ಗದಗ: ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಆಶಯದೊಂದಿಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡು 2021-22ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.

ಶಿಕ್ಷಣ, ಆರೋಗ್ಯ, ರಸ್ತೆ, ನೀರಾವರಿ, ಕೈಗಾರಿಕೆ ಮತ್ತಿತರ ಮೂಲಭೂತ ಸೌಕರ್ಯಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದ್ದು, ರಾಜ್ಯದ ಇತಿಹಾಸದಲ್ಲೇ ಅತ್ಯುತ್ತಮ ಬಜೆಟ್ ಮಂಡಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಮಹಿಳಾ ದಿನದ ಬಜೆಟ್‌ನಲ್ಲಿ ಮಹಿಳೆಯರಿಗೆ ಸಾಕಷ್ಟು ಲಾಭಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌ ಎನ್ನುವ ಹೇಳಿಕೆಯನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಸತ್ಯ ಮಾಡಿತೋರಿಸಿದ್ದಾರೆ. ಎಲ್ಲಾ ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯುವ ಆಶಾದಾಯಕ ಬಜೆಟ್‌ನ್ನು ಮುಖ್ಯಮಂತ್ರಿಗಳು ಮಂಡನೆಯನ್ನು ಮಾಡಿದ್ದಾರೆ. ಮತ್ತು ಪ್ರತಿಬಾರಿಯೂ ಬಜೆಟ್ ಮಂಡನೆಯಾದ ಸಂದರ್ಭದಲ್ಲಿ ಅಬಕಾರಿ ತೆರಿಗೆಗಳು ಸುಂಕ ಇನ್ನಿತರ ತೆರಿಗೆಗಳನ್ನು ಹೆಚ್ಚು ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಪ್ರಪ್ರಥಮ ಬಾರಿ ರಾಜ್ಯದಲ್ಲಿ ಯಾವುದೇ ತೆರಿಗೆಯನ್ನು ಹೆಚ್ಚಳ ಮಾಡದೆ ಅತ್ಯಂತ ಆಶಾದಾಯಕ ಬಜೆಟ್‌ನ್ನು ಮುಖ್ಯಮಂತ್ರಿಗಳು ನೀಡಿರುತ್ತಾರೆ.

 ಇದೇ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಗಾರರನ್ನು ರಕ್ಷಿಸಲು ಮತ್ತುದ್ರಾಕ್ಷಿ ಬೆಳೆಯನ್ನು ಹೆಚ್ಚಿಸುವ ಸಲುವಾಗಿ ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್ ನಾಮಕರಣ ಮಾಡಿ ಅದರ ಸಮಗ್ರಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದು ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಕೆ ಬನ್ಸಾಲಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮೊಟ್ಟೆ ಭಾಗ್ಯ ವಿಸ್ತರಿಸಿ ಬಜೆಟ್ ನಲ್ಲಿ ಘೋಷಿಸಿ- ಸರಕಾರಕ್ಕೆ ಆಗ್ರಹ

ಆಲಮಟ್ಟಿ : 1 ರಿಂದ 10 ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿರುವ ಕ್ಷೀರ ಭಾಗ್ಯದ ಮಾದರಿಯಲ್ಲೇ…

ಟಿಇಟಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ಭಾನುವಾರ ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ…

ಸಂಕ್ರಾಂತಿಯ ಪುಣ್ಯಸ್ನಾನ : ಇಬ್ಬರು ಯುವಕರು ನದಿ ಪಾಲು.

ರಾಯಚೂರು:ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.ಸಂಕ್ರಾಂತಿ ಪೀಡೆ…

ಆದರ್ಶ ವಿದ್ಯಾಲಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ತಾಲೂಕಿನ ಇಟಗಿಯ ಸರಕಾರಿ ಆದರ್ಶ ವಿದ್ಯಾಲಯಕ್ಕೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ದಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು 17.03.2021 ರವರೆಗೆ ವಿಸ್ತರಿಸಲಾಗಿದೆ.