ಸೋಲು-ಗೆಲುವು ಸಮನಾಗಿ ಸ್ವೀಕರಿಸಿ: ಜಿ.ಎಂ.ಕೋಟ್ಯಾಳ

ಉತ್ತರಪ್ರಭ
ಆಲಮಟ್ಟಿ :
ಚುನಾವಣೆ ಎಂದ ಮೇಲೆ ಸೋಲು,ಗೆಲುವು ಇದಿದ್ದೆ. ಸೋತವರು ಕುಗ್ಗಬಾರದು ಗೆದ್ದವರು ಹಿಗ್ಗಬಾರದು. ಎರಡನ್ನು ಒಮ್ಮನಿಸ್ಸಿಂದ ಸಮನಾಗಿ ಸ್ವೀಕರಿಸಿ ಆಚಲ ನಿಧಾ೯ರದೊಂದಿಗೆ ಮುಂದೆ ಸಾಗುವ ಮನೋಭಾವ ಸ್ಪಧಾ೯ಕಣದಲ್ಲಿರುವ ವಿದ್ಯಾರ್ಥಿಗಳು ಹೊಂದಬೇಕು ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.


ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಜರುಗಿದ 2022-23 ನೇ ಸಾಲಿನ ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಹುರಿಯಾಳುಗಳನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳಿನ ದೇಶದ ಅಮೂಲ್ಯ ಆಸ್ತಿ. ಅವರನ್ನು ಒಳ್ಳೆಯ ನಾಗರೀಕರನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶಾಲಾ ಸಂಸತ್ತು ರಚನೆಯಿಂದ ಮಕ್ಕಳಲ್ಲಿ ನಾಯಕತ್ವದ ಗುಣಗಳು ಅಂಕುರಗೊಳ್ಳಲ್ಲು ಸಾಧ್ಯ. ಇದು ಸ್ಪಧಾ೯ತ್ಮಕ ಯುಗಮಾನ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲೇ ಉತ್ತಮ ನಡುವಳಿಕೆ ಅತ್ಯಗತ್ಯ. ಅಲ್ಲದೇ ಇಂದಿನ ಮಕ್ಕಳಿಗೆ ಎಲ್ಲ ಸ್ತರದ ಅನುಭವ ಗುಣಮಟ್ಟದ ಶಿಕ್ಷಣ ಜೊತೆಗೆ ದೊರೆಯಬೇಕು. ಆ ಅರಿವಿನಡಿಯಲ್ಲಿ ಚಾರಿತ್ರಿಕ ವ್ಯಕ್ತಿತ್ವದ ಚಹರೆಗಳು ಯುವ ಜನಾಂಗ ಬೆಳೆಸಿಕೊಳ್ಳಬೇಕು ಎಂದರು.
ಶಿಸ್ತು, ಶ್ರದ್ಧೆ, ಸಂಯಮ,ಸಹನೆ ತಾಳ್ಮೆ, ಉತ್ತಮ ಹವ್ಯಾಸ,ಕಠಿಣ ಪರಿಶ್ರಮ, ದೃಢ ಸಂಕಲ್ಪದ ದೃಷ್ಟಿಕೋನ,ಸಕಾರಾತ್ಮಕ ಧೋರಣೆ,ಆತ್ಮಬಲದ ಪ್ರಯತ್ನಗಳು ಯಶಸ್ವಿನ ಮೂಲ ಮಂತ್ರಗಳಾಗಿವೆ.ಆ ದಿಸೆಯಲ್ಲಿ ಮಕ್ಕಳು ಇವುಗಳನ್ನು ಮೈಗೂಡಿಸಿಕೊಂಡು ಓದಿನೊಂದಿಗೆ ಜೀವನದಲ್ಲಿ ಮುಂದೆ ಬರಬೇಕು ಎಂದರು.
ಗಣಿತ ವಿಷಯದ ಜಿಲ್ಲೆಯ ಸಂಪನ್ಮೂಲ ಶಿಕ್ಷಕ ಎನ್.ಎಸ್.ಬಿರಾದಾರ, ಮತದಾನದ ಮಹತ್ವ, ಪ್ರಜಾಪ್ರಭುತ್ವದ ಪರಿಕಲ್ಪನೆ, ಶಾಲಾ ಸಂಸತ್ತು ರಚನೆಯ ಹಿನ್ನೆಲೆ ಕುರಿತು ಮಾಹಿತಿ ನೀಡಿದರು. ಸ್ವಾಸ್ಥ್ಯ ಸಮಾಜ ನಿಮಾ೯ಣದಲ್ಲಿ ಯುವಜನತೆಯ ಪಾತ್ರ ಹಿರಿದು. ಹತಾಶೆ,ವೈಫಲ್ಯ, ಸೋಲಿಗೆ ಧೃತಿಗೆಡದೆ ಆದರ್ಶ ವ್ಯಕ್ತಿಗಳಾಗಿ ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಿ. ಮಕ್ಕಳಿಗೆ ಸರಳ,ಸಜ್ಜನಿಕೆ ಭಾವವೇ ಶೋಭಿತ ಎಂದರು.
ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಎಲ್ಲ ನಿಯಮಗಳನ್ನು ಅಚ್ಚುಕಟ್ಟಾಗಿ ಅನುಸರಿಸಿ ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು. ಮಕ್ಕಳಲ್ಲಿ ಮತದಾನದ ಪ್ರಜ್ಞೆ ಮೂಡಿಸಲಾಯಿತು.
ಸಂಸತ್ತು ರಚಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಮಕ್ಕಳಿಂದ ನಾಮಪತ್ರ ಸಲ್ಲಿಕೆ,ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ, ಚುನಾವಣಾ ಪ್ರಚಾರ, ಮತ ಏಣಿಕೆಯಂಥ ವಿವಿಧ ಚುನಾವಣಾ ಪ್ರಕ್ರಿಯೆ ನಡೆಯಿತು. ಮಕ್ಕಳು ಉತ್ಸಾಹದಿಂದ ಭಾಗಿಯಾಗಿ ಮತದಾನದ ಹಕ್ಕು ಮೊದಲ ಬಾರಿಗೆ ಶಾಲಾ ಹಂತದಲ್ಲಿ ಚಲಾಯಿಸಿ ಖುಷಿಪಟ್ಟರು.
ಪ್ರಧಾನಿಯಾಗಿ ಸೌಜನ್ಯ ಬ್ಯಾಹಟ್ಟಿ ಆಯ್ಕೆ ತುರಿಸಿನಿಂದ ಶಾಲಾ ಸಂಸತ್ತಿಗಾಗಿ ನಡೆದ ಚುನಾವಣೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಸೌಜನ್ಯ ಬ್ಯಾಹಟ್ಟಿ ತಮ್ಮ ಸಮೀಪದ ಪ್ರತಿಸ್ಪಧಿ೯ ದೀಪಾ ರಜಪೂತ ಅವಳನ್ನು 28 ಮತಗಳ ಅಂತರದಿಂದ ಪರಾಭವಗೊಳಿಸಿ ಪ್ರಧಾನಿ ಹುದ್ದೆಗೆ ಆಯ್ಕೆಗೊಂಡರು. ಉಪ ಪ್ರಧಾನಿಗೆ ಸ್ಪಧಿ೯ಸಿದ ರಾಧಿಕಾ ಮಾದರ ತಮ್ಮ ಪ್ರತಿಸ್ಪರ್ಧಿ ಪ್ರದೀಪ ರಾಠೋಡ ಅವರನ್ನು 59 ಮತದ ಅಂತರದಿಂದ ಪರಾಭವಗೊಳಿಸಿ ಆಯ್ಕೆಗೊಂಡರೆ ಮಹಿಳಾ ಪ್ರತಿನಿಧಿ ಹುದ್ದೆಗೆ ಸ್ಪಧಿ೯ಸಿದ 10ನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ಮಂಜುನಾಥ್ ಅಂಗಡಿ ತನ್ನ ಪ್ರತಿಸ್ಪರ್ಧಿ ಮಧು ಚವ್ಹಾಣ ಅವಳನ್ನು 11 ಮತದಿಂದ ಸೋಲಿಸಿ ಜಯದ ನಗೆ ಬಿರಿದಳು. ಈ ಸಂದರ್ಭದಲ್ಲಿ ಸೌಜನ್ಯ ಬ್ಯಾಹಟ್ಟಿ,ಅಕ್ಷತಾ ಅಂಗಡಿ ಮಾತನಾಡಿ, ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವದಾಗಿ ತಿಳಿಸಿದರು. ಶಿಕ್ಷಣದಿಂದ ಮನುಷ್ಯನ ನಡುವಳಿಕೆ ಬದಲಾವಣೆಯಾಗಲು ಸಾಧ್ಯ ಎಂದರು.
ಮುಖ್ಯಶಿಕ್ಷಕರ ಮೇಲ್ವಿಚಾರಣೆಯಲ್ಲಿ ಆಂಗ್ಲ ಶಿಕ್ಷಕ ಆರ್.ಎಂ.ರಾಠೋಡ ಮುಖ್ಯ ಚುನಾವಣಾಧಿಕಾರಿಯಾಗಿ, ಮತಗಟ್ಟೆ ಅಧಿಕಾರಿಗಳಾಗಿ ಅನಿತಾ ರಾಠೋಡ, ಪಲ್ಲವಿ.ಎಂ.ಸಜ್ಜನ,ಕವಿತಾ.ಡಿ.ಮಠದ ಕಾರ್ಯನಿರ್ವಹಿಸಿದರು. ಜಿ.ಆರ್.ಜಾಧವ,ಶಾಂತೂ ತಡಸಿ ಇತರರಿದ್ದರು.
ಫಲಿತಾಂಶ ಪ್ರಕಟಗೊಂಡ ಬಳಿಕ ವಿಜಯಿ ಅಭ್ಯಥಿ೯ಗಳ ಪರವಾಗಿ ಅಭಿಮಾನಿ ಮಕ್ಕಳು ಪರಸ್ಪರ ಗುಲಾಲ ಎರಚಿ ಸಂಭ್ರಮಿಸಿದರು. ಆಯ್ಕೆಯಾದ ಅಭ್ಯಥಿ೯ಗಳ ಹೆಸರನ್ನು ಮುಖ್ಯ ಶಿಕ್ಷಕರು ಅಧಿಕೃತವಾಗಿ ಘೋಷಿಸಿದರು.

