ಆಲಮಟ್ಟಿ: ಜಲಾಶಯಕ್ಕೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಹೊರ ಹರಿವು ಆರಂಭಗೊಂಡಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ,ರಾಜ್ಯದ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಹಲದಿನಗಳಿಂದ ಎಡೆಬಿಡದೆ ಧಾರಾಕಾರ ವರ್ಷಧಾರೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿಗೆ ದಿನೇದಿನೇ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದು ಆಲಮಟ್ಟಿ ಜಲಾಶಯದ ಒಡಲು ಸೇರುತ್ತಿದೆ.


ಸೋಮವಾರ ಸಂಜೆ ವೇಳೆಗೆ ಲಕ್ಷಕ್ಕೂ ಹೆಚ್ಚು 1.09.858 ಕ್ಯುಸೆಕ್ ನೀರು ಆಣೆಕಟ್ಟಿಗೆ ಒಳಹರಿವು ಮೂಲಕ ಬಂದು ಸೇರಿದೆ. ಜಲಾಶಯ 26 ಗೇಟ್ ಗಳನ್ನು ಹೊಂದಿದ್ದು ಅದರಲ್ಲಿ 18 ಗೇಟ್ ತೆರವುಗೊಳಿಸಿ 75 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿ ಕೆಳಪಾತ್ರಕ್ಕೆ ಹರಿ ಬಿಡಲಾಗುತ್ತಿದೆ. ಒಳಹರಿವು ಹೆಚ್ಚಳದಿಂದ ನೇರೆ ಪ್ರವಾಹ ತಲೆ ದೊರದಂತೆ ಎಚ್ಚರಿಕೆ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿಯಂತ್ರಣಕ್ಕಾಗಿ ಡ್ಯಾಂ ಭತಿ೯ಗೂ ಮುನ್ನವೇ ನೀರು ಹೊರ ಹರಿಸಲಾಗುತ್ತಿದೆ. 519.60 ಮೀಟರ್ ಗರಿಷ್ಠ ಮಟ್ಟ ಎತ್ತರದ ಈ ಜಲಾಶಯದಲ್ಲಿ 517.17 ಮೀ. ನೀರು ದಾಖಲಾಗಿದೆ. 86.59 ಟಿ.ಎಂ.ಸಿ.ಅಡಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯದಲ್ಲಿಗ ಜಲರಾಶಿಯ ವೈಭವ ಕಂಗೊಳಿಸುತ್ತಿದೆ. ನೀರಿನ ಅಲೆಗಳ ನರ್ತನ ಜೋರಾಗುತ್ತಲ್ಲಿದೆ. ನೇರೆಯ ಮಹಾದಲ್ಲಿ ಮೇಘ ವೃಷ್ಟಿ ಹೀಗೆಯೇ ನಾಲ್ಕೈದು ದಿನ ಮುಂದುವರೆದರೆ ಇತ್ತ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಪ್ರತಾಪ ಎದುರಗೊಳ್ಳುವ ಸಾದ್ಯತೆಗಳಿವೆ. ಇದು ತಳ್ಳಿಹಾಕುವಂತಿಲ್ಲ. ಆಲಮಟ್ಟಿ ಜಲಾಶಯ ಭತಿ೯ಯಡೆಗೆ ಸಾಗುತ್ತಿದ್ದು ಒಳ ಹರಿವು ಅಧಿಕವಾದಂತೆ ಹೊರ ಹರಿವು ಪ್ರಮಾಣ ಹೆಚ್ಚಾಗಲ್ಲಿದೆ. ನದಿ ತೀರದ ಜನ ಯಾವುದಕ್ಕೂ ನಿರ್ಲಕ್ಷ್ಯ ತೋರಿದೆ ಜಾಗೃತೆಯಿಂದ ಸುರಕ್ಷಿತವಾಗಿರಲು ಆಲಟ್೯ವಾಗಿರುವುದು ಅತ್ಯಗತ್ಯ.