ಗಜೇಂದ್ರಗಡ: ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ಮಾ.8 ರಾಜ್ಯಾದ್ಯಾಂತ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲಿದ್ದು, ನಿರ್ಭಯದಿಂದ ಲಸಿಕೆ ಪಡೆಯಲು ಮುಂದಾಗಿ ಎಂದು ವೈದ್ಯಾಧಿಕಾರಿ ಅಶ್ವಿನಿ ಕೊಪ್ಪದ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕಾ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಎರಡು ಹಂತದ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದೀಗ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ 60 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಮತ್ತು 45 ವರ್ಷ ಮೇಲ್ಪಟ್ಟವರು ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ಬಳಲುವವರು ಕೋವಿಡ್ ರೋಗದ ವಿರುದ್ದ ಲಸಿಕೆ ಪಡೆದು ಸುರಕ್ಷಿತವಾಗಿರಬಹುದಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಾ.8 ರಿಂದ ಲಸಿಕೆ ನೀಡಲಾಗುವುದು ಎಂದರು.

ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ.ಹಾದಿಮನಿ ಮಾತನಾಡಿ, ಸರ್ಕಾರದ ಮಾರ್ಗ ಸೂಚಿಯಂತೆ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಲಸಿಕೆಯನ್ನು ಪ್ರಾರಂಭಿಸಲಾಗುವುದು. ಸಾರ್ವಜನಿಕರು ಕೋವಿಡ್ ಫೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ನೇರವಾಗಿ ಸರಕಾರಿ ಆಸ್ಪತ್ರಗೆ ಬಂದು ಲಸಿಕೆ ಪಡೆಯಬಹುದು. ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಆಗಮಿಸಬೇಕು. ವ್ಯಕ್ತಿಯನ್ನು ಪರಿಶಿಲನೆ ಮಾಡಿದ ನಂತರ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಿದ ಬಳಿಕ ಅಡ್ಡ ಪರಿಣಾಮ ಆಗದಂತೆ ನಿಗಾವಣೆ ಇರಿಸಲಾಗುವುದು ಎಂದರು.

Leave a Reply

Your email address will not be published. Required fields are marked *

You May Also Like

ಗದಗ ಜಿಮ್ಸ್ ಯಡವಟ್ಟು : ಕೊರೊನಾ ಸೋಂಕಿತರ ಲೀಸ್ಟ್ ಲೀಕ್ ಔಟ್…?

ಕೊರೊನಾ ಗೈಡ್ ಲೈನ್ ಪ್ರಕಾರ ಸೋಂಕಿತರ ಹೆಸರನ್ನು ಬಹಿರಂಗಗೊಳಿಸಬಾರದು. ಆದರೆ ಇಂದು ಬೆಳಿಗ್ಗೆಯಿಂದಲೇ ಸೋಂಕಿತರ ಹೆಸರು ಇರುವ ಲೀಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಂಗಭೂಮಿ ಕ್ಷೇತ್ರ: ಗದಗಿನ ಸಾವಿತ್ರಿ ಗೌಡರ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ

ಉತ್ತರಪ್ರಭ ಸುದ್ದಿಬೆಂಗಳೂರು: ಕರ್ನಾಟಕ ಸರ್ಕಾರ 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. 66…

ಕನಕ ದುರ್ಗಾದೇವಿಯ ರಥೋತ್ಸವ

ಸಮೀಪದ ಕೊಡಗಾನೂರ ಗ್ರಾಮದಲ್ಲಿ ಆದಿ ದೇವತೆ ಕನಕ ದುರ್ಗಾದೇವಿಯ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.