20 ಸಾವಿರ ಯುವಕ-ಯುವತಿಯರಿಗೆ ಸಮವಸ್ತ್ರ ವಿತರಣೆ- ಆಲಮಟ್ಟಿಯಲ್ಲಿ ಶಾಸಕ ನಡಹಳ್ಳಿ ಚಾಲನೆ
ಉತ್ತರಪ್ರಭ
ಆಲಮಟ್ಟಿ:
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಗಸ್ಟ್ 5 ರಿಂದ 12 ರವರೆಗೆ ಆಲಮಟ್ಟಿಯಿಂದ ತಾಳಿಕೋಟಿಯವರೆಗೆ ಸದೃಢ, ಸಶಕ್ತ ಭಾರತಕ್ಕಾಗಿ ನಡೆಯಲಿರುವ 75 ಕೀ.ಮೀ ಯುವಜನ ಸಂಕಲ್ಪ ನಡಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸುಮಾರು 20 ಸಾವಿರ ಯುವಕ,ಯುವತಿರಿಗೆ ಸಮವಸ್ತ್ರ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ದೇಶದ 75 ನೇ ಸ್ವಾತಂತ್ರೋತ್ಸವ ಈ ಬಾರಿ ಅಮೃತ ಮಹೋತ್ಸವನ್ನಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತ ಮಾತೆಯನ್ನು ಆಂಗ್ಲರ ಕಪಿಮುಷ್ಟಿಯ ಗುಲಾಮಗಿರಿಯಿಂದ ಮುಕ್ತಿ ಮಾಡುವಲ್ಲಿ ಅನೇಕ ಮಹನೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮಿಕಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇಡೀ ತಮ್ಮ ಕುಟುಂಬ, ಸಂಸಾರ ಬಲಿದಾನ ಗೈದಿದ್ದಾರೆ. ಬ್ರಿಟಿಷ್ ರ ಗುಂಡಿಗೆ ರಕ್ತ ಚೆಲ್ಲಿದ್ದಾರೆ. ಪ್ರಾಣ ತೆತ್ತಿದ್ದಾರೆ. ಸುಮಾರು ವರ್ಷಗಳ ನಿರಂತರ ಹೋರಾಟ,ಕಾದಾಟದ ಬಳಿಕ ನಮಗೆ ಸ್ವಾತಂತ್ರ್ಯ ದೊರೆತಿದೆ. ಆ ಪರಿಣಾಮ ನಾವೆಲ್ಲರೂ ಇಂದು ಸ್ವಾತಂತ್ರ್ಯದ ಸವಿಘಳಿಗೆ ಅನುಭವಿಸುತ್ತಿದ್ದೆವೆ. ನಿಜಕ್ಕೂ ನಾವು ಪುಣ್ಯವಂತರು. ಸ್ವಾತಂತ್ರ್ಯಗೋಸ್ಕರ ಪೂರ್ವಜರು ತ್ಯಾಗ ಬಲಿದಾನ ಗೈದಿದ್ದು ಅಂಥ ಮಹಾ ಪುರುಷರನ್ನು 75 ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವದ ಸವಿ ಸಂದರ್ಭದಲ್ಲಿ ಮನಸ್ಸಾರೆ ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ಭವಿಷ್ಯತ್ತಿನ ನಾಗರಿಕರು ಇಂದಿನ ಯುವ ಪೀಳಿಗೆ. ಮುಂದಿನ 20-30 ವರ್ಷಗಳ ಕಾಲ ದೇಶವನ್ನು ಸುಭದ್ರ, ಸದೃಢವಾಗಿ ಹೆಜ್ಜೆಯಿರಿಸಿ ಮುನ್ನಡೆಸುವ ಗುರುತರ ಹೊಣೆಗಾರಿಕೆ ಯುವಜನಾಂಗದ ಮೇಲಿದೆ. ದೇಶಕ್ಕಾಗಿ ದೇಹ ತೇಜಿಸಿ ಸರ್ವಸ್ವವನ್ನೂ ಕಳೆದುಕೊಂಡು