ್ಲಿ ಕೊರೊನಾ ಭಯ ವ್ಯಾಪಕವಾಗಿ ಆವರಿಸಿದೆ.


ಈಗಾಗಲೇ ದಿನದಿಂದ ದಿನಕ್ಕೆ ಕೊರೊನಾ ಕಾಟ ಹೆಚ್ಚಾಗುತ್ತಿದ್ದು ಗದಗ ಜಿಮ್ಸ್ ಮತ್ತೊಮ್ಮೆ ಯಡವಟ್ಟು ಮಾಡಿದೆ ಎಂದು ಹೇಳಲಾಗುತ್ತಿದೆ. ಇದೇ ತಿಂಗಳಲ್ಲಿ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿತರ ಹೆಸರು ಸಮೇತ ಸಂಖ್ಯೆಯ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಔಟ್ ಆಗಿತ್ತು. ಇದಾದ ನಂತರ ಕಳೆದ ಎರಡು ದಿನಗಳ ಹಿಂದಷ್ಟೆ ಮತ್ತೊಮ್ಮೆ ಇಂಥದ್ದೆ ಘಟನೆ ನಡೆದಿತ್ತು. ಆದ್ರೆ ಇದೀಗ ಮತ್ತೆ ಅದೇ ಘಟನೆ ಮರುಕಳಿಸಿದೆ. ನಿನ್ನೆ ರಾತ್ರಿಯಿಂದಲೇ ಸೋಂಕಿತರ ಲೀಸ್ಟ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಜಿಮ್ಸ್ ಸೋಂಕಿತರ ಜೀವನದ ಜೊತೆ ಚೆಲ್ಲಾಟ ವಾಡುತ್ತಿದೆಯಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಈಗಾಗಲೇ ಈ ಬಗ್ಗೆ ಈ ಹಿಂದೆಯೇ ಉತ್ತರಪ್ರಭ ಬೆಳಕು ಚೆಲ್ಲಿತ್ತು. ಆದಾಗ್ಯೂ ಎಚ್ಚೆತ್ತುಕೊಳ್ಳದ ಜಿಮ್ಸ್, ನಿರ್ಲಕ್ಷ್ಯದಿಂದಾಗಿ ಇಂದು ಮತ್ತೆ ಸೋಂಕಿತರ ಲೀಸ್ಟ್ ಬಹಿರಂಗವಾಗಿದೆ. ಇದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಲೀಸ್ಟ್ ಬಹಿರಂಗವಾಗಿರುವುದು ನನ್ನ ಗಮನಕ್ಕೂ ಬಂದಿದೆ. ಈ ಹಿಂದೆ ಉತ್ತರಪ್ರಭದ ವರದಿ ಆಧರಿಸಿ ಸಿಬ್ಬಂಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆದರೆ ಇದೀಗ ಸೋಂಕಿತರ ವರದಿಯನ್ನು ಅಪ್ ಲೋಡ್ ಮಾಡುವ ಕಾರ್ಯ ಬೇರೆ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುತ್ತೇನೆ.

ಡಾ.ಪಿ.ಎಸ್.ಭೂಸರಡ್ಡಿ, ಜಿಮ್ಸ್ ನಿರ್ದೇಶಕ.

ಕೋವಿಡ್ 19 ನಿಯಮದ ಪ್ರಕಾರ ಸೋಂಕಿತರ ಹೆಸರು ಅಥವಾ ಯಾವುದೇ ಪರಿಚಯ ಬಹಿರಂಗ ಪಡಿಸಬಾರದು ಎನ್ನುವ ನಿಯಮವಿದೆ. ಆದರೆ ಸೋಂಕಿತರ ಹೆಸರು ಮತ್ತು ಊರಿನ ಸಮೇತ ವಿವರಣೆಯ ಮಾಹಿತಿಯೇ ಈಗ ವೈರಲ್ ಆಗಿದೆ. ಜಿಮ್ಸ್ ದೃಢಪಡಿಸಿದ ಮಾಹಿತಿಯ ಲೀಸ್ಟ್ ಬಹಿರಂಗವಾಗಿದ್ದು, ಇದರಲ್ಲಿ 30 ಜನರಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಸೋಂಕಿತರನ್ನು ಜನರು ನೋಡುವ ದೃಷ್ಟಿಯೇ ಬೇರೆ ಇಂಥ ಪರಿಸ್ಥಿತಿಯಲ್ಲಿಯೂ ಹೆಸರು ಸಮೇತ ಪಟ್ಟಿ ಹೇಗೆ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ ಎನ್ನುವುದು ಪ್ರಶ್ನೆಯಾಗಿದೆ‌. ಸೋಂಕಿತರ ಬಗ್ಗೆ ಜಿಲ್ಲಾಧಿಕಾರಿಗಳು ಮಾತ್ರ ಅಧಿಕೃತವಾಗಿ ಘೋಷಣೆ ಮಾಡಬೇಕು. ಹೀಗಿದ್ದಾಗ್ಯೂ ಜಿಮ್ಸ್ ದೃಢಪಡಿಸಿದ ಪಟ್ಟಿ ಬಹಿರಂಗವಾಗಿದೆ. ಇದರಿಂದ ಸೋಂಕಿತರ ಜೊತೆ ಆಡಳಿತ ವ್ಯವಸ್ಥೆ ಚೆಲ್ಲಾಟವಾಡುತ್ತಿದ್ದಂತೆ ಕಾಣುತ್ತಿದೆ.

