ಬೆಂಗಳೂರು: ರಾಜ್ಯರಾಜಕಾರಣದಲ್ಲಿ ಎಲ್ಲರೂ ಬೆಚ್ಚಿಬಿಳಿಸುವ ವಿಡಿಯೊಂದು ಹರಿದಾಡುತ್ತಿದ್ದು , ಕುಳ್ಳ ದೇವರಾಜ ಮತ್ತು ಗೋಪಾಲಕೃಷ್ಣ ಅವರ ಸಂಭಾಷಣೆಯಲ್ಲಿ ಕೋಲೆಗೆ ಸಂಚು ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಅವರ ಸಂಭಾಷಣೆಯಲ್ಲಿ ಹೈದರಾಬಾದನಿಂದ ಶಾರ್ಪ ಶೂಟರಗಳನ್ನು ಕರೆಸಿ ಎಷ್ಟೆ ದುಡ್ಡಾದರೂ ಸರಿ ಅವರ ಹತ್ಯೆಯನ್ನು ಮಾಡಬೇಕು ಎಂಬ ಸಂಭಾಷಣೆ ಇಡೀ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದರ ಸತ್ಯಾಸತ್ಯತೆಯನ್ನು ಗೃಹ ಇಲಾಖೆಯ ತನಿಖೆಯಿಂದ ಮಾತ್ರ ಗೋತ್ತಾಗುತ್ತದೆ. ಶಾರ್ಪ ಶೂಟರ್ಗಳಿಂದ ಬಿಜೆಪಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ ಹತ್ಯೆಗೆ ಸಂಚು ರಾಜ್ಯದ ಜನರ ನಿದ್ದೆಗೆಡಿಸಿದೆ ಅದರಲ್ಲೂ ಇಂದಿನ ರಾಜಕಾರಣ ಮತ್ತು ರಾಜಕೀಯ ಧ್ವೇಷ ಈ ಮಟ್ಟಕ್ಕೆ ಬಂತಾ ಅನ್ನೋ ಅನುಮಾನ ಹುಟ್ಟುಹಾಕಿದಂತೂ ನೀಜ.