ಹುತಾತ್ಮರಾಗಿರುವ ಮಹಾನುಭಾವರನ್ನು ಸ್ಮರಿಸಿ ಗೌರವಿಸುವ ಸುಯೋಗ ಒದಗಿದೆ ಬಂದಿದೆ. ದೇಹದ ರಕ್ಷಣೆ, ಬೆಳವಣಿಗೆಕ್ಕಿಂತಲೂ ದೇಶದ ರಕ್ಷಣೆ ನಮ್ಮ ಮೊದಲ ಅದ್ಯತೆವಾಗಬೇಕು. ದೇಶ ಸುರಕ್ಷಿತ ಇದ್ದರೆ ಎಲ್ಲವೂ ಸುರಕ್ಷಿತ. ದೇಶವೇ ನಮಗೆ ಸರ್ವಸ್ವ. ಆ ನಿಟ್ಟಿನಲ್ಲಿ ಯುವ ಜನತೆ ದೇಶ ರಕ್ಷಣೆ ಮುಂದಾಗಬೇಕೆಂದರು.
ಹಡೇ೯ಕರ ಮಂಜಪ್ಪ ಸಮಾಧಿಯಿಂದಲೇ ನಡಿಗೆ ಯಾತ್ರೆಗೆ ಚಾಲನೆ ಈ ಮಹೋನ್ನತ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಆಯೋಜಿಸಿರುವ ಯುವಜನ ಸಂಕಲ್ಪ ನಡಿಗೆ ಯಾತ್ರೆಗೆ ಇಲ್ಲಿ ಅಗಸ್ಟ್ 5 ರಂದು ಮುಂಜಾನೆ ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಸಮಾಧಿ ಸ್ಥಳಲ್ಲಿರುವ ಸ್ಮಾರಕ ಭವನದಲ್ಲಿ ಅನೇಕ ಗುರು ಹಿರಿಯರ,ಅಪಾರ ಯುವಜನತೆಯ ಸಮ್ಮುಖದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ನಡಹಳ್ಳಿ ತಿಳಿಸಿದರು.
‌‌ ಇಲ್ಲಿನ ಯುವಜನತೆಯ ಪಾಲಕ, ಪೋಷಕರು ಅಂದು ಒಂದು ದಿನ ತಮ್ಮ ಸಂಸಾರದ ಗುಂಗಿನಿಂದ ಹೊರಬಂದು ಈ ಸಂಕಲ್ಪ ನಡಿಗೆ ಯಾತ್ರೆ ಪ್ರಾರಂಭೋತ್ಸವದಲ್ಲಿ ಪಾಲ್ಳೋಳಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಜೀವಗಳನ್ನು ನೆನಪಿಸಿಕೊಳ್ಳೊಣ. ತಪ್ಪದೇ ಭಾಗವಹಿಸಿ. ತಂದೆ,ತಾಯಿ ಬಳಗಕ್ಕೆ ತ್ರಿವರ್ಣ ಧ್ವಜವನ್ನು ನೀಡಿ ಸಂಕಲ್ಪ ನಡಿಗೆ ಯಾತ್ರೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದರು.
ಹಡೇ೯ಕರ ಸ್ಮಾರಕ ಭವನದಿಂದ ಹೊರಡುವ ಮೊದಲ ದಿನದ ನಡಿಗೆ ಯಾತ್ರೆಯಲ್ಲಿ ಎಂ.ಎಚ್.ಎಂ.ಶಾಲೆ ಬಳಿಯ ರಸ್ತೆವರೆಗೆ ಮಾತ್ರ ಶಾಲಾ ಮಕ್ಕಳು ಭಾಗವಹಿಸಬಹುದು. ನಿಡಗುಂದಿ ವರೆಗಿನ ಐದಾರು ಕೀ.ಮೀ ನಡಿಗೆಯಲ್ಲಿ ಹೆಸರು ನೋಂದಾಯಿಸಿರುವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು. ನಡಿಗೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವರು ಮೊದಲು ಆನ್ ಲೈನ್ ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಿ. ಈ ಬಗ್ಗೆ ಯಾರಿಗೂ ಒತ್ತಾಯ ಇಲ್ಲ. ಸ್ವಯಂ ಪ್ರೇರಿತರಾಗಿ ಮಾಡಿಕೊಳ್ಳಬೇಕು. ಇದು ಕಡ್ಡಾಯವೆನ್ನಲ್ಲ, ಹೈಸ್ಕೂಲ್ ಮಕ್ಕಳಿಗೆ ಅವಕಾಶ ಇಲ್ಲ. ಸ್ಮಾರಕ ದಿಂದ ದ್ವಾರ ಭಾಗಿಲಿನವರೆಗೆ ಮಾತ್ರ ಅವರು ಭಾಗವಹಿಸಬಹುದು ಅಷ್ಟೇ ಎಂದು ಶಾಸಕ ನಡಹಳ್ಳಿ ಸ್ಪಷ್ಟಪಡಿಸಿದರು.
