ಲಕ್ಷ್ಮೇಶ್ವರ:  ಮಹಿಳೆಯರಿಗೆ ಎಲ್ಲಾಕ್ಷೇತ್ರದಲ್ಲಿ ಸಮಾನ ಅವಕಾಶ ನೀಡಿ ಅವಳನ್ನು ಸಂಪೂರ್ಣವಾಗಿ ತೊಡಗಿಸಿದ್ದೇ ಆದರೆ ದೇಶದ ಅರ್ಥ ವ್ಯವಸ್ಥೆಯ ಜತೆಗೆ ವಿಜ್ಞಾನ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಅವಳಲ್ಲಿದೆ ಎಂದು ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ ಹೇಳಿದರು.

ಅವರು ಪಟ್ಟಣದ ಕೆಂಚಲಾಪೂರ ಓಣಿಯ ಬನಶಂಕರಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಕೃತಿಕಾಳ 4ನೇ ವರ್ಷದ ಜನ್ಮದಿನಾಚರಣೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ.

ಮಹಿಳೆಗೆ ಸಮಾನವಾದ ಅವಕಾಶ ಕೊಟ್ಟರೆ ಪುರುಷರುತಮ್ಮ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಮನೋಭಾವ ದಿಂದ ಹೆಚ್ಚಿನಅವಕಾಶವನ್ನು ಬಿಟ್ಟುಕೊಡುತ್ತಿಲ್ಲ.ಇಂತಹ ಮನೋಭಾವನೆಯನ್ನು ಇನ್ನು ಮುಂದೆ ಬದಿಗೊತ್ತಿ ಉತ್ತಮ ಅವಕಾಶಗಳನ್ನು ನೀಡಿ ಉತ್ತಮ ಸೇವೆಯನ್ನು ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಸುನೀಯಾ ಮಂಜುನಾಥ ಮಾಗಡಿ, ಜಯಶ್ರೀ ಹೊಸಮನಿ, ಪೂರ್ಣಿಮಾ ಪಾಟೀಲ್, ಜಯಲಕ್ಷ್ಮಿ ಮಹಾಂತಶೆಟ್ಟರ,ಸುನೀತಾ ಬುರಡಿ, ವಿರೇಂದ್ರ ಕುಮಾರ ಕಟಗಿ, ಪ್ರೇಮಾ ಬಡಿಗೇರ, ಲಕ್ಷ್ಮವ್ವ ನಂದೆಣ್ಣವರ, ಮAಜುನಾಥ ಮಾಗಡಿ, ನಾಗರಾಜ ಚಿಂಚಲಿ, ಸಂತೋಷ ಜಾವೂರ, ಸೇರಿದಂತೆ ಇತರರಿದ್ದರು..

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ: ಸಚಿವ ಶೆಟ್ಟರ್

ವಿಧಾನ ಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಸರ್ಕಾರ ಸುಸೂತ್ರವಾಗಿ ನಡೆಯಲು ಎರಡು ಕಡೆ ಬಹುಮತ ಅಗತ್ಯ. ಪರಿಷತ್‌ನ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಕೋವಿಡ್-19 ನಿಯಂತ್ರಣ: ಲಾಕ್ಡೌನ್‍ನಿಂದ ಕೆಲವು ಚಟುವಟಿಕೆಗಳಿಗೆ ವಿನಾಯ್ತಿ

ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿರುವ ಗದಗ ತಾಲೂಕು ಹೊರತುಪಡಿಸಿ ಜಿಲ್ಲೆಯ ರೋಣ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ನರಗುಂದ ತಾಲೂಕುಗಳಲ್ಲಿ ಕೈಗಾರಿಕೆ, ವ್ಯಾಪಾರ ಪ್ರಾರಂಭಿಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ.