ಬೆಂಗಳೂರು:ನಾಳೆ ದಿನಾಂಕ 31.05.2020 ಭಾನುವಾರದಂದು ಕಂಪ್ಲೀಟ್‌ ಲಾಕ್ ಡೌನ್ ಇರುವುದಿಲ್ಲ. ಆದ್ದರಿಂದ ದೈನಂದಿನ ಚಟುವಟಿಕೆಗಳು ಎಂದಿನಂತೆ ಇರುತ್ತವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಈ ಕುರಿತು ಅಧಿಕೃತ ಆದೇಶ ಸರ್ಕಾರದಿಂದ ಹೊರಬಿದ್ದಿದೆ. ಇದರಿಂದ ವಿಕೇಂಡ್ ನಲ್ಲಿ ಮನೆಯಲ್ಲೆ ಇರಬೇಕಾ ಎಂದು ಗೊಣಗಿಕೊಂಡವರಿಗೆ ಸರ್ಕಾರದ ಈ ನಿರ್ಧಾರ ಕೊಂಚ ರಿಲ್ಯಾಕ್ಸ್ ಮೂಡಿಸಿದೆ.
ಲಾಕ್‌ಡೌನ್‌ 4.0 ದಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರದಂದು ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಲಾಕ್‌ಡೌನ್‌ 4.0 ದಲ್ಲಿ ಭಾನುವಾರ ಮಾತ್ರ ಲಾಕ್ಡೌನ್‌ 1 ಮತ್ತು 2 ರ ನಿಯಮಗಳನ್ನು ಹೇರಲಾಗಿತ್ತು. ಅದರಂತೆ ಅಗತ್ಯ ವಸ್ತುಗಳ ಹೊರತುಪಡಿಸಿ ಉಳಿದ ಇನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸಲಾಗಿತ್ತು. ಆದರೆ ಇದೀಗ ಬೇರೆ ದಿನಗಳಲ್ಲಿ ಇರುವಂತೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಇರುವ ನಿಬಂಧನೆಗಳೇ ಭಾನುವಾರಕ್ಕೂ ಅನ್ವಯವಾಗಲಿದೆ.

Leave a Reply

Your email address will not be published. Required fields are marked *

You May Also Like

ಆಸ್ತಿ ತೆರಿಗೆ ಪರಿಷ್ಕರಣೆ ಮಸೂದೆ ; ವಿಧಾನ ಪರಿಷತ್ ಒಪ್ಪಿಗೆ

ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ತಿದ್ಧುಪಡಿ ಮಸೂದೆಗಳಿಗೆ ವಿಧಾನ ಪರಿಷತ್ ಸೋಮವಾರ ಒಪ್ಪಿಗೆ ನೀಡಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ಮಸೂದೆ 2021 ಅನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಂಡಿಸಿದರು.

ರಾಜ್ಯದಲ್ಲಿ ಹೆಚ್ಚುತ್ತಿದೆ ಶೀತ ಜ್ವರ ಸೋಂಕಿತರ ಸಂಖ್ಯೆ: ಗದಗ,ಕೊಪ್ಪಳ,ಧಾರವಾಡ ಸೇರಿ ಹಲವು ಜಿಲ್ಲೆಯಲ್ಲೂ ಸಮೀಕ್ಷೆ..!

ಬೆಂಗಳೂರು : ರಾಜ್ಯದಲ್ಲಿ ಶೀತ ಜ್ವರ ಸೋಂಕಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವ…

ಶಿಗ್ಲಿಯಲ್ಲಿ ಇನ್ನೂ ಹೋಗಿಲ್ಲ ಕೊರೋನಾ, ಎಚ್ಚರಿಕೆಯಿಂದ ಇರೋಣಾ ಜಾಗೃತಿ

ಶಿಗ್ಲಿ ಗ್ರಾಮದಲ್ಲಿ ಇನ್ನೂ ಹೋಗಿಲ್ಲ ಕರೋನಾ ನಾವು ಎಚ್ಚರ ಇರೋಣ ಎಂಬ ನಾನ್ನುಡಿಯನ್ನು ಹೇಳುತ್ತಾ ಕೊರೊನಾ ಜಾಗೃತಿ ಕಾರ್ಯಕ್ರಮ.

ದೇಶವೇ ಕೋವಿಡ್ ನಿಂದ ಬಳಲುತ್ತಿರುವಾಗ ಪ್ರಧಾನಿ ಮೋದಿ ಬೇಜವಾಬ್ದಾರಿ ಹೇಳಿಕೆ ನಿಡುವುದು ಎಷ್ಟರ ಮಟ್ಟಿಗೆ ಸರಿ

ಕೊರೋನಾ ವಿಪತ್ತಿನಿಂದ ಭಾರತ ರಕ್ಷಿಸಿ ಬಿಟ್ಟಿತು ಎಂಬ ಹೇಳಿಕೆಗಳನ್ನು ಪ್ರಧಾನಿ ನರೇಂದ್ರ ಮೊದಿ ಅವರು ಹೇಳಿತ್ತಿರುವುದು ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದಯಾಮಯ್ಯ ತಮ್ಮ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.