ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ವಿದ್ಯಾಥಿಗಳನ್ನು ಅನುಭವಶಾಲಿಗರನ್ನಾಗಿ ಸಂಸ್ಕಾರಯುತ ನಾಗರಿಕರನ್ನಾಗಿ ಪರಿವರ್ತಿಸುತ್ತದೆ ಎಂದು ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ,ಆರ್.ಎಂ.ಬಂಟನೂರ ನುಡಿದರು.

ಪಟ್ಟಣದ ಜಿ.ವ್ಹಿ.ವ್ಹಿ.ಎಸ್.ಶಿಕ್ಷಣ ಮಹಾವಿದ್ಯಾಲಯ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿಗಳ ಒಕ್ಕೂಟ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಇತಿಹಾಸ ಇರುವುದು ಕೇವಲ ಅಂಕಿ ಅಂಶಗಳನ್ನು ನೆನಪಿಡುವದಲ್ಲ ನೀವು ಇತಿಹಾಸವನ್ನು ನಿರ್ಮಿಸುವದಕ್ಕಾಗಿ. ಆತ್ಮ ವಿಶ್ವಾಸವುಳ್ಳವರು ಇತಿಹಾಸವನ್ನು ನಿರ್ಮಿಸುತ್ತಾರೆ.ಗ್ರಂಥಾಲಯವು ಗರ್ಭಗುಡಿ ಯಂತೆ ಅದರ ಸದುಪಯೋಗ ಪಡೆದು ಅಲ್ಲಿರುವ ಅನೇಕ ಪುಸ್ತಕಗಳನ್ನು ಓದಿ ಅನುಭವವನ್ನು ಹೆಚ್ಚಿಸಿ ಗಟ್ಟಗೊಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ,ಅನುಪಮ ನಾಗಠಾಣ ಮಾತನಾಡಿ, ಶಿಸ್ತು ಮತ್ತು ಸಮಯದ ಸದುಪಯೋಗ ಪಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವದರ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.

ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ,ಸವಿತಾ ದೇಸಾಯಿ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರ ಜೀವನವಲ್ಲ ಆದರೆ ಇದು ಕಬ್ಬಿಣದ ಕಡಲೆಯ ಜೀವನ ಏಕೆಂದರೆ ಇಲ್ಲಿ ಯಾರು ಪರಿಶ್ರಮವಹಿಸಿ ತಪಸ್ಸಿನ ರೂಪದಲ್ಲಿ ವಿದ್ಯಾರ್ಜನೆಗೈದು ಯಶಸ್ಸಿಯಾಗುತ್ತಾರೆ ಅವರಿಗೆ ಮುಂದಿನ ಜೀವನ ಬಂಗಾರವಾಗಿಸಿಕೊಳ್ಳಲು ಸಾದ್ಯವೆಂದರು.
ನಂತರ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಾಸ್ತಾವಿಕವಾಗಿ ಪ್ರೊ,ಡಿ.ಕೆ.ತಾಂಬೇಕರ ಮಾತನಾಡಿದರು.ಸವಿತಾ ಗೌಡರ ಪ್ರಾರ್ಥಿಸಿದರು,ಸುಸ್ಮಿತಾ ಢವಳಗಿ ಸ್ವಾಗತಿಸಿದರು.ಪ್ರೊ,ಎ.ಬಿ.ದಳವಾಯಿ.ಪುಷ್ಪಾರ್ಚಣೆ ಮಾಡಿದರು,ಎಸ್.ಆರ್.ಬಿರಾದಾರ ನಿರೂಪಿಸಿದರು.