ಗಜೇಂದ್ರಗಡ: ಪಟ್ಟಣದಲ್ಲಿ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹೊಸ ಭಾಷ್ಯ ಬರೆದಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಹೇಳಿದರು.

ಪಟ್ಟಣದ ಮೈಸೂರ ಮಠದಲ್ಲಿ ನಡೆದ ಕಸಾಪ ಕಾರ್ಯ ಚಟುವಟಿಕೆಗಳ ಸಿಂಹಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ನ ಕರ್ತವ್ಯ ಪಾಲನೆಯ ಜತೆಗೆ ಸಾಮಾಜಿಕ ಚಿಂತನೆ ಏನೆಂಬುದನ್ನು ಗಜೇಂದ್ರಗಡದಲ್ಲಿ ತೋರ್ಪಡಿಸಲಾಗಿದೆ. ಇದಲ್ಲದೇ ರೋಣ, ನರೇಗಲ್, ಹೊಳೆಆಲೂರ, ರಾಜೂರ, ಬೇವಿನಕಟ್ಟಿ ಗ್ರಾಮಗಳಲ್ಲಿಯೂ ಸಹ ಘಟಕಗಳ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ರಾಜ್ಯದಲ್ಲಿ ಹೆಚ್ಚು ಕಾರ್ಯಕ್ರಮ ಆಯೋಜಿಸಿದ ಕೀರ್ತಿ ತಾಲೂಕಿಗೆ ಸಲ್ಲುತ್ತದೆ. ಕಪ್ಪತಗುಡ್ಡ ಉಳಿವಿಗಾಗಿ ಕಸಾಪ ವಿಶೇಷ ಚಿಂತನ ಗೋಷ್ಟಿ ನಡೆಸಿತ್ತು. ಇದಲ್ಲದೇ ಕನ್ನಡ ಉದ್ಯಾನವನ, 23 ವಾರ್ಡಗಳ ಪುರಸಭೆ ಸದಸ್ಯರಿಂದ ಕನ್ನಡ ಧ್ವಜಾರೋಹಣ, ಮನೆ ಅಂಗಳದಲ್ಲಿ ಮಾತುಕತೆ, ಶಾಲೆಗಳಲ್ಲಿ ಸಾಹಿತ್ಯ ಕಲರವ, ಮಹದಾಯಿ ಹೋರಾಟಕ್ಕೆ ಬೆಂಬಲ, ಕೋವಿಡ್ ಸಂದರ್ಭದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಸೇರಿದಂತೆ ನೂರಾರು ವಿಶೇಷ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತನ್ನದೇ ಆದ ಸಾಧನೆ ಗೈದಿದೆ ಎಂದರು.

ಕಳಕಪ್ಪ ಮಳಗಿ, ಶರಣಮ್ಮ ಅಂಗಡಿ, ಬಿ.ಟಿ.ಹೊಸಮನಿ, ನಾಗಪ್ಪ ದಿವಟರ, ಬಿ.ವಿ.ಮುನವಳ್ಳಿ, ಕೆ.ಜಿ.ಸಂಗಟಿ, ಎಸ್.ಎಸ್.ನರೇಗಲ್ಲ, ಎಸ್.ಐ.ಪತ್ತಾರ, ಎಂ.ಎಸ್.ಮಕಾನದಾರ, ಶಂಕರ ಕಲ್ಲಿಗನೂರ, ಎಚ್.ಆರ್.ಭಜಂತ್ರಿ, ವಿ.ಡಿ.ಕರ್ಣಿ, ಎಂ.ಎಸ್. ಅಂಗಡಿ, ಎಂ.ಎನ್. ಕಡಗದ, ಐ.ಆರ್. ಎಲಿಗಾರ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಹೊಸಳ್ಳಿ ಬೂದೀಶ್ವರ ಜಾತ್ರೆ ರದ್ದು

ಮುಳಗುಂದ: ಜೂನ್ 8 ಮತ್ತು 9 ರಂದು ನಡೆಯಬೇಕಿದ್ದ ಗದಗ ತಾಲೂಕಿನ ಹೊಸಳ್ಳಿ ಬೂದೀಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನ ಕೋವಿಡ್-19 ಕಾರಣ ಸರ್ಕಾರದ ಸೂಚನೆಯಂತೆ ರದ್ದುಪಡಿಸಲಾಗಿದೆ. ಭಕ್ತರು ಅಂದು ಮನೆಯಲ್ಲಿಯೇ ಪೂಜಾ ಕೈಂಕರ್ಯ ಮಾಡಿಕೋಳ್ಳಬೇಕು ಎಂದು ಶ್ರೀಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸಂಸ್ಕೃತಿ ಅನುಸರಿಸಿ : ಪ್ರಹ್ಲಾದ ಹೊಸಳ್ಳಿ

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶದ ಧರ್ಮ, ಸಂಸ್ಕೃತಿಯನ್ನು ಅನುಸರಿಸಿ, ಯುವ ಜನತೆ ಒಕ್ಕಟ್ಟಿನಿಂದ ಸಮಾಜಕ್ಕೆ ಗೌರವ ತರುವಂತಹ ಕಾರ್ಯಚಟುವಟಿಕೆಗಳನ್ನು ಮಾಡಬೇಕೆಂದು ತಾಲೂಕ ಪಂಚಾಯತ ಮಾಜಿ ಸದಸ್ಯ ಪ್ರಹ್ಲಾದ ಹೊಸಳ್ಳಿ ಹೇಳಿದರು.

ನಿಡಗುಂದಿಯಲ್ಲಿ ಬಿ.ಇಡಿ.ಪ್ರಶಿಕ್ಷಣಾಥಿ೯ಗಳಿಗೆ ಸ್ವಾಗತ- ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪ

ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ…

ಮುಂಡರಗಿ ಮಿನಿ ವಿಧಾನಸೌಧಕ್ಕೂ ಶುರುವಾಯಿತೆ ಕೊರೊನಾ ಭೀತಿ..!

ಪಟ್ಟಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಮುಂಡರಗಿಯ ಜನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ದಿಂದ ಆತಂಕಕ್ಕೀಡಾಗಿದ್ದಾರೆ. ಆದರೆ ಇಂದು ಪಟ್ಟಣದ ಮಿನಿವಿಧಾನ ಸೌಧ ಕಾರ್ಯಾಲಯ ಗೇಟ್ ಗೆ ಬೀಗ ಹಾಕಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.