ಹಡೇ೯ಕರ ಶ್ರೇಷ್ಠ ಚಿಂತಕ ಕನಾ೯ಟಕ ಗಾಂಧಿ ಬಿರುದು ಮಂಜಪ್ಪನವರಿಗೆ ಅಷ್ಟೊಂದು ಸುಲಭವಾಗಿ ಲಭಿಸಿಲ್ಲ. ಅವರ ಸರಳ ಜೀವನ, ಸತ್ಯದ ಆಚರಣೆಗೆ ಇದು ಸಂದ ಗೌರವಾಗಿದೆ. ಒಂದು ಬಾರಿ ಮಂಜಪ್ಪನವರು ಮಹಾತ್ಮಾ ಗಾಂಧಿಯವರನ್ನು ಭೇಟಿವಾದಾಗ ಮಂಜಪ್ಪ ಗಾಂಧೀಜಿಯವರಿಗೆ ನಿಮ್ಮ ಧರ್ಮ ಯಾವುದು ಅಂತ ಪ್ರಶ್ನಿಸುತ್ತಾರೆ. ಅಗ ಗಾಂಧೀಜಿಯವರು ನನ್ನ ಧರ್ಮ ಸತ್ಯ ಅಂತಾರೆ. ಇದನ್ನು ಕೇಳಿ ಮಂಜಪ್ಪನವರು ಸುಮ್ಮನಾಗುತ್ತಾರೆ.‌ ಆದರೆ ಗಾಂಧೀಜಿಯವರು ಸುಮ್ಮನಾಗುವುದಿಲ್ಲ. ಮಂಜಪ್ಪನವರಿಗೆ ತಮ್ಮ ಧರ್ಮ ಯಾವುದು ಎಂದು ಕೇಳಿದಾಗ ನನ್ನ ಧರ್ಮ ಸತ್ಯ ಆಚರಣೆ ಧರ್ಮ ಎನ್ನುತಾರೆ. ಅದಕ್ಕಾಗಿ ಮಂಜಪ್ಪನವರು ಧರ್ಮದೃಷ್ಟಾರರಾಗಿ ಕನಾ೯ಟಕದ ಗಾಂಧಿಯಾಗಿದ್ದಾರೆ. ಸತ್ಯವನ್ನು ಮಾಡಬಹುದು ಆದರೆ ಸತ್ಯ ಆಚರಣೆ ಬಲು ಕಷ್ಟ. ಈ ಮಣ್ಣಿನ ಸ್ವಾಭಿಮಾನದ ಬದುಕಿನಲ್ಲಿ ಜೀವಿಸಿರುವ ಮಹಾನ ನಾಯಕ ಹಡೇ೯ಕರ ಮಂಜಪ್ಪನವರ ಸಮಾಧಿ ಒಳಗೊಂಡಿರುವ ಸ್ಮಾರಕ ಭವನದ ಕರ್ಮಭೂಮಿಯಿಂದಲೇ ಈ ಯುವಜನತೆ ಸಂಕಲ್ಪ ನಡಿಗೆ ಯಾತ್ರೆ ಸಾಗುತ್ತಿರುವುದು ತುಂಬಾ ಔಚಿತ್ಯಪೂರ್ಣವಾಗಿದೆ ಎಂದರು.
ಗುಣಮಟ್ಟದ ವಿಶೇಷ ವಸ್ತ್ರಗಳ ವಿತರಣೆ ನಡಿಗೆ ಯಾತ್ರೆಯಲ್ಲಿ ಹೆಸರು ನೋಂದಾಯಿಸಿಕೊಂಡು ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ, ಶಾಲಾ, ಕಾಲೇಜು ಶಿಕ್ಷಕ, ಗುರುಮಾತೆಯರಿಗೆಲ್ಲ ಗುಣಮಟ್ಟದ ಸಮವಸ್ತ್ರಉಚಿತವಾಗಿ ನೀಡಲಾಗುತ್ತಿದೆ. ಪ್ರತಿದಿನ ಉಪಹಾರ ಪಾಕೇಟ್, ನೀರಿನ ಬಾಟಲ್ ಸೇರಿದಂತೆ ‌ಊಟೋಪಚಾರ, ಆರೋಗ್ಯೋಪಚಾರ 8 ದಿನಗಳವರೆಗೆಯಾತ್ರೆ ಉಗ್ದಕ್ಕೂ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದರು.
