ಉತ್ತರಪ್ರಭ ಸುದ್ದಿ
ಗದಗ: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗದಗ ಮತ್ತು ಮುಂಡರಗಿ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2022-23 ನೇ ಸಾಲಿಗೆ 6 ನೇ ತರಗತಿ ಒಟ್ಟು 170 ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ 75% ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಾಗೂ 25% ರಷ್ಟು ಇತರೇ ವರ್ಗದವರಿಗೆ ವಿತರಿಸಲಾಗುವುದು. ಅಂಗವಿಕಲ ವಿದ್ಯಾರ್ಥಿಗಳು, ವಿಶೇಷ ಗುಂಪಿಗೆ ಸೇರಿದ ಅಂದರೆ ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು ಇತ್ಯಾದಿಗಳಿಗೆ 3% ರಷ್ಟು ಆಸನಗಳನ್ನು ಕಾಯ್ದಿರಿಸಲಾಗಿದೆ.


6ನೇ ತರಗತಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು 5 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಬಾರದು, ಅರ್ಜಿಗಳನ್ನು ದಿ: 23-04-2022 ರೊಳಗಾಗಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣಇಲಾಖೆ, ಗದಗ ದೂರವಾಣಿ ಸಂಖ್ಯೆ 08372-297494 ಸಂಪರ್ಕಿಸಬಹುದಾಗಿದೆ.

ಜಾಹಿರಾತು
Leave a Reply

Your email address will not be published. Required fields are marked *

You May Also Like

ನೂತನ 52 ತಾಲೂಕುಗಳಲ್ಲಿ ಬಿಇಒ ಕಚೇರಿ ಮರೀಚಿಕೆ ? ಆರಂಭದ ಸುಳಿವೇ ಇಲ್ಲ ! ಪ್ರಾರಂಭ ಎಂದು ? ಬಿಇಒ ಕಚೇರಿ, ಸಿಬ್ಬಂದಿ ಮಂಜೂರಾತಿಗೆ ಆಗ್ರಹ

ಆಲಮಟ್ಟಿ : ಹೊಸ ಭರವಸೆಯ ಆಶಾ ಕಿರಣದೊಂದಿಗೆ ನೂತನವಾಗಿ ತೆಲೆಯತ್ತಿದ್ದ ರಾಜ್ಯದ 52 ನವ ತಾಲೂಕುಗಳು…

ಶಾಲೆಗಳಿಗೆ ತಹಶಿಲ್ದಾರ ಸತೀಶ್ ಕೂಡಲಗಿ ಭೇಟಿ- ಕಾನೂನು ಸುವ್ಯವಸ್ಥೆ ಪರಿಶೀಲನೆ ಖುಷಿಯಿಂದ ಶಾಲೆಗೆ ಮರಳಿದ ಮಕ್ಕಳು

ಚಿತ್ರ ವರದಿ : ಗುಲಾಬಚಂದ ಜಾಧವಆಲಮಟ್ಟಿ : ಹಿಜಾಬ್- ಕೇಸರಿ ಜಟಾಪಟಿ ವಿವಾದದಿಂದ ಆತಂಕ ಸೃಷ್ಟಿಯಾಗಿ…

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗಾಗಿ ಜಾತಕಪಕ್ಷಿಯಂತೆ ನಿರೀಕ್ಷೆ- ಬಸವರಾಜೇಶ್ವರಿ ಶೀಲವಂತ ನೇಮಕಾತಿ ಪ್ರಕ್ರಿಯೆ ಕೂಡಲೇ ಆರಂಭಿಸಲು ಸಕಾ೯ರಕ್ಕೆ ಆಗ್ರಹ

ಉತ್ತರಪ್ರಭ ಸುದ್ದಿನಿಡಗುಂದಿ: ರಾಜ್ಯದ ಪ್ರತಿಯೊಂದು ಶಾಲಾ, ಪ,ಪೂ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಪಠ್ಯದ ಸವಿರುಚಿ ಮಕ್ಕಳು…