ಬೆಂಗಳೂರು : ಚಿತ್ರರಂಗದ ಕನಸು ಹೊತ್ತ ಯುವ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಇದೀಗ ತನ್ನ ಕನಸಿನ ಬಹುಭಾಷಾ ಸಿನಿಮಾದ ತಯಾರಿಯಲ್ಲಿದ್ದಾರೆ.
2018ರಲ್ಲಿ ಕತ್ತಲೆ ಕೋಣೆ ಎನ್ನುವ ಸಿನಿಮಾದ ಮೂಲಕ ನಿರ್ದೇಶಕ ಹಾಗೂ ನಾಯಕ ನಟನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಸಂದೇಶ್ ಭಿನ್ನವಾದ ಕಥೆಯ ಹಂದರವನ್ನು ಇಟ್ಟುಕೊಂಡು ಸಿನಿಮಾ ಮಾಡುವ ಛಾಯೆ ಇವರದು. ಒಬ್ಬ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಯುವಕ ನಾಟಕ ಹಾಡುಗಾರಿಕೆ ಸಿನಿಮಾದ ಕಡೆಗೆ ಆಸಕ್ತಿ ವಹಿಸಿದರು.ಈ ಬಾರಿಯ ಇವರ ಸಿನಿಮಾದಲ್ಲಿ ಸಸ್ಪೆನ್ಸ್ ,ಸೈನ್ಸ್ ಫಿಕ್ಷನ್ ಕಥೆಯ ಸಾರಾಂಶ ಇದ್ದು ಬಾಲಿವುಡ್ ಸ್ಯಾಂಡಲ್ ವುಡ್ ಹಾಗೂ ತಮಿಳಿನ ಖ್ಯಾತ ನಾಯಕರನ್ನು ಸಿನಿಮಾದಲ್ಲಿ ತೋರಿಸಲಿದ್ದಾರೆ.

ಕ್ರಿಯಾಶೀಲತೆಗೆ ಹಾಗೂ ತಾನು ಮಾಡುವ ಕಥೆಯ ಒಳಗೆ ಹೊಕ್ಕು ಜನರಿಗೆ ಭಿನ್ನವಾದ ಸಿನಿಮಾ ನೀಡುವ ಉದ್ದೇಶ ಈ ಯುವ ನಿರ್ದೇಶಕನದ್ದು. ಈ ಬಾರಿಯ ಇವರ ಸಿನಿಮಾದಲ್ಲಿ ಸಂದೇಶ್ ಶೆಟ್ಟಿ ಅನ್ಯಗ್ರಹದ ಜೀವಿಯ ಪಾತ್ರದಲ್ಲಿ ಕಾಣಿಸಿಕೋಳ್ಳಲ್ಲಿದ್ದಾರೆ. ಕಥೆ ಚಿತ್ರಕಥೆ ಎಲ್ಲವೂ ರೆಡಿಯಾಗಿದ್ದು ಇನ್ನಷ್ಟೇ ಚಿತ್ರೀಕರಣ ಪ್ರಾರಂಭವಾಗಬೇಕಿದೆ ಮುಂದಿನ ದಿನಗಳಲ್ಲಿ ಬಾಲಿವುಡ್ನಲ್ಲಿ ಮಿಂಚಬೇಕು ಅನ್ನುವ ಕನಸು ಹೊತ್ತ ನಿರ್ದೇಶಕ ಸಂದೇಶ ರವರ ಬಾಲಿವುಡ್ ಕನಸು ನನಸಾಗಲಿ ಅನ್ನುವುದೇ ನಮ್ಮ ಹಾರೈಕೆ. ಅನ್ಯಗ್ರಹ ಜೀವಿ ಆ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಂದೇಶ ತಮ್ಮ ದೇಹವನ್ನು ಭಿನ್ನವಾಗಿ ಸಿದ್ದ ಪಡಿಸಿಕೊಳ್ಳುತ್ತಿದ್ದಾರೆ ಆಲ್ ದ ಬೆಸ್ಟ್ ಸಂದೇಶ್.