Leave a Reply

Your email address will not be published. Required fields are marked *

You May Also Like

ಸದ್ದಿಲ್ಲದೆ ಸಾಗುತ್ತಿದೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿ:ಸಾವಿತ್ರಿ ಬಾಯಿ ಫುಲೆ” ಕಲಿಕಾ ಕೇಂದ್ರ

ಕೋರೊನಾ ಈ ಹೆಸರಿನ ಮಹಾಮಾರಿ ಯಾರಿಗೆ ಗೊತ್ತಿಲ್ಲ ದೇಶದಲ್ಲಿ ಈ ಮಹಾಮಾರಿಯಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಸಂಪ್ರದಾಯಿಕವಾಗಿ…

ಮಕ್ಕಳ ಕಲಿಕಾ ಮೇಳ ಸಂಭ್ರಮ…ವೈವಿಧ್ಯ ಪರಿಕಲ್ಪನೆ ಕೌಶಲ್ಯ ಅನಾವರಣ..!

ಆಲಮಟ್ಟಿ: ಅಲ್ಲಿ ಗಣಿತ, ಭಾಷೆ ಸೇರಿ ನಾನಾ ವಿಷಯಗಳ ಕಠಿಣ ಪರಿಕಲ್ಪನೆಗಳನ್ನು ನಾನಾ ಹೊಸ ಹೊಸ…

ಖಾಸಗಿ ಅನುದಾನ ರಹಿತ ಶಾಲೆಗಳ ಶುಲ್ಕ ಹೆಚ್ಚಳ ಬೇಡ: ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶಾಲಾ ಶುಲ್ಕಗಳನ್ನು ಪರಿಷ್ಕರಿಸದಂತೆ ರಾಜ್ಯ ಸರ್ಕಾರ…