ನಾಡಿನ ಸಂಸ್ಕೃತಿ ಉಳಿಸಿ ಬೆಳಸುವಲ್ಲಿ ಕಸಾಪ ಮಹತ್ವ ಪಾತ್ರ ಹೊಂದಿದೆ

ಗಜೇಂದ್ರಗಡ: ಪಟ್ಟಣದಲ್ಲಿ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹೊಸ ಭಾಷ್ಯ ಬರೆದಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಹೇಳಿದರು.

ಪಟ್ಟಣದ ಮೈಸೂರ ಮಠದಲ್ಲಿ ನಡೆದ ಕಸಾಪ ಕಾರ್ಯ ಚಟುವಟಿಕೆಗಳ ಸಿಂಹಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ನ ಕರ್ತವ್ಯ ಪಾಲನೆಯ ಜತೆಗೆ ಸಾಮಾಜಿಕ ಚಿಂತನೆ ಏನೆಂಬುದನ್ನು ಗಜೇಂದ್ರಗಡದಲ್ಲಿ ತೋರ್ಪಡಿಸಲಾಗಿದೆ. ಇದಲ್ಲದೇ ರೋಣ, ನರೇಗಲ್, ಹೊಳೆಆಲೂರ, ರಾಜೂರ, ಬೇವಿನಕಟ್ಟಿ ಗ್ರಾಮಗಳಲ್ಲಿಯೂ ಸಹ ಘಟಕಗಳ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ರಾಜ್ಯದಲ್ಲಿ ಹೆಚ್ಚು ಕಾರ್ಯಕ್ರಮ ಆಯೋಜಿಸಿದ ಕೀರ್ತಿ ತಾಲೂಕಿಗೆ ಸಲ್ಲುತ್ತದೆ. ಕಪ್ಪತಗುಡ್ಡ ಉಳಿವಿಗಾಗಿ ಕಸಾಪ ವಿಶೇಷ ಚಿಂತನ ಗೋಷ್ಟಿ ನಡೆಸಿತ್ತು. ಇದಲ್ಲದೇ ಕನ್ನಡ ಉದ್ಯಾನವನ, 23 ವಾರ್ಡಗಳ ಪುರಸಭೆ ಸದಸ್ಯರಿಂದ ಕನ್ನಡ ಧ್ವಜಾರೋಹಣ, ಮನೆ ಅಂಗಳದಲ್ಲಿ ಮಾತುಕತೆ, ಶಾಲೆಗಳಲ್ಲಿ ಸಾಹಿತ್ಯ ಕಲರವ, ಮಹದಾಯಿ ಹೋರಾಟಕ್ಕೆ ಬೆಂಬಲ, ಕೋವಿಡ್ ಸಂದರ್ಭದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಸೇರಿದಂತೆ ನೂರಾರು ವಿಶೇಷ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತನ್ನದೇ ಆದ ಸಾಧನೆ ಗೈದಿದೆ ಎಂದರು.

ಕಳಕಪ್ಪ ಮಳಗಿ, ಶರಣಮ್ಮ ಅಂಗಡಿ, ಬಿ.ಟಿ.ಹೊಸಮನಿ, ನಾಗಪ್ಪ ದಿವಟರ, ಬಿ.ವಿ.ಮುನವಳ್ಳಿ, ಕೆ.ಜಿ.ಸಂಗಟಿ, ಎಸ್.ಎಸ್.ನರೇಗಲ್ಲ, ಎಸ್.ಐ.ಪತ್ತಾರ, ಎಂ.ಎಸ್.ಮಕಾನದಾರ, ಶಂಕರ ಕಲ್ಲಿಗನೂರ, ಎಚ್.ಆರ್.ಭಜಂತ್ರಿ, ವಿ.ಡಿ.ಕರ್ಣಿ, ಎಂ.ಎಸ್. ಅಂಗಡಿ, ಎಂ.ಎನ್. ಕಡಗದ, ಐ.ಆರ್. ಎಲಿಗಾರ ಮುಂತಾದವರು ಪಾಲ್ಗೊಂಡಿದ್ದರು.

Exit mobile version