ವಿಜ್ಞಾನ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಮಹಿಳೆಯಲ್ಲಿದೆ : ತಹಶೀಲ್ದಾರ ಭ್ರಮರಾಂಭ

ಲಕ್ಷ್ಮೇಶ್ವರ:  ಮಹಿಳೆಯರಿಗೆ ಎಲ್ಲಾಕ್ಷೇತ್ರದಲ್ಲಿ ಸಮಾನ ಅವಕಾಶ ನೀಡಿ ಅವಳನ್ನು ಸಂಪೂರ್ಣವಾಗಿ ತೊಡಗಿಸಿದ್ದೇ ಆದರೆ ದೇಶದ ಅರ್ಥ ವ್ಯವಸ್ಥೆಯ ಜತೆಗೆ ವಿಜ್ಞಾನ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಅವಳಲ್ಲಿದೆ ಎಂದು ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ ಹೇಳಿದರು.

ಅವರು ಪಟ್ಟಣದ ಕೆಂಚಲಾಪೂರ ಓಣಿಯ ಬನಶಂಕರಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಕೃತಿಕಾಳ 4ನೇ ವರ್ಷದ ಜನ್ಮದಿನಾಚರಣೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ.

ಮಹಿಳೆಗೆ ಸಮಾನವಾದ ಅವಕಾಶ ಕೊಟ್ಟರೆ ಪುರುಷರುತಮ್ಮ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಮನೋಭಾವ ದಿಂದ ಹೆಚ್ಚಿನಅವಕಾಶವನ್ನು ಬಿಟ್ಟುಕೊಡುತ್ತಿಲ್ಲ.ಇಂತಹ ಮನೋಭಾವನೆಯನ್ನು ಇನ್ನು ಮುಂದೆ ಬದಿಗೊತ್ತಿ ಉತ್ತಮ ಅವಕಾಶಗಳನ್ನು ನೀಡಿ ಉತ್ತಮ ಸೇವೆಯನ್ನು ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಸುನೀಯಾ ಮಂಜುನಾಥ ಮಾಗಡಿ, ಜಯಶ್ರೀ ಹೊಸಮನಿ, ಪೂರ್ಣಿಮಾ ಪಾಟೀಲ್, ಜಯಲಕ್ಷ್ಮಿ ಮಹಾಂತಶೆಟ್ಟರ,ಸುನೀತಾ ಬುರಡಿ, ವಿರೇಂದ್ರ ಕುಮಾರ ಕಟಗಿ, ಪ್ರೇಮಾ ಬಡಿಗೇರ, ಲಕ್ಷ್ಮವ್ವ ನಂದೆಣ್ಣವರ, ಮAಜುನಾಥ ಮಾಗಡಿ, ನಾಗರಾಜ ಚಿಂಚಲಿ, ಸಂತೋಷ ಜಾವೂರ, ಸೇರಿದಂತೆ ಇತರರಿದ್ದರು..

Exit mobile version