ಮುಂಡರಗಿ: ಪಟ್ಟಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಮುಂಡರಗಿಯ ಜನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ದಿಂದ ಆತಂಕಕ್ಕೀಡಾಗಿದ್ದಾರೆ. ಆದರೆ ಇಂದು ಪಟ್ಟಣದ ಮಿನಿವಿಧಾನ ಸೌಧ ಕಾರ್ಯಾಲಯ ಗೇಟ್ ಗೆ ಬೀಗ ಹಾಕಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಇಂದು ಸೋಮವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿ ಕೆಲಸಕ್ಕೆ ಬಂದ ಜನ ತಹಶೀಲ್ದಾರ್ ಕಾರ್ಯಾಲಯದ ಗೇಟ್ ಬೀಗ ನೋಡಿ ನಿರಾಶೆಗೊಳಗಾದರು. ಗೇಟ್ ಬಳಿ ಒಬ್ಬ ಸಿಬ್ಬಂಧಿಯನ್ನು ಕೂರಿಸಿ ತುರ್ತು ಕಾರ್ಯದವರನ್ನು ಮಾತ್ರ ಬಿಡಲಾಗುತ್ತಿದೆ. ಬೆಳಿಗ್ಗೆಯಿಂದ ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಕೇವಲ 5 ಜನರನ್ನು ಮಾತ್ರ ಕಚೇರಿ ಕೆಲಸಕ್ಕೆ ಒಳಬಿಡಲಾಗಿತ್ತು. ಈ ಬಗ್ಗೆ ಸ್ವತಃ ಕಚೇರಿ ಸಿಬ್ಬಂಧಿಯೇ ಉತ್ತರಪ್ರಭಕ್ಕೆ ಮಾಹಿತಿ ನೀಡಿದರು.

ಸಿಬ್ಬಂಧಿಗಳು ಎಂದಿನಂತೆ ಕಾರ್ಯಾಲಯದ ಒಳಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಮಿನಿವಿಧಾನ ಸೌಧದಲ್ಲಿ ತಹಶಿಲ್ದಾರ, ಸಬ್ ರಜಿಸ್ಟಾರ, ಸರ್ವೇ ಸೇರಿದಂತೆ ಹಲವು ಕಚೇರಿಗಳಿವೆ. ಜೊತೆಗೆ ಈಗ ಬೆಳೆವಿಮೆ ಪ್ರಕ್ರಿಯೇ ಆರಂಭವಾಗಿದ್ದು ಪಹಣಿಗಾಗಿಯೂ ಸಾಕಷ್ಟು ಜನರು ಬಂದಿದ್ದಾರೆ. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಮುಂಡರಗಿ ಪಟ್ಟಣದಲ್ಲಿ 40 ಕ್ಕೂ ಅಧಿಕ ಕೊರೊನಾ ಪತ್ತೆಯಾದ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಕಚೇರಿಗೆ ಗೇಟ್ ಗೆ ಬೀಗ ಜಡಿದು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

You May Also Like

ಉಗ್ರರಿಂದ ಬಿಜೆಪಿ ನಾಯಕ ವಾಸೀಂ ಹತ್ಯೆ: ತಂದೆ, ಸಹೋದರನೂ ಬಲಿ

ಶ್ರೀನಗರ: ಬುಧವಾರ ರಾತ್ರಿ 9ಕ್ಕೆ ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಶೇಖ್ ವಾಸೀಂ ಬಾರಿ, ಆತನ ತಂದೆ…

ಚೀನಾ – ಭಾರತೀಯ ಸೈನಿಕರ ನಡುವೆ ಸಂಘರ್ಷ – 76 ಸೈನಿಕರಿಗೆ ಗಾಯ!

ಹೊಸದೆಹಲಿ: ಲಡಾಖ್‌ನ ಗಲ್ವಾನ್‌ ಕಣಿವೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ 76…

2 ಅಪರೂಪದ ಆಮೆ ಪತ್ತೆ: ಒಂದು ಹಳದಿ ಬಣ್ಣದ್ದು, ಇನ್ನೊಂದು ಮೃದು ಚಿಪ್ಪಿನದ್ದು!

ಕಪ್ಪು, ದಟ್ಟ ಕಂದು ಬಣ್ಣದ ಆಮೆಗಳನ್ನು ನೋಡಿದ್ದೇವೆ. ಆದರೆ ಒರಿಸ್ಸಾದಲ್ಲೊಂದು ಅಪರೂಪದ ಆಮೆ ಸಿಕ್ಕಿದೆ. ಅದರ ಬಣ್ಣ ಹಳದಿ. ಇಡೀ ದೇಹ, ಚಿಪ್ಪು ಎಲ್ಲವೂ ಸಂಪೂರ್ಣ ಹಳದಿ.