ರೋಣ: ಸಾಹಿತ್ಯ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯು ನಡೆಯಿತು. ಈ ಸಭೆಯು ಶ್ರೀ ಬಸವಂತಪ್ಪ ಹೆಚ್. ತಳವಾರ ರೋಣ ತಾಲೂಕ ನಾಯಕ ಸಂಘದ ಅಧ್ಯಕ್ಷರು ಇವರು ರೋಣ ತಾಲೂಕಿನ ಹಳ್ಳಿಗಳ ಜಾತ್ರೆಯ ಪೋಸ್ಟರ ದೇಣಿಗೆ ಪುಸ್ತಕ ಉದ್ಘಾಟಿಸಿ ಮಾತನಾಡಿದರು. ಶ್ರೀ ವಾಲ್ಮೀಕಿ ಜಾತ್ರೆಯ ದೇಣಿಗೆ ಪುಸ್ತಕ ಹಾಗೂ ಪೋಷ್ಟರ್‍ಗಳನ್ನು ಎಲ್ಲಾ ಹಳ್ಳಿಗೆ ಮುಟ್ಟಿಸಿ ದೇಣಿಗೆ ಸಂಗ್ರಹ ಮಾಡಿಕೊಡಬೇಕೆಂದು ವಾಲ್ಮೀಕಿ ಜನಾಂಗದವರಿಗೆ ಕರೆ ನೀಡಿದರು.

ರೋಣ ತಾಲೂಕಿನ ಹಳ್ಳಿಗಳ ಜಾತ್ರೆಯ ಪೋಸ್ಟರ ದೇಣಿಗೆ ಪುಸ್ತಕ ಉದ್ಘಾಟನೆ

ಶ್ರೀ ಪ್ರಸನ್ನಂದಾ ಮಹಾಸ್ವಾಮಿಗಳು ಅಪ್ಪಣೆ ಮೇರೆಗೆ ಎಲ್ಲಾ ಕೆಲಸಗಳನ್ನು ನಿಂತು ಮಾಡಿಕೊಡುವೆ ಎಂದು ಭರವಸೆ ನೀಡಿದರು. ಎಂತಾ ಕಷ್ಟ ಬಂದರು ವಾಲ್ಮೀಕಿ ಜನಾಂಗದವರಿಗೆ ಏಳಿಗೆಗಾಗಿ ಶ್ರಮಪಟ್ಟು ದುಡಿಯುತ್ತಿವೆ ಎಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಯಾವ ರೀತಿ ಗ್ರಾಮದ ವಾಲ್ಮೀಕಿ ಜನಾಂಗದವರಿಗೆ 5 ಜನ ಕಮೀಟಿ ಮಾಡಿ ದೇಣಿಗೆ ಪುಸ್ತಕವನ್ನು ಚಾಲನೆ ನೀಡಿದರು. ಈ ಸಭೆಯಲ್ಲಿ ಉಮೇಶ ಗೌಡರ, ಜಾತ್ರಾ ಸಮಿತಿ ಅಧ್ಯಕ್ಷರು ಮಾತನಾಡಿ ಎಲ್ ಹಳ್ಳಿಗಳಿಗೆ ಹೋಗಿ ದೇಣಿಗೆ ಪುಸ್ತಕವನ್ನು ಕೊಟ್ಟು ಶ್ರಮಿಸಿವೆ ಎಂದು ಅವರು ಮಾತನಾಡಿದರು.


ಈ ಸಂದರ್ಭದಲ್ಲಿ ಬಸವರಾಜ ತಳವಾರ ಉಪಾಧ್ಯಕ್ಷರು, ಶಿವಕುಮಾರ ತಳವಾರ, ಸಂತೋಷ ಕಡಿವಾಲ, ಹನಮಪ್ಪ ತಳವಾರ, ಪಿ. ಪಿ. ಜಿಗಳೂರ, ನಾಗಪ್ಪ ತಳವಾರ, ಬಾಳಪ್ಪ ತಳವಾರ, ರಾಜು ಅಮರಗೋಳ, ಗೋವಿಂದ ಜುಮ್ಮನವರ, ಯಲ್ಲಪ್ಪ ಕೋಡಿ, ಮುಂತಾದವರು ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *

You May Also Like

ಇನ್ಮುಂದೆ ಸಂಡೇ ಕರ್ಫ್ಯೂ ಇಲ್ಲ

ಬೆಂಗಳೂರು:ನಾಳೆ ದಿನಾಂಕ 31.05.2020 ಭಾನುವಾರದಂದು ಕಂಪ್ಲೀಟ್‌ ಲಾಕ್ ಡೌನ್ ಇರುವುದಿಲ್ಲ. ಆದ್ದರಿಂದ ದೈನಂದಿನ ಚಟುವಟಿಕೆಗಳು ಎಂದಿನಂತೆ…

ಬಹುಭಾಷೆ ಸಿನಿಮಾದಲ್ಲಿ ಅನ್ಯಗ್ರಹ ಜೀವಿಯ ಪಾತ್ರದಲ್ಲಿ ಸಂದೇಶ್!

ಚಿತ್ರರಂಗದ ಕನಸು ಹೊತ್ತ ಯುವ ನಿರ್ದೇಶಕ ಸಂದೇಶ್ ಇದೀಗ ತನ್ನ ಕನಸಿನ ಬಹುಭಾಷಾ ಸಿನಿಮಾದ ತಯಾರಿಯಲ್ಲಿದ್ದಾರೆ.

ಚಿಲಝರಿ ಗ್ರಾಮದಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳಿಸಿ ಮಾನವೀಯ ಮೌಲ್ಯಗಳು ವೃದ್ದಿಸುತ್ತವೆ ಈ ನಿಟ್ಟಿನಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಿ ಸ್ವಾಸ್ಥ್ಯೇಯ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದು ಅಕ್ಕನ ಬಳಗ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.