ವಿಶೇಷ ವಿನ್ಯಾಸ ತಯಾರಿಕೆಯಲ್ಲಿನ ಶುಭ್ರ ಬಿಳಿ ಕಾಟನ್ ನೆಹರು ಶಟ್೯ ಮತ್ತು ಪೈಜಮ್ ವಸ್ತ್ರಗಳನ್ನು ಯುವಕರಿಗೆ ಹಾಗು ದೇಶದ ಸಂಸ್ಕೃತಿಯ ಸಂಕೇತ ವಾಗಿರುವ ನವ ನಾವೀನ್ಯ ಡಿಸೈನ್ ಶೈಲಿಯ ಸಾರಿಗಳನ್ನು ಹೆಣ್ಣು ಮಕ್ಕಳಿಗೆ ವಿತರಿಸಲಾಗುತ್ತಿದೆ. ತಲೆ ಮೇಲೆ ತ್ರಿವರ್ಣ ಧ್ವಜದ ಪೇಟಾ ವಿಶೇಷವಾಗಿ ತಯಾರು ಮಾಡಲಾಗಿದೆ. 8 ದಿನದ ಸಂಕಲ್ಪ ನಡಿಗೆ ಯಾತ್ರೆಯಲ್ಲಿ ವರ್ಣಮಯ ಉಡುಪು ಧರಿಸಿ ಶಿಸ್ತಿನಿಂದ ಯುವಜನಾಂಗ ನಡಿಗೆಯ ಹೆಜ್ಜೆ ಗುರುತುಗಳನ್ನು ಮೊಳಗಿಸಲ್ಲಿದ್ದಾರೆ. ಒಟ್ಟಿಗೆ ಯಾತ್ರೆ ಅರ್ಥಪೂರ್ಣವಾಗಿ ನಡೆಯಲಿದೆ ಎಂದರು.
ಮಂಜಪ್ಪನವರ ಸ್ಮಾರಕ ಬಳಿ 5 ರಂದು ಎಲ್ಲರೂ ಸೇರಿ. ಅಲ್ಲಿಂದ ಈ ಚಾರಿತ್ರಿಕ ಪಕ್ಷಾತೀತ ಯಾತ್ರೆಯು ವೈಭವದ ಕಹಳೆಯೊಂದಿಗೆ ಹೊರಡಲಿದೆ. ಬನ್ನಿ ಕೈಜೋಡಿಸಿ.ಬದುಕಿನಲ್ಲಿ ಶರಣ ಮಂಜಪ್ಪನವರಂತೆ ಸತ್ಯ ಆಚರಣೆಗೆ ತಾವೆಲ್ಲರೂ ಮಹತ್ವ ನೀಡಿ ಮುಂದಾಗಿ ಎಂದು ಶಾಸಕ ನಡಹಳ್ಳಿ ಮನವಿ ಮಾಡಿದರು.
ಯುವ ಉದ್ಯಮಿ ಶಾಸಕರ ಪುತ್ರ ಭರತಗೌಡ ಪಾಟೀಲ ಅವರ ನೇತೃತ್ವದಲ್ಲಿ ಹಾಗು ಮುದ್ದೇಬಿಹಾಳ, ನಿಡಗುಂದಿ, ತಾಳಿಕೋಟೆ ತಾಲೂಕು ಆಡಳಿತದ ಸಹಯೋಗದೊಂದಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಈ ಸಂಕಲ್ಪ ನಡಿಗೆ ಯಾತ್ರಾ ಸಂಘಟಿಸಿದ್ದಾರೆ. ಸ್ವಾಭಿಮಾನದೊಂದಿಗೆ ಯಾತ್ರೆಗೆ ಪ್ರೇರಪಿಸಿ ದೇಶಾಭಿಮಾನ ಬಿಂಬಿಸಿ ಎಂದು ಸಂಚಾಲಕ, ಪ್ರಾಚಾರ್ಯರ ಎಂ.ಸಿ.ಗೌಡರ ಹೇಳಿದರು. ಪತ್ರಕರ್ತ ಡಿ.ಬಿ. ವಡವಡಗಿ, ಶಿವನಗೌಡ ತಾಳಿಕೋಟಿ, ನಿವೃತ್ತ ಸೇನಾಧಿಕಾರಿ ನಾರಾಯಣ ಸಾಳುಂಕೆ, ಚಂದ್ರಶೇಖರ ಅಬ್ಬಿಹಾಳ, ಬಿ.ಎ.ಅಕ್ಕಲಕೋಟೆ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಪಿ.ವೈ.ಧನಶೆಟ್ಟಿ, ಎಂ.ಎಸ್.ಸಜ್ಜನ, ಟಿ.ಬಿ.ಕರದಾನಿ, ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ, ಎಂ.ಎನ್.ಕರೆಮುರಗಿ, ಸುನೇರಾಬೇಗಂ, ಶಾಂತೂ ತಡಸಿ, ಟಿ.ಡಿ.ಸಿಂಗಾರಿ ಇತರರಿದ್ದರು.
ಶಾಸಕರನ್ನು ಎಂ.ಎಚ್.ಎಂ. ಕಾಲೇಜು,ಸಂಸ್ಥೆ ಪರವಾಗಿ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಶಾಲು ಹೊದಿಸಿ ಸನ್ಮಾನಿಸಿದರು.