ಈ ರೀತಿ ಸಾಕಷ್ಟು ಬಾರಿ ಆಗಿದೆ. ಆದರೂ ಒಮ್ಮಿಯೂ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಡಳಿತ ವ್ಯವಸ್ಥೆ ಮುಂದಾಗಿಲ್ಲ. ಇಂಥ ತಪ್ಪು ಮರುಕಳಿಸುತ್ತಲೇ ಇವೆ. ಆದರೆ ಇದರಿಂದ ಸೋಂಕಿತರ ಮಾನಸಿಕ ಸ್ಥಿತಿಯ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದರ ಬಗ್ಗೆ ಜಿಲ್ಲಾಡಳಿತ ಯೋಚಿಸಬೇಕಿದೆ‌. ಒಂದು ವೇಳೆ ವೈರಲ್ ಆದ ಸೋಂಕಿತರ ಲೀಸ್ಟ್ ನಿಜವೇ ಆಗಿದ್ದರೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಅಥವಾ ಅದು ಫೇಕ್ ಲೀಸ್ಟ್ ಆಗಿದ್ದರೂ ಕೂಡ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು‌. ಇಲ್ಲವಾದಲ್ಲಿ ಜಿಮ್ಸ್ ನಿರ್ಲಕ್ಷ್ಯದಿಂದ ಜಿಲ್ಲಾಡಳಿತವೂ ಸೋಂಕಿತರ ಜೀವನದಲ್ಲಿ ಚೆಲ್ಲಾಟವಾಡಿದಂತಾಗುತ್ತದೆ ಎಂದು ಜಿಲ್ಲೆಯ ಪ್ರಜ್ಞಾವಂತ ಜನರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಲೀಸ್ಟ್ ಬಹಿರಂಗವಾಗಿರುವುದು ನನ್ನ ಗಮನಕ್ಕೂ ಬಂದಿದೆ. ಈ ಹಿಂದೆ ಉತ್ತರಪ್ರಭದ ವರದಿ ಆಧರಿಸಿ ಸಿಬ್ಬಂಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆದರೆ ಇದೀಗ ಸೋಂಕಿತರ ಲೀಸ್ಟ್ ವರದಿಯನ್ನು ಅಪ್ ಲೋಡ್ ಮಾಡು ಕಾರ್ಯ ಬೇರೆ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುತ್ತೇನೆ.
ಡಾ.ಭೂಸರಡ್ಡಿ, ಜಿಮ್ಸ್ ನಿರ್ದೇಶ.

Leave a Reply

Your email address will not be published. Required fields are marked *

You May Also Like

ಕೊರೊನಾ ವಾರಿಯರ್ಸ್ ಗೆ ಸಿಗದ ಸಂಬಳ!

ಕೊರೊನಾ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹೋರಾಡುತ್ತಿದ್ದಾರೆ. ಆದರೆ, ಇವರ ಸಂಬಳಕ್ಕೆ ಕತ್ತರಿ ಹಾಕಿರುವುದು ಬೆಳಕಿಗೆ ಬಂದಿದೆ.

ಪೇಶೆಂಟ್ ನಂ.419 ಸೃಷ್ಟಿಸಿದ ಅವಾಂತರಕ್ಕೆ ಇಡೀ ರಾಜ್ಯವೇ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ?

ಕ್ವಾರೆಂಟೈನ್ ಮುಗಿಸಿ ಬಂದ 419 ವ್ಯಕ್ತಿಯಿಂದಾಗಿ ಬೆಂಗಳೂರಿನಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ನಿನ್ನೆ ಈ ವ್ಯಕ್ತಿ ಐಸಿಯುನಲ್ಲಿಯೇ ಇದ್ದಾನೆ ಎಂದು ಹೇಳಲಾಗಿತ್ತು.

ಪ.ಜಾ-ಪ.ಪಂ ಕುಂದುಕೊರತೆ ಸಭೆ

ನಗರದ ಡಿ.ಸಿ.ಮಿಲ್ ತಳಗೇರಿ ಓಣಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ ಆಯೋಜಿಸಲಾಯಿತು.

4 ಸಾವಿರ ತಬ್ಲಿಘಿಗಳ ಬಿಡುಗಡೆಗೆ ಆದೇಶ ನೀಡಿದ ದೆಹಲಿ ಸರ್ಕಾರ!

ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ 4 ಸಾವಿರ ತಬ್ಲಿಘಿ ಸದಸ್ಯರನ್ನು ಬಿಡುಗಡೆ ಮಾಡುವಂತೆ ದೆಹಲಿ ಸರ್ಕಾರ ಆದೇಶಿಸಿದೆ.