Leave a Reply

Your email address will not be published. Required fields are marked *

You May Also Like

9 ರಂದು ಬಸವನಾಡಿನ ಕೃಷ್ಣೆಯ ತಟದಲ್ಲಿ ಶಿಕ್ಷಣ ತಜ್ಞ ಶಿವಾನಂದ ಪಟ್ಟಣಶೆಟ್ಚರ ಸಭಾ ವೇದಿಕೆ ಉದ್ಘಾಟನೆ

ಬರಹ : ಗುಲಾಬಚಂದ ಆರ್.ಜಾಧವ. ಆಲಮಟ್ಟಿ ಆಲಮಟ್ಟಿ : ಇಲ್ಲಿನ ಗುರು ಬಳಗದ ಅಭಿಲಾಷೆಯಂತೆ ಶಿಕ್ಷಣ…

ಅರಣ್ಯ ಹುತಾತ್ಮರ ದಿನಾಚರಣೆ”ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿಗಳ ಪಾತ್ರ ಮಹತ್ವದ್ದು”

ಉತ್ತರಪ್ರಭ ಸುದ್ದಿಆಲಮಟ್ಟಿ: ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ಸಂರಕ್ಷಣೆಯ ಜತೆಗೆ ಅರಣ್ಯ ಬೆಳೆಸುವಲ್ಲಿಯೂ ಮಹತ್ವದ ಪಾತ್ರ…

ಜಿಟಿಟಿಸಿ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ವರ್ಲ್ಡ್ ಸ್ಕಿಲ್ ಕಾಂಪಿಟೆಶನ್ ಗೆ ಆಯ್ಕೆ

ಧಾರವಾಡ: ರಾಯಪುರ್ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಜಿಟಿಟಿಸಿ ಸಂಸ್ಥೆ ಇಬ್ಬರು ವಿದ್ಯಾರ್ಥಿಗಳು ವರ್ಲ್ಡ್ ಸ್ಕಿಲ್ ಕಂಪೇಟೇಷನಲ್ಲಿ…

ನೀಟ್ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಇಲ್ಲ ಸ್ಥಾನ!

ನವದೆಹಲಿ : ವೈದ್ಯಕೀಯ ಪ್ರವೇಶ ಪರೀಕ್ಷೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ನೀಟ್‌ ನಲ್ಲಿ 720ಕ್ಕೆ 720 ಅಂಕಗಳನ್ನು ಗಳಿಸಿದ ಒಡಿಶಾದ ಸೋಯೆಬ್ ಅಫ್ತಾಬ್ ಅವರೊಂದಿಗೆ ದೆಹಲಿಯ ಆಕಾಂಕ್ಷ ಸಿಂಗ್ ಸಹ ಅಷ್ಟೇ ಅಂಕ ಗಳಿಸಿದ್ದರೂ ಟಾಪರ್ ಸ್ಥಾನದಿಂದ ಹಿಂದೆ ಸರಿದಿದ್ದಾರೆ.